ಸಾಧಿಸುವ ಮನೋಬಲ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು: ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್ ಅಪ್ಪ
ಸಾಧಿಸುವ ಮನೋಬಲ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು: ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್ ಅಪ್ಪ
ಕಲಬುಗಿ: ಪ್ರತಿಯೋಬ್ಬರೂ ಸಾಧಿಸುವ ಪಣ ತೊಡಬೇಕು.ಇದರಿಂದ ಆತ್ಮಬಲ ಹೆಚ್ಚಿಸುತ್ತದೆ .ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಮುಂದಾಗಿರುವು ಒಳ್ಳೆಯ ಬೆಳವಣಿಗೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್.ಅಪ್ಪ ಅವರು ತಿಳಿಸಿದರು.
ನಗರದ ಮಹಾದೇವಿ ನಾದ ಮಧುರ ಸಾಹಿತ್ಯ ಸಾಂಸ್ಕ್ರತಿಕ ಕಲಾ ಸಂಸ್ಥೆ ಹಾಗೂ ಮೆ.ಮಹಾದೇವಿ ಎನ್.ಮುರುಡಿ ಪ್ರಕಾಶನ ಕಲಬುರಗಿ ಪ್ರಥಮ ವಾರ್ಷಿಕೋತ್ಸವ ಅಂಗವಾಗಿ ಇಂದು ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಆದರ್ಶ ದಂಪತಿಗಳಿಗೆ ಹಾಗೂ ಸಾಧಕರಿಗೆ ಪ್ರಶಸ್ತಿ ಮತ್ತು ಸನ್ಮಾನ ಕಾರ್ಯಕ್ರಮವನ್ನು ಡೊಳ್ಳು ಭಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಪರಿಸ್ಥಿತಿ ಹೇಗೆ ಇರಲಿ ಧೃಡ ಸಂಕಲ್ಪ ಬಿಡಬಾರದು. ಸಂಘ ಸಂಸ್ಥೆಗಳು ಸಾಮಾಜಿಕ ಜವಾಬ್ದಾರಿ ಹೊತ್ತುಕೊಂಡು ನಾಲ್ಕು ಜನರಿಗೆ ದಾರಿ ದೀಪವಾಗಬೇಕು ಎಂದರು .
ನಿಮ್ಮ ಸಂಸ್ಥೆ ಮೊದಲ ಬಾರಿಗೆ ಆದರ್ಶ ದಂಪತಿಗಳನ್ನು ಗುರಿತಿಸಿ ಸನ್ಮಾನಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಬಣ್ಣಿಸಿದರು . ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಿಂಡಿಕೇಟ್ ಸದಸ್ಯ ಎಸ್.ಪಿ.ಸುಳ್ಳದ, ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ, ಕರ್ನಾಟಕ ಗಡಿ ಪ್ರದೇಶದ ಪ್ರಾಧಿಕಾರದ ಸದಸ್ಯ ಡಾ.ಸಂಜೀವಕುಮಾರ ಅತಿವಾಳೆ, ಸುನಿಲ್ ಕುಮಾರ್ ವಂಟಿ ಮಾತನಾಡಿದರು.ರವಿಚಂದ್ರ ಮಯೂರ, ಗಂಗಾಧರ ಕಂದಕೂರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಮಹಾದೇವಿ ಮುರುಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹೋರಾಟಗಾರ ಲಿಂಗರಾಜ ಸಿರಗಾಪೂರ, ಶಿವಲಿಂಗಪ್ಪ ಹಾದಿಮನಿ,ಶ್ರೀಧರ ಹೊಸಮನಿ, ಸಿದ್ಧಾರ್ಥ ಚಿಮ್ಮಇದಲಾಯಿ, ಶ್ರೀಮತಿ ಸುಧಾ ಮದನಕರ, ಶಿವಪುತ್ರಪ್ಪ ಗೊಬ್ಬುರಕರ, ಶ್ರೀಮತಿ ಚೆನ್ನಮ್ಮ ಯಲಗಾರ,ಕು.ಧ್ರುವಂತ ಅವರನ್ನು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್.ಅಪ್ಪಾ ಅವರು ಕನ್ನಡ ನುಡಿ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಿದರು
ಡಾ.ಗಾಂಧಿಜಿ ಮೊಳಕೇರೆ,ಡಾ.ಬಸವರಾಜ ಕಲೆಗಾರ,ಶಂಕರ ಹೆಚ್, ಅಶೋಕ್ ಕುಲಕರ್ಣಿ ರಾಮಣ್ಣ ಮಯೂರ ಹಾಗೂ ಆದರ್ಶ ದಂಪತಿಗಳನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಕಾರ್ಯದರ್ಶಿ ಎಂ.ಬಿ.ನಿಂಗಪ್ಪ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಗಾಂಧಿಜೀ ಮೊಳಕೇರೆ ನಿರೂಪಿಸಿದರು.