ವೈದ್ಯರಿಲ್ಲದ ಸಗರ ಸಾರ್ವಜನಿಕ ಆಸ್ಪತ್ರೆ

ವೈದ್ಯರಿಲ್ಲದ ಸಗರ ಸಾರ್ವಜನಿಕ ಆಸ್ಪತ್ರೆ

ವೈದ್ಯರಿಲ್ಲದ ಸಗರ ಸಾರ್ವಜನಿಕ ಆಸ್ಪತ್ರೆ

ಶಹಪುರ : ತಾಲೂಕಿನ ಸಗರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ರೋಗಿಗಳು ಪರದಾಡುವಂಥಾಗಿದೆ,ಎಂದು ಗ್ರಾಮದ ಬಿಜೆಪಿ ಯುವ ಮುಖಂಡ ಚಂದ್ರಶೇಖರ ಬಸ್ಸಾನೂರಆರೋಪಿಸಿದ್ದಾರೆ.

ಸಗರ ಬಹು ದೊಡ್ಡ ಗ್ರಾಮವಾಗಿದ್ದು ಈ ಗ್ರಾಮದ ಸುತ್ತಮುತ್ತಲು ಹತ್ತಾರು ಹಳ್ಳಿಗಳು ಬರುತ್ತವೆ.ಇಲ್ಲಿ ರೋಗಿಗಳು ವೈದ್ಯರನ್ನು ಹುಡುಕಿಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದರೆ ಒಬ್ಬರು ವೈದ್ಯರಿಲ್ಲದೆ.ಇಲ್ಲಿ ರೋಗಿಗಳು ಸಾಕ್ಷರ ಸಹ ನರಕ ಯಾತನೆ ಅನುಭವಿಸುವಂತಾಗಿದೆ.ಈ ಸಮಸ್ಯೆಗಳ ಕುರಿತು ಡಿ.ಎಚ್.ಓ ಅವರಿಗೆ ಫೋನ್ ಮೂಲಕ ಸಂಪರ್ಕಿಸಿದರು ಸಂಪರ್ಕಕ್ಕೆ ಸಿಗಲಿಲ್ಲ. 

ಗ್ರಾಮೀಣ ಭಾಗದ ಬಡ ರೋಗಿಗಳಿಗೆ ಸರಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸುಸಜ್ಜಿತವಾದ ಕಟ್ಟಡ ನಿರ್ಮಿಸಿದೆ ಅಲ್ಲದೆ ಸಿಬ್ಬಂದಿಗಳು ನೇಮಕ ಮಾಡಿದರು ಪ್ರಯೋಜನ ಆಗುತ್ತಿಲ್ಲ,ಸಿಬ್ಬಂದಿಗಳು ಕೇವಲ ಬೆಳಗ್ಗೆ ಬಂದು ಸಹಿ ಮಾಡಿ ಚಕ್ಕರ್ ಹೊಡೆಯುತ್ತಾರೆ.ತಾಲೂಕು ಆರೋಗ್ಯ ಅಧಿಕಾರಿಗಳು ಗಾಢ ನಿದ್ರೆಯಲ್ಲಿದ್ದಾರೆ ಎಂದು ಆರೋಪಿಸಿದರು.

ಕೆಲಸಕ್ಕೆ ಹಾಜರಾಗದ ಸಿಬ್ಬಂದಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಅವರು ಅವರನ್ನು ಕೆಲಸದಿಂದ ಅಮಾನತುಗೊಳಿಸಬೇಕು,ಸೂಕ್ತ ತಜ್ಞ ವೈದ್ಯರನ್ನು ಕೂಡಲೇ ನೇಮಿಸಬೇಕು,ಇಲ್ಲದಿದ್ದರೆ ಆಸ್ಪತ್ರೆಗೆ ಬೀಗ ಜಡೆದು ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.