ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಡಾ.ರಾಮರಾವ ಮಹಾರಾಜ ಕೊಡಿಗೆ ಅಪಾರ : ಸಂಸದ ಸಾಗರ್ ಖಂಡ್ರೆ

ಮಹಾರಾಜರು ಹಾಕಿಕೊಟ್ಟ ದಾರಿಯಲ್ಲಿ ನಡೆದು ಸಮಾಜ ಒಂದಾಗಬೇಕು : ಶಾಸಕ ಡಾ. ಅವಿನಾಶ ಜಾಧವ

ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಡಾ. ರಾಮರಾವ ಮಹಾರಾಜರ ಕೊಡುಗೆ ಅಪಾರ : ಸಂಸದ ಸಾಗರ ಖಂಡ್ರೆ

ಕ್ಷೇತ್ರದ ತಾಂಡಾಗಳ ಅಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯ ಕೊಡುಗೆ ಅಪಾರ : ಶಾಸಕ | ಸಾಗರ ಖಂಡ್ರೆ ಜೊತೆಗೆ

ಕುಳಿತುಕೊಳ್ಳುವ ಭಾಗ್ಯ ನನ್ನ ಹಣೆಬರಹದಲ್ಲಿ ಇರಲಿಲ್ಲ,. ನನಗೆ ಅದು ಅರಗಿಸಿಕೊಳ್ಳಲು ಆಗಲಿಲ್ಲ: ಮಾಜಿ ಸಂಸದ

ಚಿಂಚೋಳಿ : ಬಂಜಾರ ಸಮಾಜ ಒಗ್ಗೂಡುವಿಕೆಗೆ ಡಾ. ರಾಮರಾವ ಮಹಾರಾಜರ ಶ್ರಮ ದೊಡ್ಡದಾಗಿದೆ. ಸಮಾಜಕ್ಕಿಂತ ದೊಡ್ಡವರು ಯಾರು ಇಲ್ಲ. ಅವರು ಹಾಕಿಕೊಟ್ಟ ದಾರಿಯಲ್ಲಿ ಎಲ್ಲರೂ ನಡೆಯಬೇಕಾಗಿದೆ. ಬಂಜಾರ ಸಮಾಜ ಒಂದಾಗಬೇಕಾಗಿದೆ ಎಂದು ಶಾಸಕ ಡಾ. ಅವಿನಾಶ ಜಾಧವ ಹೇಳಿದರು.

ಅವರು ತಾಲೂಕಿನ ರಾಣಪೂರ ತಾಂಡಾದಲ್ಲಿ ನೂತನ ಡಾ. ರಾಮರಾವ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬೀದರ ಸಂಸದ ಸಾಗರ ಖಂಡ್ರೆ ಮಾತನಾಡಿ, ವ್ಯಸನ ಮುಕ್ತ ಸಮಾಜ ನಿರ್ಮಾಣದ ಕನಸು ಡಾ. ರಾಮರಾವ ಮಹಾರಾಜರು ಕಂಡಿದರು. ಆ ನಿಟ್ಟಿನಲ್ಲಿ ಪ್ರತಿಯೊಂದು ತಾಂಡಾಗಳಿಗೆ ಭೇಟಿ ಕೊಟ್ಟು ಜಾಗೃತಿ ಮೂಡಿಸುವ ಪ್ರಯತ್ನ ಪಟ್ಟಿದ್ದಾರೆ. ಸಮಾಜಕ್ಕೆ ಮಹಾರಾಜರ ಕೊಡುಗೆ ಅಪಾರವಿದೆ. ಬಂಜಾರ ಸಾಮಾಜ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಮಹಾರಾಜರು ಹಾಕಿಕೊಟ್ಟ ತತ್ವ ಸಿದ್ದಾಂತದ ಮಾರ್ಗದ ದಾರಿಯಲ್ಲಿ ನಡೆದು ಸಮಾಜ ಸಂಘಟಿತರಾಗಬೇಕೆಂದರು.   

ಮಾಜಿ ಸಂಸದ ಡಾ. ಉಮೇಶ ಜಾಧವ ಅವರು ಮಾತನಾಡಿ, ಸಮಾಜ ಶೈಕ್ಷಣಿಕವಾಗಿ ಬಲಿಷ್ಠವಾಗಬೇಕೆಂದು ಡಾ. ಮಹಾರಾಜರ ಕನಸಾಗಿತ್ತು. ಅದರಂತೆ ಬಂಜಾರ ಸಮಾಜ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವುದಕ್ಕೆ ಮಹತ್ವ ನೀಡಬೇಕು ಎಂದರು.

ಪೌರಾದೇವಿ ಪೀಠದ ಉತ್ತರಾಧಿಕಾರಿ ಬಾಬುಸಿಂಗ್‌ ಮಹಾರಾಜರು ಮತ್ತು ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ ಅವರು ಮಾತನಾಡಿದಾರು.

ಈ ಸಂದರ್ಭದಲ್ಲಿ ಪರ್ವತಲಿಂಗ ಪರಮೇಶ್ವರ ಮಹಾರಾಜರು, ಬಳಿರಾಮ ಮಹಾರಾಜರು, ವಿಠ್ಠಲ್‌ ಮಹಾರಾಜರು, ರಾಜು ಮಹಾರಾಜರು, ಶರಣು ಪಾಟೀಲ್‌ ಮೋತಕಪಳ್ಳಿ, ಪವನ ರಾಠೋಡ, ಗುರುನಾಥ ರಾಠೋಡ, ರಾಜು ಪವಾರ, ಪ್ರೇಮಸಿಂಗ್‌ ಜಾಧವ, ಉಮೇಶ ರಾಠೋಡ ಸೇರಿದಂತೆ ಬಂಜಾರ ಸಮಾಜದ ಬಂಧುಗಳು ಉಪಸ್ಥಿತರಿದರು.

· ಸಾಮಾಜಿಕ ನ್ಯಾಯ ಕೊಡುವುದು ಸರಕಾರಗಳ ಕರ್ತವ್ಯವಾಗಿದೆ. ಸಿಎಂ ಸಿದ್ದರಾಮಯ್ಯನವರು ಸರಕಾರದ ಅವಧಿಯಲ್ಲಿ ಕ್ಷೇತ್ರದ ತಾಂಡಾಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿ ಅಭಿವೃದ್ಧಿಗೊಳಿಸಿದ್ದಾರೆ. ಅದರಂತೆ ಪ್ರಧಾನಿ ನರೇಂದ್ರ ಮೋಧಿಯವರು ಬಂಜಾರ ಶಕ್ತಿ ಪೀಠ ಪೌರಾದೇವಿಯ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. ಸಮಾಜ ಒಂದಾಗಬೇಕು. – ಶಾಸಕ ಡಾ. ಅವಿನಾಶ ಜಾಧವ  

· ಸಾಗರ ಖಂಡ್ರೆ ಅವರೊಂದಿಗೆ ಇದಿದ್ದರೆ ಬಹಳಷ್ಟು ಕೆಲಸಗಳಾಗುತ್ತಿದ್ದವು. ಆದರೆ ದೇವರು ನನ್ನ ಹಣೆಬರಹದಲ್ಲಿ ಅದು ಬರೆದಿಲ್ಲ. ನನ್ನಗೆ ಅದು ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಸಾಗರ ಖಂಡ್ರೆ ಮತ್ತು ಡಾ. ಅವಿನಾಶ ಜಾಧವ ಅವರು ಜೊತೆಗೂಡಿ ಚಿಂಚೋಳಿ ಕ್ಷೇತ್ರ ಶೈಕ್ಷಣಿಕವಾಗಿ ಅಭಿವೃದ್ಧಿಗೆ ಶ್ರಮವಹಿಸಬೇಕು ಹಾಗೂ ಚಿಂಚೋಳಿ ಫಾರೇಸ್ಟ್‌ ಕಾಲೇಜು ತೆರೆಯುವಂತೆ ಆಗಬೇಕು. – ಡಾ. ಉಮೇಶ ಜಾಧವ ಮಾಜಿ ಸಂಸದ