ಹೈ.ಕ.ವಿಮೋಚನೆ ಹೋರಾಟಗಾರರ ಸ್ಮರಣೆ ಅತ್ಯಗತ್ಯ - ಲಿಂಗಣ್ಣ ಪಡಶೆಟ್ಟಿ.
ಹೈ.ಕ.ವಿಮೋಚನೆ ಹೋರಾಟಗಾರರ ಸ್ಮರಣೆ ಅತ್ಯಗತ್ಯ - ಲಿಂಗಣ್ಣ ಪಡಶೆಟ್ಟಿ.
ಶಹಾಪುರ : ಅಂದು ಹೈದರಾಬಾದ್ ಕರ್ನಾಟಕ ವಿಮೋಚನೆಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿ ಈ ನಾಡಿಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಹೋರಾಟಗಾರರ ಸ್ಮರಣೆ ಅತ್ಯಗತ್ಯ ಎಂದು ಹಿರಿಯ ಸಾಹಿತಿ ಲಿಂಗಣ್ಣ ಪಡಶೆಟ್ಟಿ ಹೇಳಿದರು.
ತಾಲೂಕಿನ ಸಗರ ಗ್ರಾಮದ ಕಲ್ಯಾಣ ಕರ್ನಾಟಕ ಉತ್ಸವ ಸಮಿತಿ ವತಿಯಿಂದ ಚಾವಡಿಕಟ್ಟೆಯಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸಗರದ ಅಚ್ಚಪ್ಪಗೌಡ ಸುಬೇದಾರ ಸ್ಮರಣಾರ್ಥವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು,ಹಿರಿಯ ಹೋರಾಟಗಾರರ ತತ್ವ ಆದರ್ಶಗಳು ಇಂದಿನ ಯುವ ಸಮೂಹಕ್ಕೆ ಮುಟ್ಟಿಸುವ ಕೆಲಸ ಇನ್ನೂ ಹೆಚ್ಚಿಗೆ ಆಗಬೇಕಾಗಿದೆ ಎಂದು ನುಡಿದರು.
ಹೈದ್ರಾಬಾದ್ ಕರ್ನಾಟಕ ವಿಮೋಚನ ಹೋರಾಟಗಾರರು ಹಾಗೂ ನಮ್ಮ ತಂದೆಯವರಾದ ಅಚ್ಚಪ್ಪಗೌಡ ಸುಬೇದಾರ ಅವರ ಹೆಸರಿನಲ್ಲಿ ಇನ್ನಷ್ಟು ಜನಕಲ್ಯಾಣ ಹಾಗೂ ಸಮಾಜಮುಖಿ ಕಾರ್ಯಗಳು ಹಮ್ಮಿಕೊಳ್ಳುವುದರ ಜೊತೆಗೆ ಅವರ ಹೆಸರು ಸದಾಕಾಲ ಉಳಿಯುವಂತೆ ಮಾಡುತ್ತೇವೆ, ಅಲ್ಲದೆ ಜಿಲ್ಲಾಡಳಿತ ಪುಸ್ಥಳಿ ಅನಾವರಣಕ್ಕೆ ಮುಂದಾದರೆ ಖಂಡಿತವಾಗಿಯೂ ನಾವು ಸಹಾಯ ಸಹಕಾರ ನೀಡುತ್ತೇವೆ ಎಂದು ಕರ್ನಾಟಕ ಉತ್ಸವ ಸಮಿತಿಯ ಉಪಾಧ್ಯಕ್ಷರಾದ ಡಾ. ಚಂದ್ರಶೇಖರ್ ಸುಬೇದಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಯುವ ಸಾಹಿತಿ ಬಸವರಾಜ ಶಿಣ್ಣೂರ ಮಾತನಾಡಿ ಸ್ವಾತಂತ್ರ್ಯ ಹೋರಾಟಗಾರ ಸಗರ ಅಪ್ಪಚಪ್ಪಗೌಡ ಸುಬೇದಾರರ ಬದುಕು ಬರಹ ಹೋರಾಟದ ಕುರಿತು ಶಾಲಾ ಪಠ್ಯಗಳಲ್ಲಿ ಸೇರ್ಪಡೆ ಮಾಡಬೇಕು ಜೊತೆಗೆ ನಗರದ ಪ್ರಮುಖ ಸ್ಥಳಗಳಲ್ಲಿ ಪುಸ್ಥಳಿ ಅನಾವರಣಗೊಳಿಸಬೇಕು ಎಂದು ಈ ಮೂಲಕ ರಾಜ್ಯ ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಒತ್ತಾಯಿಸಲಾಯಿಸಿದರು.
ಈ ಸಂದರ್ಭದಲ್ಲಿ ನಾಗನಗೌಡ ಸುಬೇದಾರ,ಸುಭಾಷಗೌಡ ಸುಬೇದಾರ,ಮಹಾಂತಗೌಡ ಸುಬೇದಾರ,ರಾಮರಾವ್ ಕುಲಕರ್ಣಿ,ಮಲ್ಲಣ್ಣ ವಮ್ಮ,ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್ ಸಿದ್ರಾ, ಅಮೀನರೆಡ್ಡಿ ಮಲ್ಲೇದ,ಸಾಯಬಣ್ಣ ಜಾಯಿ,ಡಾ:ಡಿ.ಜಿ.ಹಡಪದ, ಪ್ರಕಾಶ್ ಪಡಶೆಟ್ಟಿ,ಭೀಮಣ್ಣ ಮಕಾಶಿ,ಸೇರಿದಂತೆ ಹಲವರು ಉಪಸ್ಥಿತರಿದ್ದರು.ಅಚ್ಚಪ್ಪಗೌಡ ಸುಬೇದಾರ ಅವರ ಕೊನೆಯ ಸುಪುತ್ರರಿಯಾದ ದಿ.ಸುಜಾತ ಸುಬೇದಾರ ಅವರ ಸ್ಮರಣಾರ್ಥವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಗರದ ಕರ್ನಾಟಕ ಪಬ್ಲಿಕ್ ಶಾಲೆ 10ನೇ ತರಗತಿಯಲ್ಲಿ ಅಭ್ಯಾಸ ಮಾಡಿ ಅತಿ ಹೆಚ್ಚು ಅಂಕ ಪಡೆದ ಇಬ್ಬರು ವಿದ್ಯಾರ್ಥಿನಿಯರಿಗೆ ಸೂಕ್ತ ಬಹುಮಾನದ ಜೊತೆಗೆ ಪ್ರಮಾಣ ಪತ್ರ ವಿತರಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಸಂಗೀತ ಶಿಕ್ಷಕರಾದ ಜಗನ್ನಾಥ್ ಹಾಗೂ ವಿದ್ಯಾರ್ಥಿನಿಯರಿಂದ ಸಂಗೀತ ಕಾರ್ಯಕ್ರಮಗಳು ಜರುಗಿದವು, ಶರಣಪ್ಪ ನಾಗಲೋಟ ನಿರೂಪಿಸಿ ಶರಣಗೌಡ ಪೊಲೀಸ್ ಪಾಟೀಲ್ ಪ್ರಾರ್ಥಿಸಿದರು, ಭೀಮಣ್ಣ ಹೂಗಾರ ವಂದಸಿದರು.