ಸಮೀಕ್ಷೆ ಒತ್ತಡಕ್ಕೆ ಶಿಕ್ಷಕರ ಅಪಘಾತ

ಸಮೀಕ್ಷೆ ಒತ್ತಡಕ್ಕೆ ಶಿಕ್ಷಕರ ಅಪಘಾತ

ಸಮೀಕ್ಷೆ ಒತ್ತಡಕ್ಕೆ ಶಿಕ್ಷಕರ ಅಪಘಾತ 

ಕಲ್ಬುರ್ಗಿ ಗ್ರಾಮೀಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ದೇವನ ತೆಗನೂರ್ ಮುಖ್ಯ ರಸ್ತೆ ಬಳಿ ಶಿಕ್ಷಕಿ ಮಹಾದೇವಿ ಅಪಘಾತಕ್ಕೆ ಒಳಗಾಗಿದ್ದಾರೆ. 

ಇವರು ಶಾಹಾಬಾದ್ ತಾಲೂಕಿನ ಪೇಠಶಿರೂರ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದು, ಸಮೀಕ್ಷೆಗೆ ಹೋಗಿ ಮರಳಿ ಬರುವ ಸಂದರ್ಭದಲ್ಲಿ ಈ ಅನಾಹುತ ನಡೆದಿದೆ.

ಸಾರ್ವಜನಿಕರು ಇವರನ್ನು ಸಂತೈಸಿದರು ಅವರ ಜೊತೆಗಿರುವ ಶಿಕ್ಷಕಿ ಮತ್ತು ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಅವರು ಸಮೀಪದ ಆಸ್ಪತ್ರೆಗೆ ಸೇರಿಸಿದ್ದಾರೆ ಎಂದು ಅಮೀರ್ ಪಟೇಲ್ ರಂಜಣಗಿ ಅವರು ಮಾಹಿತಿ ಒದಗಿಸಿದರು.

ತಾವರಗೇರಾ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಇರ್ಫಾನಾ ಬೇಗಮ್ ಶಿಕ್ಷಕಿ 75/ ಪರ್ಸೆಂಟೇಜ್ ವಿಕಲರಾಗಿದ್ದು ಮತ್ತು ಗರ್ಭಿಣಿಯ ಕೂಡ ಆಗಿರುತ್ತಾರೆ. ನಗರದ ಆಶಿಫ್ ಗಂಜ್ ಶಾಲೆಯ ಆಸ್ಮಾ ಬೇಗಮ್ ರವರಿಗೆ ಹೃದಯ ಶಸ್ತ್ರ ಚಿಕಿತ್ಸೆ ಆಗಿರುತ್ತೆದೆ ಇಂತಹ ಶಿಕ್ಷಕಿಯರಿಗೆ ಗಣತಿ ಸಮೀಕ್ಷೆ ಕೆಲಸಕ್ಕೆ ನಿರ್ವಹಣೆ ಮಾಡುತ್ತಿರುವುದು ದುರ್ದೈವದ ಸಂಗತಿ.

 ಸರ್ಕಾರವು 55 ವರ್ಷದ ಮೇಲ್ಪಟ್ಟಿರುವ, ಮತ್ತು ನಿವೃತ್ತಿ ಹಂಚಿನಲ್ಲಿರುವ, ಅನಾರೋಗ್ಯದಿಂದ ಬಳಲುತ್ತಿರುವ, ವಿಕಲಚೇತನ ಶಿಕ್ಷಕ /ಶಿಕ್ಷಕಿಯರಿಗೆ ಕರ್ತವ್ಯದಿಂದ ವಿನಾಯಿತಿಯನ್ನು ಸರ್ಕಾರ ನೀಡಿರುತ್ತದೆ. ಅದನ್ನು ನಿರ್ಲಕ್ಷಿಸಿ ಸಂಬಂಧಿಸಿದೆ ಅಧಿಕಾರಿಗಳು ಇಂತಹ ಶಿಕ್ಷಕರನ್ನು ಕಡ್ಡಾಯವಾಗಿ ಯೋಜಿಸುವುದು ದುರಂತ ಸಂಗತಿ.

 ಶಾಲೆಯಲ್ಲಿ ಬೋಧನೆ ಮಾಡುವ ಶಿಕ್ಷಕರನ್ನು ಸ್ಥಳೀಯವಾಗಿ ನಿಯೋಜಿಸದೆ ಬೇರೆ ಗ್ರಾಮಗಳಿಗೆ ನಿಯೋಜಿಸಿದ್ದು ಸಂಕಷ್ಟಕ್ಕೆ ಗುರಿಯಾಗಿದೆ ಹಾಗೂ ತಾಂತ್ರಿಕ ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಜಿಲ್ಲಾ ಆಡಳಿತ ತಕ್ಷಣವೇ ಎಚ್ಚೆತ್ತುಕೊಂಡು ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಬೇಕೆಂದು ಶಿಕ್ಷಕರು ಹಾಗೂ ಅಯುಬ್ ಪಟೇಲ್ ತಾವರಗೇರಾ ಒತ್ತಾಯವಾಗಿದೆ.