ಡಾ. ಎ. ಸೋಮಶೇಖರ್ ಹುಟ್ಟುಹಬ್ಬ ಸೇವಾ ಕಾರ್ಯಗಳೊಂದಿಗೆ ಆಚರಣೆ

ಡಾ. ಎ. ಸೋಮಶೇಖರ್ ಹುಟ್ಟುಹಬ್ಬ ಸೇವಾ ಕಾರ್ಯಗಳೊಂದಿಗೆ ಆಚರಣೆ

ಡಾ. ಎ. ಸೋಮಶೇಖರ್ ಹುಟ್ಟುಹಬ್ಬ ಸೇವಾ ಕಾರ್ಯಗಳೊಂದಿಗೆ ಆಚರಣೆ

ಕಲಬುರ್ಗಿ: ಕರ್ನಾಟಕ ರಾಜ್ಯ ಲೋಕೋಪಯೋಗಿ ನೌಕರರ ಸಂಘ ಬೆಂಗಳೂರು ಜಿಲ್ಲಾ ಘಟಕ ಕಲಬುರ್ಗಿ ವತಿಯಿಂದ ಸಂಘದ ರಾಜ್ಯಾಧ್ಯಕ್ಷರಾದ ಡಾ. ಎ. ಸೋಮಶೇಖರ್ ಅವರ ಜನ್ಮದಿನದವನ್ನು ಕಲಬುರ್ಗಿಯ ಅಂಜನ ಶ್ರವಣ ನ್ಯೂಯತ್ತಿಉಳ್ಳ 

ಹೆಣ್ಣು ಮಕ್ಕಳ ವಸತಿ ಶಾಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿನಿಯರಿಗೆ ಪುಸ್ತಕ ಹಾಗೂ ಪೆನ್‌ಗಳನ್ನು ವಿತರಿಸುವ ಮೂಲಕ ಸೇವಾ ಮನೋಭಾವವನ್ನು ವ್ಯಕ್ತಪಡಿಸಲಾಯಿತು. ಮಕ್ಕಳಿಗೆ ಶಿಕ್ಷಣೋಪಕರಣಗಳನ್ನು ನೀಡುವ ಮೂಲಕ ಅವರ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಶರಣರಾಜ ಛಪ್ಪರಬಂದಿ, ಹಿರಿಯ ಉಪಾಧ್ಯಕ್ಷ ಭೀಮಣ್ಣ ನಾಯಕ್, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಸಂಗೊಳ್ಳಗಿ, ಉಜ್ಜರ್ ಅಹಮದ್ ಖಾನ್, ಕಮಲಾಕರ್ ಆನೆಗುಂದಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಕಟ್ಟಿಮನಿ, ಖಜಾಂಚಿ ಉಮಾಕಾಂತ ಹಿರೋಳ್ಳಿ, ಕಾರ್ಯದರ್ಶಿ ಕಿಟೆಂದ್ರ, ಸಹ ಕಾರ್ಯದರ್ಶಿಗಳಾದ ಶಶಿನಾಥ ಸೋನೆ, ಖಾಸಿಂ ಅಲಿ, ಸಂಘಟನಾ ಕಾರ್ಯದರ್ಶಿಗಳಾದ ಅಕ್ಟರ್ ಪಾಶಾ, ಅಶೋಕ ಸಜ್ಜನ, ಕ್ರೀಡಾ ಕಾರ್ಯದರ್ಶಿ ರಾಮಕೃಷ್ಣ ಸಿಂಗ್, ಸಂಘದ ಸಲಹೆಗಾರರಾದ ಶರಣಗೌಡ ಪಾಟೀಲ್, ಮಂಜುನಾಥ್ ಧೂಳೆ, ಕಾರ್ಯಕಾರಿ ಸದಸ್ಯರಾದ ನಾಗೇಂದ್ರಪ್ಪ, ರಾಜಕುಮಾರ್, ಪಾಂಡುರಂಗ ಕುಲಕರ್ಣಿ, ಕಾರ್ತಿಕ್, ಪ್ರಭು ರಾಥೋಡ್, ಮಹಮ್ಮದ್ ಮಜಾರ್, ಸೈಯದ್ ಬಾಸು, ನಾಲ್ಕುಚಕ್ರ ತಂಡದ ಮುಖ್ಯಸ್ಥರಾದ ಮಾಲಾ ಕಣ್ಣಿ, ಸದಸ್ಯರಾದ ವಿಜಯಲಕ್ಷ್ಮಿ ಹಿರೇಮಠ್, ಶೀಲಾ ಕಲಬುರಗಿ, ಪೂರ್ಣಿಮಾ ಕುಲಕರ್ಣಿ, ಜಯಶ್ರೀ ಜೈನ್, ಲಿಂಗರಾಜ್ ಡಾಂಗೆ, ಸುಭಾಷ್ ಮೇತ್ರೆ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.