ವಿಶ್ವಕರ್ಮ ಸಮುದಾಯ ಭವನ ನಿರ್ಮಾಣಕ್ಕೆ ಒತ್ತಾಯ

ವಿಶ್ವಕರ್ಮ ಸಮುದಾಯ ಭವನ ನಿರ್ಮಾಣಕ್ಕೆ ಒತ್ತಾಯ

ವಿಶ್ವಕರ್ಮ ಸಮುದಾಯ ಭವನ ನಿರ್ಮಾಣಕ್ಕೆ ಒತ್ತಾಯ 

 ಚಿತ್ತಾಪುರ: ಪಟ್ಟಣದಲ್ಲಿ ವಿಶ್ವಕರ್ಮ ಜನರಿಗಾಗಿ ಸಮುದಾಯ ಭವನ ನಿರ್ಮಾಣ ಮಾಡಬೇಕೆಂದು ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಪ್ರಲ್ಹಾದ್ ವಿಶ್ವಕರ್ಮ ಒತ್ತಾಯಿಸಿದರು. ಪಟ್ಟಣದ ತಹಸೀಲ್ ಕಚೇರಿಯಲ್ಲಿ ವಿಶ್ವಕರ್ಮ ಜಯಂತಿ ಕುರಿತು ಮಾತನಾಡಿದ ಅವರು, ಪಟ್ಟಣದಲ್ಲಿ ವಿಶ್ವಕರ್ಮ ಜನರಿಗಾಗಿ ಸಮುದಾಯ ಭವನ ನಿರ್ಮಾಣ ಮಾಡಬೇಕೆಂದು ಕಳೆದ ೮ ವರ್ಷಗಳಿಂದ ಶಾಸಕರಿಗೂ, ಅಧಿಕಾರಿಗಳಿಗೂ ಹೇಳಿದರೂ ಕೇವಲ ಭರವಸೆ ನೀಡುತ್ತಾರೆ ಹೊರತು ಇದುವರೆಗೂ ಸಮುದಯ ಭವನ ನಿರ್ಮಿಸಲು ಮುಂದಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ದೇಶಕ್ಕೆ ರೈತ ಬೆನ್ನೆಲವು ಆಗಿದ್ದರೇ, ರೈತರಿಗೆ ವಿಶ್ವಕರ್ಮ ಸಮಾಜವೇ ಬೆನ್ನೆಲುಬು. ಶಿಲ್ಪಕಲೆ ಹೆಸರು ವಿಶ್ವಕರ್ಮ ನಿರ್ಮಿಸುವ ಶಿಲ್ಪಿಗಳು ಎಂದು ಹೇಳಿದರು. ದಿಗ್ಗಾoವ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕ ವಿಶ್ವರಾಜ ಇನಾಮದಾರ ಮಾತನಾಡಿ, ಇಡಿ ಜಗತ್ತಿನ ಸೃಷ್ಟಿ ಕೃತ ವಿಶ್ವಕರ್ಮ ಎಂದು ಬಣ್ಣಿಸಿದರು. ತಹಸೀಲ್ದಾರ್ ನಾಗಯ್ಯ ಹೀರೆಮಠ, ಸಮಾಜದ ಗೌರವಾಧ್ಯಕ್ಷ ಕಾಶಿಪತಿ ಬಡಿಗೇರ, ಪ್ರಮುಖರಾದ ವೀರಣ್ಣ ಶಿಲ್ಪಿ, ಮೋನಯ್ಯ ಪಂಚಾಳ, ರವೀಂದ್ರ ವಿಶ್ವಕರ್ಮ, ಕಲ್ಯಾಣರಾವ ಭಕ್ತಿ, ಪ್ರಕಾಶ ವಿಶ್ವಕರ್ಮ, ಬಸವರಾಜ ವಿಶ್ವಕರ್ಮ, ಪ್ರಕಾಶ ಸುನಾರ, ಶಂಭುಲಿAಗ ಕರದಳ್ಳಿ, ರಾಕೇಶ ವಿಶ್ವಕರ್ಮ, ರಾಮಚಂದ್ರ ಅಲ್ಲೂರ್, ಸಂಗಣ್ಣ ವಿಶ್ವಕರ್ಮ, ದೇವಾನಂದ ಪಂಚಾಳ ಸೇರಿದಂತೆ ಇತರರಿದ್ದರು.