ಮಲ್ಲಿಕಾರ್ಜುನ್ ಮುತ್ಯಾನ ವಿರುದ್ಧ ಪೋಕ್ಸೋ ಕೇಸ್ ದಾಖಲು.

ಮಲ್ಲಿಕಾರ್ಜುನ್ ಮುತ್ಯಾನ ವಿರುದ್ಧ ಪೋಕ್ಸೋ ಕೇಸ್ ದಾಖಲು.

ಮಲ್ಲಿಕಾರ್ಜುನ್ ಮುತ್ಯಾನ ವಿರುದ್ಧ ಪೋಕ್ಸೋ ಕೇಸ್ ದಾಖಲು.

ಶಹಾಪುರ : ಅಪ್ರಾಪ್ತ ಬಾಲಕಿಯ ಜೊತೆ ಅಸಭ್ಯವಾಗಿ ವರ್ತಿಸಿರುವ ಮಲ್ಲಿಕಾರ್ಜುನ್ ಮುತ್ಯಾನ ವಿರುದ್ಧ ಫೋಕ್ಸೋ ಕೇಸ್ ದಾಖಲಾಗುತ್ತಿದ್ದಂತೆ,ಮಠ ಬಿಟ್ಟು ರಾತ್ರೋರಾತ್ರಿ ಪರಾರಿ ಆಗಿದ್ದಾನೆ ಎಂಬ ಊಹಾಪೋಹಗಳು ಕೇಳಿ ಬರುತ್ತಿದ್ದಂತೆ.

ಇಂದು ಮಧ್ಯಾಹ್ನ ಸ್ವತಃ ಮಲ್ಲಿಕಾರ್ಜುನ ಮುತ್ಯಾ ಮೊಬೈಲ್ ಮೂಲಕ ವಿಡಿಯೋ ಲೈವ್ ಬಂದು, ನಾನು ಎಲ್ಲೂ ಹೋಗಿಲ್ಲ,ನಾನು ಯಾವ ತಪ್ಪು ಮಾಡಿಲ್ಲ,ಒಂದು ವೇಳೆ ತಪ್ಪು ಮಾಡಿದರೆ, ಕಾನೂನಾತ್ಮಕವಾಗಿ ಪೊಲೀಸರು ವಿಚಾರಣೆ ನಡೆಸಲಿ,ಅದಕ್ಕೆ ನಾನು ಸಿದ್ಧನಿದ್ದೇನೆ ಎಂದು ಹೇಳಿಕೆ ನೀಡಿದ್ದಾನೆ.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಹಲ್ ರೋಜಾ ಯಮನೂರಪ್ಪ ಮುತ್ಯಾನ ನಮ್ಮ ಮಠದಲ್ಲಿ ಮಾರ್ಚ್ 13 ಮತ್ತು 14 ರಂದು ಎರಡು ದಿನಗಳ ಕಾಲ ಸಾಮೂಹಿಕ ವಿವಾಹ ಹಮ್ಮಿಕೊಂಡ ನಿಮಿತ್ಯ,ನಾನು ಆಂಧ್ರಪ್ರದೇಶದ ಕೆಲವೊಂದು ಊರುಗಳಿಗೆ ಆಮಂತ್ರಣ ಪತ್ರಿಕೆ ನೀಡಲು ಬಂದಿದ್ದೇನೆ.ಈಗ ತಾನೆ ಈ ಸುದ್ದಿ ಕೇಳಿ ನನಗೂ ಶಾಕ್ ಆಗಿದೆ ಆದರೆ ಯಾವುದಕ್ಕೂ ನಾನು ಎದೆ ಗುಂದುವುದಿಲ್ಲ.

ಇದು ಒಂದು ಷಡ್ಯಂತರ,ಪೂರ್ವ ನಿಯೋಜಿತ ಕೃತ್ಯವಾಗಿದ್ದು,ನನ್ನ ಬೆಳವಣಿಗೆ ಸಹಿಸದ ಕೆಲವು ಕಿಡಿಗೇಡಿಗಳು ಈ ವಿಡಿಯೋವನ್ನು ವ್ಯಾಪಕ ಪ್ರಚಾರ ಮಾಡಿದ್ದಾರೆ. ಕೆಲವು ದಿನಗಳಲ್ಲಿ ಸತ್ಯಾ ಸತ್ಯತೆ ಹೊರಬೀಳಲಿದ್ದು,ಇದರಲ್ಲಿ ನನಗೆ ಜಯ ದೊರೆಯಲಿದೆ ಎಂದು ಆತ್ಮವಿಶ್ವಾಸದಿಂದ ನುಡಿದರು.

ಈ ವಿಡಿಯೋ ಬಹಳ ಹಳೆಯದು ಆಂಧ್ರ ಪ್ರದೇಶದ ಒಂದು ಹಳ್ಳಿಯಿಂದ ಬಂದಂತ ಎಂಟು ಜನ ಕುಟುಂಬದ ಸದಸ್ಯರು,ಆ ಮಗುವಿನೊಂದಿಗೆ ನಮ್ಮ ಮಠಕ್ಕೆ ಆಗಮಿಸಿದ್ದರು,ಅವರೆಲ್ಲರೂ ಕೂಡ ನನ್ನೆದುರುಗಡೆನೇ ಇದ್ದರು ಆ ಮಗುವಿಗೆ ತಂದೆ-ತಾಯಿಯ ಪ್ರೀತಿ ತೋರಿಸಿದ್ದೇನೆ ವಿನಾ ಇದರಲ್ಲಿ ದುರುದ್ದೇಶವಿಲ್ಲ ಮತ್ತೇನು ಹೇಳಲಾರೆ ಎಂದರು.