ಕಣ್ಣಲ್ಲಿ ಮತ್ತೆ ನೀರು

ಕಣ್ಣಲ್ಲಿ ಮತ್ತೆ ನೀರು
ಹೊಲವು ಹದ ಮಾಡಿ
ಬಿತ್ತಿದ ಬೆಳೆ ನೋಡಿ
ಹಿಗ್ಗಿನಿಂದ ಕುಣಿದು
ನೂರೊಂದು ಆಸೆ ಕಟ್ಟಿಕೊಂಡು
ಬದುಕುವ ಬಡ ರೈತ ನಾನು!
ಬೆಳೆಸಿದ ಬೆಳೆಗಳೆಲ್ಲ
ಮಳೆ ಬಂದು ಹರಿದು ಹೋಗಿತಲ್ಲ
ಮಳೆಯ ಆರ್ಭಟದಿಂದ ಬೆಳೆಗಳೆಲ್ಲ
ನೀರು ಪಾಲಾಗಿತಲ್ಲ!
ಎಡೆಬಿಡದೆ ಸುರಿದ ಮಳೆಯಿಂದ
ಉದ್ದು ಹೆಸರು ತೊಗರಿ ಬೆಳೆ
ಕಟಾವಿಗೆ ಬಂದ ಸೊಯಾಬಿನ್ ಮೊಳಕೆ ಒಡೆದು ಹೋಗಿದವಲ್ಲ !
ಇಳುವರಿ ಇಲ್ಲದ ನಮ್ಮ ಬದುಕು
ಬರ್ಬಾದ ಆಗಿತ್ತಲ್ಲ!
ಕೈಗೆ ಬಂದ ತುತ್ತು
ಬಾಯಿಗೆ ಬಾರದಂತಾಗಿ
ಕಷ್ಟ-ನಷ್ಟಗಳ ಅನುಭ ಉಂಡು ಜೀವವಿರುವ ಬದುಕು
ದುಡಿಮೆಗೆ ದುಡ್ಡಿಲ್ಲದ ನಮ್ಮ ಜಿಂದಗಿ
ಸತ್ತ ಹೆಣ್ಣವಾಗಿತಲ್ಲ!
ಸಂಗಮೇಶ್ವರ ಎಸ್ ಮುರ್ಕೆ