“ಬೆಳ್ಳಿ ಮೋಡದ ಬೆಳಕು” ಮಕ್ಕಳ ಕವನ ಸಂಕಲನದ ಪುಸ್ತಕ ಪರಿಚಯ ಕಾರ್ಯಕ್ರಮ ನಡೆಯಿತು
“ಬೆಳ್ಳಿ ಮೋಡದ ಬೆಳಕು” ಮಕ್ಕಳ ಕವನ ಸಂಕಲನದ ಪುಸ್ತಕ ಪರಿಚಯ ಕಾರ್ಯಕ್ರಮ ನಡೆಯಿತು
ಕಲಬುರಗಿ: ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ನಿಯಮಿತ, ಕಲಬುರಗಿ ಇವರ ವತಿಯಿಂದ 15.11.2025 ರಂದು ಸಾಹಿತಿಗಳಾದ ಶ್ರೀಮತಿ ಅರುಣಾ ನರೇಂದ್ರ ಅವರು ರಚಿಸಿದ *“ಬೆಳ್ಳಿ ಮೋಡದ ಬೆಳಕು”* ಎಂಬ ಮಕ್ಕಳ ಕವನ ಸಂಕಲನದ ಪುಸ್ತಕ ಪರಿಚಯ ಕಾರ್ಯಕ್ರಮವನ್ನು ಸಂಘದ ಕಾರ್ಯಾಲಯದಲ್ಲಿ ಆಯೋಜಿಸಲಾಯಿತು.
ಕಾಳಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಶಿವಶರಣಪ್ಪ ಮೋತಕಪಳ್ಳಿ ಅವರು ಪುಸ್ತಕದ ಅವಲೋಕನ ಮಾಡಿ ಮಾತನಾಡಿ, “ಈ ಪುಸ್ತಕವು ಮೌಲಿಕ ಕೃತಿಯಾಗಿದೆ. ಮಕ್ಕಳ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಕಾವ್ಯ ರಚಿಸುವುದು ಸವಾಲಿನ ಕೆಲಸ. ಈ ಸಂಕಲನದಲ್ಲಿ ಒಟ್ಟು 85 ಕವನಗಳು ಸೇರಿದ್ದು, ಮಕ್ಕಳಿಗೆ ರಂಜನೆ, ಹಾಸ್ಯ, ವಿನೋದ ಹಾಗೂ ನೀತಿಯಿಂದ ಕೂಡಿದ ಸಂದೇಶಗಳನ್ನು ಸುಲಭವಾಗಿ ತಲುಪಿಸುವ ಕಾವ್ಯಗಳು ಇದರಲ್ಲಿ ಅಡಕವಾಗಿವೆ,” ಎಂದು ಪ್ರಶಂಸಿಸಿದರು.
ನಂತರ ಡಾ. ಗವಿಸಿದ್ಧ ಪಾಟೀಲ ಮತ್ತು ಡಾ. ಸಿದ್ಧರಾಮ ಹೊನ್ಕಲ್ ಅವರು ಪುಸ್ತಕ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಡಾ. ಆರ್.ಕೆ. ಹುಡಗಿ, ಪ. ಮನುಸಾಗರ, ಡಾ. ವಾಸುದೇವ ಸೆಡಂ, ಎಸ್.ಕೆ. ಕುಲಕರ್ಣಿ, ಡಾ. ಮಲ್ಲಿನಾಥ ತಳವಾರ, ಶ್ರೀರೇವಣಸಿದ್ಧಪ್ಪ ದುಕಾನ, ಡಾ. ಶರಣಬಸಪ್ಪ ವಡ್ಡನಕೇರಿ, ಡಾ. ರಾಜಕುಮಾರ ಮಾಳಗೆ, ಡಾ. ಜಯದೇವಿ ಗಾಯಕವಾಡ, ಎಸ್.ವಿ. ಹತ್ತಿ, ಸಾಹಿತಿ ವಿಶ್ವನಾಥ ಭಕರೆ, ಡಾ. ಸಿದ್ಧಪ್ಪ ಹೊಸಮನಿ ಹಾಗೂ ಶ್ರೀ ಸುರೇಶ್ ಪಾಟೀಲ ಉಪಸ್ಥಿತರಿದ್ದರು.
ಶ್ರೀ ಅಪ್ಪಾರಾವ ಅಕ್ಕೋಣೆ ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ. ವಿಜಯಕುಮಾರ ಪರುತೆ ಕಾರ್ಯಕ್ರಮವನ್ನು ನಿರೂಪಿಸಿದರು.
