ಅನುದಾನಿತ ಶಾಲೆಗಳಲ್ಲಿ ಖಾಲಿ ಹುದ್ದೆ ಭರ್ತಿಗೆ ಅನುಮತಿ : ಶಿಕ್ಷಣ ಸಚಿವರಿಗೆ ನಮೋಶಿ ಅಭಿನಂದನೆ
ಬಳ್ಳಾರಿ : ನನಗೆ ಭರವಸೆ ನೀಡಿದಂತೆ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಖಾಲಿಯಾಗಿರುವ ಹುದ್ದೆಗಳನ್ನು ತುಂಬಲು ಸರ್ಕಾರ ಕ್ರಮ ವಹಿಸಿದ್ದಕ್ಕೆ ಶಿಕ್ಷಣ ಸಚಿವರಿಗೆ ಅಭಿನಂದನೆಗಳು- ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ
ಅನುದಾನಿತ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿರಲಿಲ್ಲ ಆದರೆ 31/12/2015 ರ ವರೆಗೆ ಖಾಲಿಯಾಗಿರುವ ಅನುದಾನಿತ ಹುದ್ದೆಗಳನ್ನು ತುಂಬಲು ಮಾತ್ರ ಅನುಮತಿ ನೀಡಲಾಗಿತ್ತು.
ಮೊನ್ನೆ ನಡೆದ ವಿಧಾನ ಪರಿಷತ್ ಕಲಾಪದಲ್ಲಿ ನಾನು ಹಾಗೂ ಇನ್ನೋರ್ವ ವಿಧಾನ ಪರಿಷತ್ ಸದಸ್ಯ ಸಂಕನೂರ ಅವರು ಅನುದಾನಿತ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿಯಾಗಿರುವ ಹುದ್ದೆಗಳನ್ನು ಕೂಡಲೆ ಭರ್ತಿ ಮಾಡಿಕೊಳ್ಳಲು ಸದನದಲ್ಲಿ ಗಮನ ಸೆಳೆದು ಒಂದು ಹಂತದಲ್ಲಿ ಸದನದ ಬಾವಿಗೆ ಇಳಿದು ಧರಣಿ ಮಾಡಲು ಮುಂದಾಗಿದ್ದೆವು. ಇದನ್ನು ಅರಿತ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವರಾದ ಸನ್ಮಾನ್ಯ ಮಧು ಬಂಗಾರಪ್ಪ ನವರು ಅಂದು ಸದನದಲ್ಲಿ ನಮಗೆ ಉತ್ತರ ನೀಡಲೂ ಮುಂದಾದರು. ನಾವು ಈ ಹಿಂದೆ ರಾಜ್ಯದಲ್ಲಿ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಖಾಲಿಯಾಗಿರುವ ಹುದ್ದೆಗಳಿಗೆ ತಕ್ಷಣ ಅನುಮತಿ ನೀಡಲಾಗುತ್ತಿತ್ತು ಅದೆ ವ್ಯವಸ್ಥೆ ಮುಂದುವರಿಯಬೇಕು ಎಂದು ಹಠ ಹಿಡಿದಾಗ ಮಾನ್ಯ ಶಿಕ್ಷಣ ಸಚಿವರು ನಾನು ಮುಖ್ಯಮಂತ್ರಿಗಳ ಗಮನಕ್ಕೆ ತಂದು 2020 ರ ವರೆಗಿನ ಖಾಲಿಯಾಗಿರುವ ಅನುದಾನಿತ ಹುದ್ದೆಗಳನ್ನು ತುಂಬಲು ಅನುಮತಿ ನೀಡುವ ಭರವಸೆ ನೀಡಿದರು. ಅದರಂತೆ ಈಗ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಖಾಲಿಯಾಗಿರುವ ಹುದ್ದೆಗಳನ್ನು ತುಂಬುವ ಎಲ್ಲ ಪ್ರಕ್ರಿಯೆಗಳನ್ನು ಸರ್ಕಾರ ಇಡೆರಿಸಿದ್ದು ಸುಮಾರು 5000 ಹುದ್ದೆಗಳನ್ನು ತುಂಬಿಕೊಳ್ಳಲು ಇನ್ನೂ ಕೆಲವೆ ದಿನಗಳಲ್ಲಿ ಆದೇಶ ಹೊರಬೀಳಲಿದೆ ಎಂದು ಸದನದಲ್ಲಿ ನನಗೆ ತಿಳಿಸಿದಂತೆ ಕ್ರಮ ವಹಿಸಿರುವ ಮಾನ್ಯ ಶಿಕ್ಷಣ ಸಚಿವರಗೆ ಅಭಿನಂದನೆಗಳನ್ನು ಸಲ್ಲಿಸುತ್ತೆನೆ.
ಬಳ್ಳಾರಿಯ ತೋರಣಗಲ್ ಹೋಬಳಿಯ ಜಿಂದಾಲನ ವಿದ್ಯಾನಗರದ ಸಭಾಂಗಣದಲ್ಲಿನಡೆದ ಶಾಲಾ ಶಿಕ್ಷಣ ಇಲಾಖೆ ಕಲಬುರ್ಗಿ ವಿಭಾಗ ಹಾಗೂ ಜಿಂದಾಲ್ ಕಾರ್ಖಾನೆ ಹಾಗೂ ಸುಮಾರು 40 ಕ್ಕಿಂತಲೂ ಹೆಚ್ಚಿನ ಸರಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಎಜ್ಯುಕ್ಯಾನ್ 2024 ರ ಶೈಕ್ಷಣಿಕ ಸಮಾವೇಶ ಉದ್ಘಾಟಕರಾಗಿ ಆಗಮಿಸಿದ ಸಂದರ್ಭದಲ್ಲಿ ನಾನು ಮಾನ್ಯ ಶಿಕ್ಷಣ ಸಚಿವರಿಗೆ ನಾನು ಖುದ್ದಾಗಿ ಭೇಟಿ ಮಾಡಿ ನನಗೆ ಸದನದಲ್ಲಿ ತಿಳಿಸಿದಂತೆ ಅವರು ಕ್ರಮ ವಹಿಸಿದ್ದಕ್ಕೆ ಶುಭಾಶಯಗಳು ವೈಯಕ್ತಿಕ ತಿಳಿಸಿದೆ
ಇದೆ ಸಂದರ್ಭದಲ್ಲಿ ನಮೋಶಿ ಅವರು ಅನುದಾನಿತ ಶಾಲಾ ಕಾಲೇಜುಗಳಲ್ಲಿ ಇರುವ ಇನ್ನೀತರ ಎಲ್ಲಾ ಸಮಸ್ಯೆಗಳನ್ನೂ ಬಗೆ ಹರಿಸಬೇಕೆಂದು ಖುದ್ದಾಗಿ ಮನವಿ ಮಾಡಿಕೊಂಡರು.