ಸಮರಸ ಜೀವನವೇ ದಾಂಪತ್ಯ: ಪ್ರೊ.ಶಿವರಾಜ ಪಾಟೀಲ

ಸಮರಸ ಜೀವನವೇ ದಾಂಪತ್ಯ: ಪ್ರೊ.ಶಿವರಾಜ ಪಾಟೀಲ

ಸಮರಸ ಜೀವನವೇ ದಾಂಪತ್ಯ: ಪ್ರೊ.ಶಿವರಾಜ ಪಾಟೀಲ

ಕಲಬುರಗಿ: ಜೀವನದ ಮಹತ್ವ ಘಟ್ಟ ವಿವಾಹ.ಇದನ್ನು ವೈವಾಹಿಕ ಬದುಕು ಸರ್ವ ಶ್ರೇಷ್ಠ.ಇಲ್ಲಿ ಯಾರು ಸಂಸಾರ

ಬಿಟ್ಟು ಬದುಕೆಂದು ಬೋಧಿಸಲಿಲ್ಲ.ಸಂಸಾರದಲ್ಲಿದ್ದೂ ಜೀವಿ ಸಬಹುದೆಂದು ಸಾರಿದ್ದಾರೆ.ನಮ್ಮ ಕುಟುಂಬ, ಸಮಾಜ, ಸಾಮರಸ್ಯ ಹೊಂದಿದರೆ ಸಮರಸವೇ ದಾಂಪತ್ಯ ವಾಗುತ್ತದೆ.ಸತಿ- ಪತಿ ಒಂದಾಗಿ ಜೀವನ ಕಂಡರೆ ವೃದ್ಧಾಶ್ರಮ ಅನಾಥಶ್ರಮ ಮುಕ್ತ ವಾಗುವುದೆಂದು ಹಿರಿಯ ಸಾಹಿತಿ,ಚಿಂತಕ ಪ್ರೊ.ಶಿವರಾಜ ಪಾಟೀಲ ಅಭಿಮತ ವ್ಯಕ್ತಪಡಿಸಿದರು.

     ಕಲಾ ಮಂಡಳದಲ್ಲಿ ಜಿಲ್ಲಾ ಸಿರಿಗನ್ನಡ ವೇದಿಕೆ ಹಮ್ಮಿಕೊಂಡ ದಾಂಪತ್ಯ ಸಿರಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು ಬದುಕು ಹಸನಾಗಲು ಸಂತೃಪ್ತ ಜೀವನ ಕಾಣಬೇಕು.ಎಂದು ವಿಘಟನೆ ಆಗದೇ ಸಂಘಟಿತ ರಾಗಿದಾಗ ಜೀವನ ಸಾರ್ಥಕ ಎಂದರು.

        ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯೆ ಸಾಹಿತಿ ಡಾ.ಜಯದೇವಿ ಗಾಯಕವಾಡ ಸಮಾರಂಭ ಉದ್ಘಾಟಿಸಿ ಮಾತನಾಡಿ ಬದುಕಿನ ಬಹು ಮುಖ್ಯವಾದ್ದು ದಾಂಪತ್ಯ. ಸುದೀರ್ಘ ಸಂಸಾರ ನಡೆಸಿ ತಮ್ಮ ಬದುಕು ಹಸನಾಗಿಸಿಕೊಂಡವರು ಬಹು ಕಡಿಮೆ. ಅಂತದರಲ್ಲೂ ತಮ್ಮ ಬಾಳು ಹಸನಾಗಿಸಿಕೊಂಡವರು ಇತರರಿಗೆ ದಾರಿ ದೀಪವೆಂದರು.

     ಅಧ್ಯಕ್ಷತೆ ವಹಿಸಿದ ಸಿರಿಗನ್ನಡ ವೇದಿಕೆ ಅಧ್ಯಕ್ಷ ಡಾ.ಗವಿ ಸಿದ್ಧಪ್ಪ ಪಾಟೀಲ ಮಾತನಾಡಿ ಮನುಷ್ಯ ನಾಗರಿಕನಾದ ಮೇಲೆ ಮದುವೆ ಕಲ್ಪನೆ ಬಂತು.ಜನಪದರಿಂದ ಹಿಡಿದು ಶರಣರ,ದಾಸರು,ಕವಿಗಳು ಸಹ ದಾಂಪತ್ಯ ಬಗ್ಗೆ ಬರೆದಿದ್ದಾರೆ.ಶ್ರೀಮತಿ ಕಲ್ಪನಾ ಸಂತೋಷಕುಮಾರ ಪಾಟೀಲ ಅವರು ಕಾಯಕ ಜೀವಿಯಾಗಿ,ಶಿಕ್ಷಣ, ಸಾಮಾಜಿಕ,ಧಾರ್ಮಿಕ ಕೊಡುಗೆ ಅಪಾರ ಜೊತೆಗೆ ಅವರ ಇಪ್ಪತ್ತಾರನೇ ವಿವಾಹ ವಾರ್ಷಿಕೋತ್ಸವ ಸಾಮಾನ್ಯ ಮಾತಲ್ಲವೆಂದರು.

ದಾಂಪತ್ಯ ಸಿರಿ ಪ್ರಶಸ್ತಿ ಪುರಸ್ಕೃತರು:

ಶ್ರೀಮತಿ ಕಲ್ಪನಾ ಸಂತೋಷ ಪಾಟೀಲ, ಶ್ರೀಮತಿ ಸವಿತಾ ಬಾಬುರಾವ ಜಮಾದಾರ,ಶ್ರೀಮತಿ ಪ್ರೀತಿ ಸಿದ್ಧಲಿಂಗ ಕೊನೇಕ, ಶ್ರೀಮತಿ ಸಂಧ್ಯಾ ಸುರೇಶ ಕಾನೇಕರ, ಶ್ರೀಮತಿ ಸುಜಾತ ಚಿನ್ನಾ ಆಶಪ್ಪ ಅವರಿಗೆ ಪ್ರದಾನ ಮಾಡಲಾಯಿತು

 ಡಾ.ಪೀರಪ್ಪ ಸಜ್ಜನ ಪ್ರಾರ್ಥನೆ ಗೀತೆ ಹಾಡಿದರು, ಡಾ.ಸಿದ್ದಪ್ಪ ಹೊಸಮನಿ ಸ್ವಾಗತಿಸಿದರು, ಡಾ.ರಾಜಕುಮಾರ ಮಾಳಗೆ ನಿರೂಪಿಸಿದರು, ಡಾ.ಶೀಲಾದೇವಿ ಬಿರಾದಾರ ವಂದಿಸಿದರು.