ಸಿ.ಸಿ.ಐ. ಸಿಮೆಂಟ್ ಫ್ಯಾಕ್ಟರ್,ವಿಮಾನ ಹಾರಾಟ,ಕಾರ್ಖಾನೆಯಲ್ಲಿ ಶೇ ೫೦% ಸ್ಥಳಿಯರಿಗೆ ಹುದ್ದೆ ಭರ್ತಿಗೆ ಕೇಂದ್ರ ಸಚಿವ ಕುಮಾರಸ್ವಾಮಿಗೆ ಮನವಿ
ಸಿ.ಸಿ.ಐ. ಸಿಮೆಂಟ್ ಫ್ಯಾಕ್ಟರ್ ಪುನಃ ಪ್ರಾರಂಭಿಸಲು ಮನವಿ
ಕಲಬುರಗಿ ವಿಮಾನ ಹಾರಾಟ ಪುನರ್ ಆರಂಭಿಸಲು ಮನವಿ
ಕಲಬುರಗಿ ಜಿಲ್ಲೆಯ ಕಾರ್ಖಾನೆಯಲ್ಲಿ ಶೇ ೫೦% ಹುದ್ದೆಗಳನ್ನು ಸ್ಥಳಿಯರಿಗೆ ಮಿಸಲಿಡಿ
ಕಲಬುರಗಿ:ಸಿ.ಸಿ.ಐ. ಸಿಮೆಂಟ್ ಫ್ಯಾಕ್ಟರ್ ಕಳೆದ 20 ವರ್ಷಗಳಿಂದ ಕಾರ್ಖಾನೆ ಉತ್ಪಾದನೆ ಸ್ಥಗಿತಗೊಂಡಿದೆ. ಇಲ್ಲಿನ ಸ್ಥಳೀಯರಿಗೆ ಉದ್ಯೋಗ ಅವಕಾಶ ಸಿಗುತ್ತಿಲ್ಲ. ಈ ಕಾರ್ಖಾನೆ ಪುನರ್ ಆರಂಭವಾದಲ್ಲಿ ಸ್ಥಳೀಯರಿಗೆ ನಿರುದ್ಯೋಗದ ಸಮಸ್ಯೆ ಇರುವುದಿಲ್ಲ. ಆದಕಾರಣ ಶೀಘ್ರ ಕಾರ್ಖಾನೆ ಪುನರ್ ಪ್ರಾರಂಭಿಸಬೇಕೆಂದು ಬೃಹತ್ ಕೈಗಾರಿಕಾ ಕೇಂದ್ರ ಸಚಿವರಾದ ಹೆಚ್. ಡಿ.ಕುಮಾರಸ್ವಾಮಿ ಅವರಿಗೆ ಕಲಬುರಗಿ ಜಿಲ್ಲಾ ಜೆ.ಡಿ.ಎಸ್ ಅಧ್ಯಕ್ಷ ಬಾಲರಾಜ್ ಗುತ್ತೇದಾರ ಮನವಿ ಮಾಡಿದರು.
ಬೆಂಗಳೂರಿನಲ್ಲಿ ಕೇಂದ್ರ ಸಚಿವರ ನಿವಾಸದಲ್ಲಿ ಮನವಿ ಸಲ್ಲಿಸಿ ಕಳೆದ ಒಂದು ವರ್ಷದಿಂದ ಕಲಬುರಗಿ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟ ಸ್ಥಗಿತವಾಗಿದೆ. ಕಾರಣ, ಇಲ್ಲಿನ ಜನರಿಗೆ ಬೆಂಗಳೂರು, ಮುಂಬೈ, ತಿರುಪತಿ, ಪ್ರಯಾಣಕ್ಕೆ ಅನಾನುಕೂಲವಾಗುತ್ತಿದೆ. ಈ ಹಿನ್ನಲೆಯಲ್ಲಿ ಕೂಡಲೇ ವಿಮಾನ ಹಾರಾಟ ಪ್ರಾರಂಭಿಸಬೇಕು.
ಕಲಬುರಗಿ ಭಾಗದ ಮುಖ್ಯ ವಾಣಿಜ್ಯ ಬೆಳೆಯಾದ ತೊಗರಿ ಬೆಳೆಗೆ ಕೇಂದ್ರ ಸರ್ಕಾರದ ವತಿಯಿಂದ ಪ್ರತಿ ಕ್ವಿಂಟಲ್‌ಗೆ ರೂ.12.000-00 ದರ ನಿಗದಿ ಮಾಡಿದಲ್ಲಿ ಈ ಭಾಗದ ರೈತರು ಸ್ವಾವಲಂಬಿ ಜೀವನ ಸಾಗಿಸಲು ಅನುಕೂಲವಾಗುತ್ತದೆ. ಈಗಿನ ದರ ಪರಿಷ್ಕರಿಸಬೇಕು.
ಕಲಬುರಗಿ ಜಿಲ್ಲೆಯಲ್ಲಿ ಅನೇಕ ಸಿಮೆಂಟ್ ಕಾರ್ಖಾನೆ ಹಾಗೂ ಸಕ್ಕರೆ ಕಾರ್ಖಾನೆಗಳಿದ್ದು ಅದರಲ್ಲಿ ಶೇ ೫೦% ಹುದ್ದೆಗಳನ್ನು ಸ್ಥಳಿಯರಿಗೆ ನೀಡುವುದರ ಮೂಲಕ ನಮ್ಮ ಕಲಬುರಗಿ ಜಿಲ್ಲೆಯ ಜನರಿಗೆ ಗುಳೆ ಹೊಗುವುದನ್ನು ತಪ್ಪಿಸಲು
ಕಾರ್ಖಾನೆಗಳಿಗೆ ನಿರ್ದೆಶನ ನೀಡಬೇಕು ಯಾದಗೀರಿ ಜಿಲ್ಲೆಯ ಹಿಂದುಳಿದ ಈ ಭಾಗದಲ್ಲಿ ಬೃಹತ್ ಕೈಗಾರಿಕೆಗಳು ಬರಲಿ ಎಂಬ ಉದ್ದೇಶದಿಂದ ಸರ್ಕಾರ ಕಡೇಚೂರು,ಬಾಡಿಯಾಳ ಮತ್ತು ಶೆಟ್ಟಿಹಳ್ಳಿ ಗ್ರಾಮಗಳಿಗೆ ಸೇರಿದ್ದ ೩,೨೩೨ ಎಕರೆ ಭೂಮಿಯನ್ನು ಕೆಐಎಡಿಬಿ ೨೦೧೨-೧೩ರಲ್ಲಿ ಸ್ವಾಧೀನ ಪಡಿಸಿಕೊಂಡಿತು. ಈ ಜಾಗ ಸ್ವಾಧೀನಪಡಿಸಿಕೊಂಡು ದಶಕ ಮೇಲಾಯಿತು. ಆದರೆ, ಅಂತಹ ಉದ್ಯಮಗಳು ಸ್ಥಾಪನೆಗೊಳ್ಳಲಿಲ್ಲ. ಗಡಿ ಪ್ರದೇಶದಲ್ಲಿ ಥರ್ಮಲ್ ಪವರ್. ಜವಳಿ ಪಾರ್ಕ, ಕೋಕಾ ಕೋಲಾ ಕಂಪನಿ ಸೇರಿದಂತೆ ಹಲವು ದೈತ್ಯ ಕಂಪನಿಗಳು ಇಲ್ಲಿಗೆ ಬಂದು ಕೈಗಾರಿಕಾ ಸ್ಥಾಪಿಸಿದರೆ ಕಲ್ಯಾಣ ಕರ್ನಾಟಕ ಭಾಗದ ನಿರುದ್ಯೋಗ ನಿವಾರಣೆಯಾಗಲಿದೆ. ಅಲ್ಲದೆ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಆದರೆ, ದಶಕ ಕಳೆದರೂ ಅಲ್ಲಿ ಒಂದು ಬೃಹತ್ ಕೈಗಾರಿಕೆ ಬರಲಿಲ್ಲ. ಕನಸು ಮತ್ತು ಉತ್ಸಾಹಕ್ಕೆ ತಣ್ಣಿರು ಬಿದ್ದು ಭೂಮಿ ಕೊಟ್ಟ ರೈತರು ಕಂಗಾಲಾಗಿದ್ದು ಜನರು , ಗುಳೆ ಹೋಗುತ್ತಿದ್ದಾರೆ ಆದಕಾರಣ ತಾವೂ ಬೃಹತ ಕೈಗಾರಿಕೆಗಳನ್ನು ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು.
