ಜಾತಿ ಗಣತಿಯಲ್ಲಿ ಲಿಂಗಾಯತರಿಗೆ ಅನ್ಯಾಯ : ಸಂಗಮೇಶ ಎನ್ ಜವಾದಿ.

.ಜಾತಿ ಗಣತಿಯಲ್ಲಿ ಲಿಂಗಾಯತರಿಗೆ ಅನ್ಯಾಯ : ಸಂಗಮೇಶ ಎನ್ ಜವಾದಿ.
ಬೀದರ/ ಚಿಟಗುಪ್ಪಾ:ಜಾತಿಗಣತಿ ದೋಷಪೂರಿತದಿಂದ ಕೂಡಿದೆ ಎಂದು ವರದಿಯಾಗಿದೆ. ವರದಿಯಲ್ಲಿ ಬಹುಸಂಖ್ಯಾತ ಲಿಂಗಾಯತ ಧರ್ಮದವರಿಗೆ ಅನ್ಯಾಯವಾಗಿದೆ ಎಂದು ಸಾಹಿತಿ, ಪ್ರಗತಿಪರ ಚಿಂತಕರಾದ ಸಂಗಮೇಶ ಎನ್ ಜವಾದಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಸರ್ಕಾರ ಇನ್ನೊಮ್ಮೆ ಸಮೀಕ್ಷೆ ಮಾಡಿಸಬೇಕು. ಮತ್ತೊಮ್ಮೆ ಜಾತಿಗಣತಿ ವರದಿ ಸಿದ್ಧಪಡಿಸಬೇಕು ಎಂದು ಸರ್ಕಾರಕ್ಕೆ ಸಂಗಮೇಶ ಎನ್ ಜವಾದಿಯವರು ಒತ್ತಾಯಿಸಿದರು. ಜಾತಿಗಣತಿಯ ವರದಿ ಜನಸಾಮಾನ್ಯರಲ್ಲಿ ಸಂಶಯ ಹುಟ್ಟುಹಾಕಿದೆ. ಸುಮಾರು ಏಳೆಂಟು ವರ್ಷಗಳ ಹಿಂದೆ ಜಾತಿಗಣತಿ ಸಿದ್ಧಪಡಿಸಿದ್ದಾರೆ. ಆ ಜಾತಿ ಜನಗಣತಿ ವರದಿ ಸಮರ್ಪಕವಾಗಿ ಇಲ್ಲ. ಆ ವರದಿಯನ್ನು ಸಿದ್ಧಪಡಿಸಿದ ವ್ಯಕ್ತಿಗಳು ಕರ್ನಾಟಕ ಪ್ರತಿಯೊಬ್ಬ ವ್ಯಕ್ತಿಯನ್ನು ಸಂಪರ್ಕಿಸಿಲ್ಲವೆಂಬ ಆರೋಪವಿದೆ. ಕಾರಣ ಕೂಡಲೇ ಈ ವರದಿಯ ಸತ್ಯಾಂಶವನ್ನು ಅರಿಯಲು ಆದಷ್ಟು ಬೇಗನೆ ನಾಡಿನಾದ್ಯಂತ ಮನೆ ಮನೆಗಳಿಗೆ ತೆರಳಿ ಪುನಃ ಜಾತಿ ಗಣತಿ ನಡೆಸಬೇಕು. ಸತ್ಯಾಂಶವನ್ನು ನಾಡಿನ ಜನರಿಗೆ ತಿಳಿಸಬೇಕು ಎಂದು ಹೇಳಿದರು.