ಕನ್ನಡ ಭಾಷೆ ಕನ್ನಡಿಗರ ಉಸಿರಾಗಿದೆ : ತಿರುಪತಿ ಗುತ್ತೇದಾರ

ಕನ್ನಡ ಭಾಷೆ ಕನ್ನಡಿಗರ ಉಸಿರಾಗಿದೆ : ತಿರುಪತಿ ಗುತ್ತೇದಾರ

ಕನ್ನಡ ಭಾಷೆ ಕನ್ನಡಿಗರ ಉಸಿರಾಗಿದೆ : ತಿರುಪತಿ ಗುತ್ತೇದಾರ

ಯಾದಗಿರ : ಕನ್ನಡ ಭಾಷೆ ಜಗತ್ತಿನ ಪುರಾತನ ಭಾಷೆಗಳಲ್ಲಿ ಒಂದಾಗಿದ್ದು, ಕನ್ನಡ ಭಾಷೆ ಕನ್ನಡಿಗರ ಉಸಿರಾಗಿದೆ

 ಎಂದು ಯಾದಗಿರ ತಾಲೂಕಿನ ಕಡೇಚೂರು ಗ್ರಾಮ ಘಟಕದ ಅಧ್ಯಕ್ಷ ತಿರುಪತಿ ಗುತ್ತೇದಾರ ಹೇಳಿದರು.

ಯಾದಗಿರಿ ತಾಲ್ಲೂಕಿನ ಕಡೆಚೂರು ಗ್ರಾಮದಲ್ಲಿ ಕರವೇ ಆಯೋಜಿಸಿದ್ದ 69ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ತಾಯಿ ಭುವನೇಶ್ವರಿ ಭಾವಚಿತ್ರ, ರಾಷ್ಟ್ರ ಕವಿಗಳ ಭಾವಚಿತ್ರಗಳನ್ನು ಪೂಜಿಸಿ , ಮೆರವಣಿಗೆ ಮಾಡುವ ಮೂಲಕ ಕನ್ನಡ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಬಸ್ಸು ನಾಯಕ ಸೈದಾಪುರ, ಪ್ರಧಾನ ಕಾರ್ಯದರ್ಶಿ ಸುರೇಶ ಬೆಳಗುಂದಿ,ಸೈದಾಪುರ ಹೋಬಳಿ ಅಧ್ಯಕ್ಷ ಸಾಗರ ಹುಲ್ಲೆರ್, ಮಲ್ಲು ಬಾಡಿಯಾಳ, ಮಹೇಶ್ ಜೇಗರ್,ವೆಂಕಟೇಶ್ ನಾಗರಬಂಡಿ, ನಾಗರಾಜ್ ಕಂಬೋಳ್, ನಾಗೇಶ್ ಉಜ್ಜಿ,ದೇವು ಪೆಂಡರ್, ಅನಿಲ್ ನಲ್ಲಿ, ವಿಜಯ್ ಪೆದ್ದಿ, ಪರಶುರಾಮ್ ಮ್ಯಾತ್ರೆ, ಸೂಗಪ್ಪ ಮುನಗಲ್, ಅನಿಲ್ ಪೇಂಡರ್, ಮಹೇಶ್ ನಲ್ಲಿ ,ಸಂತೋಷ್ ರಾಯ್ಕೋಡ್, ಮೌನೇಶ್ ನಲ್ಲಿ, ಜಾವೀದ್, ಮೊಯಿಸ್ ಖುರೇಶಿ ಇನ್ನು ಇತರರಿದ್ದರು.