ಸಿದ್ದಣಗೌಡ ಮಾಲಿ ಪಾಟೀಲ ಕಡಣಿ
ಸಿದ್ದಣಗೌಡ ಮಾಲಿ ಪಾಟೀಲ ಕಡಣಿ ಸಾಧನೆ ಕುರಿತು
ಇವರು ಮೂಲತ ಕಲಬುರಗಿ ಜಿಲ್ಲೆಯ ಕಡಣಿ ಗ್ರಾಮದ ತಂದೆ ಕಲ್ಯಾಣರಾವ ಮಾಲಿ ಪಾಟೀಲ ತಾಯಿ ಶಿವಕಾಂತಮ್ಮ ಅವರ ಉದರದಲ್ಲಿ ದಿನಾಂಕ 25-7-1970 ಜನಿಸಿದರು.
ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ ಓದಿ ಪ್ರೌಢ ಮತ್ತು ಪದವಿ ಶಿಕ್ಷಣವನ್ನು ಕಲ್ಬುರ್ಗಿ ನಗರದ ಆರಾಧ್ಯ ದೈವ ಶ್ರೀ ಶರಣ ಬಸವೇಶ್ವರ ಸಂಸ್ಥಾನ ಅಡಿಯಲ್ಲಿನ ಶರಣಬಸವೇಶ್ವರ ಮಹಾವಿದ್ಯಾಲಯದಲ್ಲಿ ಓದು ಮುಗಿಸಿ , ತಾಂತ್ರಿಕ ವಿದ್ಯೆಯನ್ನು ಚಿತಾಪುರ ನಗರದ ನಾಗಾವಿ ಶಿಕ್ಷಣ ಸಂಸ್ಥೆಯಲ್ಲಿ ಪೂರೈಸಿದರು.
ರೈತ ಕುಟುಂಬದಲ್ಲಿ ಜನಿಸಿದ ಇವರು ವಿದ್ಯೆ ಅಭ್ಯಾಸದ ನಂತರ ತಂದೆಯವರ ಕಾಯಕವಾದ ಕೃಷಿಯಲ್ಲಿ ತೊಡಗಿಸ್ಕೊಂಡು ಪ್ರಗತಿಪರ ರೈತರಾಗಿ ಹೊರಹೊಮ್ಮಿದರು.
ಮಾಲಿ ಪಾಟೀಲರು ಆಳಂದ್ ತಾಲೂಕಿನ ಲಿಂಗದಹಳ್ಳಿ ಗ್ರಾಮದ ಭೀಮರಾವ್ ಪಾಟೀಲ್ ಮತ್ತು ಭೀಮಬಾಯಿ ದಂಪತಿಗಳ ಕೊನೆ ಪುತ್ರಿ ಯಾದ ಶ್ರೀಮತಿ ಮಹಾದೇವಿ ಅವರೊಂದಿಗೆ 2001 ರಲ್ಲಿ ವಿವಾಹವಾದರು , ಇವರಿಗೆ ಲಿಂಗರಾಜ್ ಹಾಗೂ ಪೃಥ್ವಿರಾಜ್ ಮಕ್ಕಳಿದ್ದಾರೆ .
ಇವರು ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಜೊತೆಗೆ ಪತ್ರಿಕಾ ರಂಗ ಅಭಿರುಚಿ ಕ್ಷೇತ್ರ ಇವರದಾಗಿದ್ದು ,ಗುರು ಉಪದೇಶ ಕನ್ನಡ ಮಾಸಪತ್ರಿಕೆ ಸಾರಥ್ಯ ವಹಿಸಿಕೊಂಡು, ಇವರು ಪತ್ರಿಕಾ ರಂಗದಲ್ಲಿ ಬೆಳಗುತ್ತಿದ್ದಾರೆ. ಆಸೆ ಬೆನ್ನೇರಿ ಹೊತ್ತಿಗೆ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿಯು ಕೃಷಿ ಮಾಡಿದ್ದಾರೆ.ಇನ್ನು ವೀರಶೈವ ಧರ್ಮದ ಕುರಿತು ಶಿವ ಸಂಸ್ಕೃತಿ ಎನ್ನುವ ಗ್ರಂಥ ಅಚ್ಚಿಗೆ ಸಿದ್ಧವಾಗಿದೆ . ಇವರು ಕವಿತೆ ರಚಿಸುವುದು ಅಲ್ಪ ಪ್ರಮಾಣ ಆದರೂ ಆಲಿಸಿರುವದು ಅಪಾರ.
ಪ್ರವೃತಿ ಅಕ್ಷರ ಲೋಕವಾದರೆ ವೃತ್ತಿ ಇಂಜಿನಿಯರ್ ಎರಡನ್ನು ಸಮ ಸಮವಾಗಿ ಸ್ವೀಕರಿಸಿ ತೃಪ್ತಿದಾಯಕ ಬದುಕು ಕಟ್ಟಿಕೊಂಡಿದ್ದಾರೆ. ಇದರ ಜೊತೆಗೆ ಕಡಣಿ ಗ್ರಾಮದ ಆರಾಧ್ಯ ದೈವ ಶ್ರೀ ಶಂಕರಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ .2003 ರಲ್ಲಿ ಶ್ರೀ ಮೈಲಾರಲಿಂಗೇಶ್ವರ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಅಕ್ಷರ ದಾಸೋಹ ಮಾಡುವ ಮೂಲಕ ಅವರ ಶೈಕ್ಷಣಿಕ ಪ್ರೇಮವನ್ನು ತೋರಿದ್ದಾರೆ ಗುಡ್ಡದ ಮಹಾಂತನ ಆಶೀರ್ವಾದದಿಂದ ಮತ್ತು ಶ್ರೀ ಷ.ಬ್ರ. ಸಿದ್ದರಾಮ ಶಿವಾಚಾರ್ಯರ ಮಾರ್ಗದರ್ಶನ ಅಡಿಯಲ್ಲಿ ನಡೆಯುತ್ತಿದ್ದಾರೆ .
ಇವರ ಸೇವೆಯನ್ನು ಮೆಚ್ಚಿ ಜಗದ್ಗುರು ರಂಭಾಪುರಿ ಪೀಠ ಹಾಗೂ ಉಜ್ಜೈನಿ ಉಭಯ ಪೀಠಗಳಿಂದ ಗುರು ಸೇವಾ ದುರಿಣ ಪ್ರಶಸ್ತಿ, ಸಂದಿವೆ