ವಾಡಿ ಬಿಜೆಪಿ ಕಛೇರಿಯಲ್ಲಿ ಮನ್ ಕಿ ಬಾತ್ ವೀಕ್ಷಣೆ
ವಾಡಿ ಬಿಜೆಪಿ ಕಛೇರಿಯಲ್ಲಿ ಮನ್ ಕಿ ಬಾತ್ ವೀಕ್ಷಣೆ
ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ರೇಡಿಯೊ ಕಾರ್ಯಕ್ರಮದ ‘ಮನ್ ಕಿ ಬಾತ್’ನ 131ನೇ ಸಂಚಿಕೆಯನ್ನು ಮುಖಂಡರು ವೀಕ್ಷಿಸಿದರು.
ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮೋದಿಜಿ ಅವರು ಕರ್ನಾಟಕ ಮತ್ತು ಒಡಿಶಾ ರಾಜ್ಯಗಳ ಕೃಷಿ ಪ್ರಯತ್ನಗಳನ್ನು ಉದಾಹರಣೆಯಾಗಿ ಉಲ್ಲೇಖಿಸಿ “ಭಾರತದ ರೈತರು ಕೇವಲ ಅನ್ನದಾತರಲ್ಲ, ಭೂಮಿಯ ನಿಜವಾದ ಭಕ್ತರು. ಮಣ್ಣನ್ನು ಚಿನ್ನವಾಗಿಸುವ ಕಲೆಯನ್ನು ರೈತರಿಂದಲೇ ಕಲಿಯಬೇಕು” ಎಂದು ಹೇಳಿದ್ದನ್ನು ಪ್ರಶಂಸಿಸಿ ರೈತರ ಕಾಳಜಿ ಯ ಜೊತೆಗೆ ಅವರ ಪಾಂಡಿತ್ಯದ ಬಗ್ಗೆ ವಿವರಿಸದನ್ನು ಚರ್ಚಿಸಿದರು.
ಈ ಸಂಧರ್ಭದಲ್ಲಿ ಯುವ ಮುಖಂಡ ವಿಠಲ ನಾಯಕ,ಅಶೋಕ ಪವಾರ, ವಿನೋದ ಕಾನಕುರ್ತೆ,ವಿಶ್ವನಾಥ ಬಳವಡಗಿ ಸೇರಿದಂತೆ ಇತರರು ಇದ್ದರು.
