ಪತ್ರಕರ್ತರ ಭವನಕ್ಕೆ ಅನುದಾನ: ಶಾಸಕ ಬಸವರಾಜ ಮತ್ತಿಮಡು ಭರವಸೆ
ಪತ್ರಕರ್ತರ ಭವನಕ್ಕೆ ಅನುದಾನ: ಶಾಸಕ ಬಸವರಾಜ ಮತ್ತಿಮಡು ಭರವಸೆ
ಶಹಾಬಾದ: ತಾಲೂಕ ಕೇಂದ್ರದಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಅಗತ್ಯ ಅನುದಾನ ನೀಡುವುದಾಗಿ ಹಾಗೂ ನಗರಸಭೆಯಿಂದ ನಿವೇಶನ ಒದಗಿಸಿದಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ನಿವೇಶನ ಖರೀದಿ ವೆಚ್ಚದ ಅರ್ಧಭಾಗವನ್ನು ಭರಿಸುವುದಾಗಿ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಹೇಳಿದರು.
ನಗರದ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದ ಸಮಸ್ಯೆಗಳನ್ನು ಜನಪ್ರತಿನಿಧಿಗಳು ಮತ್ತು ಸರ್ಕಾರದ ಗಮನಕ್ಕೆ ತರುವಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ಪತ್ರಿಕಾ ಭವನಕ್ಕೆ ನಿವೇಶನ
ಪತ್ರಿಕಾ ಭವನ ನಿರ್ಮಾಣಕ್ಕಾಗಿ ನಿವೇಶನ ನೀಡುವ ಪ್ರಕ್ರಿಯೆಯನ್ನು ತಮ್ಮ ಅವಧಿಯಲ್ಲಿಯೇ ಪೂರ್ಣಗೊಳಿಸುವುದಾಗಿ ಪೌರಾಯುಕ್ತ ಡಾ.ಕೆ.ಗುರುಲಿಂಗಪ್ಪ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪತ್ರಕರ್ತರು, ಗಣ್ಯರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಪತ್ರಕರ್ತರಾದ ನಾಗರಾಜ ದಂಡಾವತಿ, ಮ.ಮುಸ್ತಾಕಾ,ಖಾಜಾ ಪಟೇಲ, ದಾಮೋಧರ ಭಟ್ಟ, ಗಣ್ಯರಾದ ರಾಜು ಮೇಸ್ತ್ರಿ, ಕನಕಪ್ಪ ದಂಡಗುಲ ಕರ್, ಹಾಶಮ್ ಖಾನ್, ಶರಣಬಸಪ್ಪ ಕೋಬಾಳ, ಬಾಬುರಾವ ಪಂಚಾಳ, ನಿಂಗಣ್ಣ ಹುಳಗೋಳ, ಸಾಹೇಬಗೌಡ ಬೊಗುಂಡಿ, ಸುರೇಶ ಮಂಗನ್, ರಾಜೇಶ ಯನಗುಂಟಕರ, ಭೀಮರಾವ ಸಾಳೊಂಕೆ, ಶರಣು ಪಗಲಾಪುರ, ವಿಶ್ವರಾಜ ಫಿರೋಜಾಬಾದ್, ನಾಗಪ್ಪ ರಾಯ ಚೂರಕರ, ರಾಮು ಕುಸಾಳೆ, ಬಸವರಾಜ ಬಿರಾದಾರ, ಬಸವರಾಜ ಮದ್ರಕಿ, ಕಾಶಣ್ಣ ಚನ್ನೂರ, ಮಹೇಶ ಸೂತಾರ, ಯಲ್ಲಾಲಿಂಗ ಹೈಯಾಳಕರ್, ಮಲ್ಲಿಕಾರ್ಜುನ ಇಟಗಿ, ಈಶ್ವರ ಮುಗುಳನಾಗಾವ. ರಾಜು ಜಂಬಗಿ, ದಿಲೀಪ ನಾಯಕ, ದೇವದಾಸ ಜಾಧವ, ಸೂರ್ಯಕಾಂತ ವಾರದ, ಸೂರ್ಯಕಾಂತ ಕೋಬಾಳ, ನಾಗರಾಜ ಮೇಲಗಿರಿ, ಫಜಲ್ ಪಟೇಲ, ಅನ್ವರ ಪಾಶಾ, ನಿಂಗಣ್ಣ ಪೂಜಾರಿ, ಪೀರ ಪಾಶಾ, ದೇವರಾಜ ರಾಠೋಡ, ಸೇರಿಂದ ವಿವಿಧ ಸಮಾಜದ ಮುಖಂಡರು, ಸಾರ್ವಜನಿಕರು ಪಾಲ್ಗೊಂಡಿದ್ದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ, ಉಪಾಧ್ಯಕ್ಷ ಅರುಣ ಕದಮ್, ಕಾರ್ಯದರ್ಶಿ ಅನೀಲ ಸ್ವಾಮಿ, ವಾಸುದೇವ ಚವ್ಹಾಣ, ಬಾಬುರಾವ ಕೋಬಾಳ, ಖಜಾಂಚಿ ಅಶೋಕ ಕಪನೂರ, ಜಿಲ್ಲಾ ಕಾರ್ಯಕಾರಿ ಸದಸ್ಯರಾದ ಗುರುರಾಜ ಕುಲಕರ್ಣಿ, ನಾಗರಾಜ ಗದ್ದಿ, ವಿಜಯಕುಮಾರ ಜಿಡಗಾ, ಅವಿನಾಶ ಕೊಳ್ಳೂರ, ಡಾ.ತೀರ್ಥಕುಮಾರ ಬೆಳಕೋಟಾ, ಸಂಜೀವಕುಮಾರ ಕಾಂಬಳೆ ಅವರನ್ನು ಶಹಾಬಾದ ತಾಲೂಕ ಪತ್ರಕರ್ತರಿಂದ ಹಾಗೂ ಶಾಸಕ ಬಸವರಾಜ ಮತ್ತಿಮಡು ಅವರಿಂದ ಸತ್ಕರಿಸಲಾಯಿತು
ವರದಿ ನಾಗರಾಜ್ ದಂಡಾವತಿ
