"ಪ್ರಕೃತಿ'' ಕೃತಿಯ ಅವಲೋಕನ

"ಪ್ರಕೃತಿ'' ಕೃತಿಯ ಅವಲೋಕನ

"ಪ್ರಕೃತಿ'' ಕೃತಿಯ ಅವಲೋಕನ

– ಪ್ರೊ.ಶೋಭಾದೇವಿ ಚೆಕ್ಕಿ ಸೇಡಂ.

ಮನೋಹರ ಎನ್. ಮನಗುತ್ತಿಯವರು ಕಲ್ಯಾಣ ಕರ್ನಾಟಕದ ಭರವಸೆಯ ಕವಿ 'ಪ್ರಕೃತಿ' ಎನ್ನುವ ಇವರ ಕವನ ಸಂಕಲನವು 2025 ರಲ್ಲಿ ಸಿದ್ಧಾರ್ಥ ಪ್ರಕಾಶನ ಕಲಬುರಗಿ ವತಿಯಿಂದ ಪ್ರಕಟಗೊಂಡಿದೆ. ವೈವಿಧ್ಯಮಯ ವಿಷಯ ವಸ್ತುವನ್ನು ಒಳಗೊಂಡ 45 ಕವನಗಳು 'ಪ್ರಕೃತಿ' ಕೃತಿಯಲ್ಲಿ ಸಮಾವೇಶಗೊಂಡಿವೆ. ಮಸ್ತಕದ ಕೊನೆಯ ಭಾಗದಲ್ಲಿ ಕವಿ ಮನೋಹರ ಅವರು ತಮ್ಮ ಜೀವನಾನುಭವದ ಆಧಾರದ ಮೇಲೆ ಅರ್ಥಪೂರ್ಣವಾದ 30 ನುಡಿಮುತ್ತುಗಳನ್ನು ಪೋಣಿಸಿ

ಮನೋಹಂ ಮರಗುತ್ತಿಯವರು 'ಜನ್ಮಗ್ರಂಥ' ಎಂಬ ಕಾದಂಬರಿಯನ್ನು ರಚಿಸಿ ಕಾದಂಬರಿಕಾರ ಎಂಬ ಅಭಿದಾನಕ್ಕೆ ಭಾಜನರಾಗಿದ್ದಾರೆ. 'ಮುತ್ತುಗಳ ಸುತ್ತ' ಎಂಬ ಸಾಮಾನ್ಯ ಜ್ಞಾನದ ಕೃತಿಯನ್ನು 2018ರಲ್ಲಿ ಪ್ರಕಟಿಸಿದ್ದಾರೆ. 2019 ರಲ್ಲಿ 'ಪರಿವರ್ತನೆ" ಎಂಬ ಕಥಾ ಸಂಕಲನವನ್ನು ರಚಿಸಿ ಕತೆಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ 'ನೆನಪಿನ ಕಾಣಿಕೆ' ಎಂಬುದು ಇವರ ಚೊಚ್ಚಲ ಕವನ ಸಂಕಲನ ಕೃತಿಯಾಗಿದೆ. 'ವರದ ಮಗು' ಎಂಬ 2ನೆಯ ಕೃತಿ ಕಾವ್ಯ ಕೃತಿ 2020ರಲ್ಲಿ ಹೊರತಂದಿದ್ದಾರೆ. ಇದೀಗ ಅಂದರೆ 2025ರಲ್ಲಿ 'ಪ್ರಕೃತಿ' ಎಂಬ ಮೌಲಿಕ ಕಾವ್ಯ ಪುಷ್ಪವನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿ ನಿರುಮ್ಮಳರಾಗಿದ್ದಾರೆ.

ವೃತ್ತಿಯಿಂದ ಮುತ್ತೂಟ್ ಹಣಕಾಸು ಸಂಸ್ಥೆಯ ಸೀನಿಯರ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿರುವ ಮನೋಹರ ಅವರು ಪ್ರವೃತ್ತಿಯಿಂದ ಉತ್ತಮ ಬರಹಗಾರರಾಗಿದ್ದಾರೆ. ಪ್ರೀತಿಯ ಮಡದಿಯನನು ಕಳೆದುಕೊಂಡ ಮನೋಹರ ಅವರು ಓದು ಬರಹದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ತಮ್ಮ ಬದುಕಿನಲ್ಲಿ ಎದುರಾದ ನೋವು-ನಲಿವುಗಳನ್ನು ತಮ್ಮ ಸಾಹಿತ್ಯದಲ್ಲಿ ಎರಕ ಹೊಯ್ದಿದ್ದಾರೆ ಬಡತನ, ಹಸಿವು, ಅಸಹಾಯಕತೆ, ನಿರುದ್ಯೋಗ, ಅನ್ಯಾಯ, ಶೋಷಣೆ, ಅನಾಚಾರ, ತಾರತಮ್ಯವನ್ನು ತಮ್ಮ ಬರವಣಿಗೆಯಲ್ಲಿ ಚಿತ್ರಿಸುತ್ತ, ಸಾಮಾಜಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡಲು ಪ್ರಯತ್ನಿಸಿರುವುದು

ಶ್ಲಾಘನೀಯವಗಿದೆ.

'ಪ್ರಕೃತಿ' ಕವನ ಸಂಕಲನಕ್ಕೆ ಮಕ್ಕಳ ಕವಿಯೆಂದೇ ಹೆಸರಾ ಎ.ಕೆ. ರಾಮೇಶ್ವರ ಅವರು ಮುನ್ನುಡಿಯ ತೋರಣ ಕಟ್ಟಿಕೊಟ್ಟಿದ್ದಾರೆ. ಕವಿಗಳಲ್ಲಿ ದೊಡ್ಡ ಮನಸ್ಸಿರಬೇಕು. ದೂರದೃಷ್ಟಿ, ವಿಶಾಲ ಹೃದಯ ಇರಬೇಕು. ಒಬ್ಬ ಕವಿ ಇನ್ನೊಬ್ಬ ಕವಿಯ ಬಗ್ಗೆ ಬರೆಯು ಸಹೃದಯತೆ ಮನೋಹರ ಮರಗುತ್ತಿಯವರಲ್ಲಿದ್ದು, ತಮ್ಮ ಬಗ್ಗೆಯೇ ಬರೆದ 'ಸಂತೃಪ್ತ ಜೀವನ' ಕವನದ ಸಾಲುಗಳನ್ನು ಎತ್ತಿ ತೋರಿಸಿದ್ದಾರೆ.

"ಜ್ಞಾನದ ಶಿಖರ ಒಲುಮೆಯ ಸಂಕಾರ

ಮಕ್ಕಳಂತಹ ಮೃದು ಮನಸ್ಸುಳ್ಳ ರಾಮೇಶ್ವರ

ಸಾಹಿತ್ಯ ಲೋಕಕ್ಕೆ ಇವರ ಕೊಡುಗೆ ಅಪಾರ

ಮಕ್ಕಳ ಕವಿಯೆಂದೇ ಪ್ರಸಿದ್ಧವಾಗಿದೆ. ಇವರ ಹೆಸರ"

ಕವಿ ಭೀಮರಾಯ ಹೇಮನೂರ ಅವರ ನುಡಿಯಲ್ಲಿ ಪ್ರಕೃತಿಯನ್ನು ಪ್ರೀತಿಸುವ ಮನೋಹರ ಅವರು 'ಪ್ರಕೃತಿ' ಎಂಬ ಕಾವ್ಯ ಸಂಕಲನದಲ್ಲಿ, ಪ್ರಕೃತಿಯನ್ನು ನಾಶಗೊಳಿಸದೆ ಅದನ್ನು ಸಂರಕ್ಷಿಸಿದರೆ ಮನುಕುಲದ ಉಳಿಗಾಲವಿದೆ ಎಂದು ಎಚ್ಚರಿಸಿದ್ದನ್ನು ಕಾಣಬಹುದಾಗಿದೆ. ವಿಜ್ಞಾನ ಲೋಕದ ಧೃವತಾರ ಗಿರೀಶ ಕಡ್ಲೆವಾಡ್ ಅವರು 'ಚೆನ್ನುಡಿ' ಎಂಬ ಬರಹದಲ್ಲಿ ಉತ್ತಮ ಆರೋಗ್ಯಕ್ಕೆ ಶುದ್ಧ ಪರಿಸರ, ಗಾಳಿ, ನೀರು ಅತ್ಯವಶ್ಯಕ. ಇದನ್ನರಿತು ನಾವು ಪ್ರಕೃತಿ ಬಗ್ಗೆ ಕಾಳಜಿವಹಿಸಬೇಕಿದೆ ಎನ್ನುತ್ತ ಕವಿ ಮನೋಹರ ಅವರ ಪರಿಶ್ರಮಕ್ಕೆ ಧನ್ಯವಾದಗಳನ್ನರ್ಪಿಸಿದ್ದಾರೆ.

ಲಕ್ಷ್ಮೀಪುತ್ರ ಸಿ. ಹುಲಿಯವರು ಮನೋಹರ ಮರಗುತ್ತಿಯವರ ಕೌಟುಂಬಿಕ ಜೀವನ, ವೃತ್ತಿ ಬದುಕು ಸಮಾಜ ಹಾಗೂ ಸಾಹಿತ್ಯ ಸೇವೆಯ ಕುರಿತಾಗಿ ಪರಿಚಯಾತ್ಮಕ ಬರಹವನ್ನು ಕಟ್ಟಿಕೊಟ್ಟಿದ್ದಾರೆ. 'ಪ್ರಕೃತಿ' ಕೃತಿಯ ಪ್ರಕಾಶಕರಾದ ಡಾ. ಕೆ.ಎಸ್. ಬಂಧು ಸಿದ್ಧೇಶ್ವರ ಅವರು ಸಿದ್ಧಾರ್ಥ ಪ್ರಕಾಶನ ಕಲಬುರಗಿಯ ದಲಿತ, ಬಂಡಾಯ, ಯುವ ಸಾಹಿತಿಗಳ ಹಾಗೂ ಮಹಿಳಾ ಚಿಂತಕರ ಕೃತಿಯನ್ನು ಪ್ರಕಟಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದ್ದು, ಪ್ರಸ್ತುತ ಕವಿ ಮನೋಹರ

ಮರಗುತ್ತಿಯವರು ಪ್ರಕೃತಿ ಎಂಬ ಕವನ ಸಂಕಲನದಿಂದ ಜನಜಾಗೃತಿ ಮೂಡಿಸುತ್ತಿರುವುದು ಮೆಚ್ಚುವಂಥದ್ದು ಎಂದಿದ್ದಾರೆ. ಲೇಖಕರ ನುಡಿಯಲ್ಲಿ ಮನೋಹರ ಮರಗುತ್ತಿಯವರು ಪ್ರಕೃತಿಯನ್ನು ಘೋಷಿಸಬೇಕಾದುದು ಪ್ರತಿಯೊಬ್ಬರ ಕರ್ತವ್ಯವೆಂದು ಮನವರಿಕೆ ಮಾಡಿಕೊಂಡಿದ್ದಾರೆ.

ಅಲ್ಲದೆ ಒಟ್ಟು ತಮ್ಮ ಆರು ಕೃತಿಗಳ ಬಗ್ಗೆ ಅಭಿಪ್ರಾಯ ತಿಳಿಸಿದ ಲೇಖಕರನ್ನು ಸ್ಮರಿಸಿದ್ದಾರೆ. 'ವರದ ಮಗು' ಕವನ ಸಂಕಲನಕ್ಕೆ ಮುನ್ನುಡಿ ಬರೆದಿರುವ ಕನಕ ಯುವ ಪ್ರಶಸ್ತಿ ಪುರಸ್ಕೃತರಾದ ಡಾ. ಗವಿಸಿದ್ದಪ್ಪ ಹೆಚ್. ಪಾಟೀಲರನ್ನು ಬೆನ್ನುಡಿ ಬರೆದ ಶ್ರೀ ವಿಜಯ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾದ ಡಾ. ಜಯದೇವಿ ಗಾಯಕವಾಡ ಅವರನ್ನು ತುಂಬು ಹೃದಯದಿಂದ ಸ್ಮರಿಸಿದ್ದಾರೆ. ಡಾ. ಸದಾನಂದ ಪೆರ್ಲ ಅವರು, ಕವಿ ಮನೋಹರ ಅವರು ಕಾಂಚಾಣದ ವ್ಯವಹಾರ ಕ್ಷೇತ್ರದಲ್ಲಿದ್ದರೂ ಅಕ್ಷರ 'ಪ್ರಕೃತಿ'ಯಂತಹ ಮೌಲಿಕ ಕೃತಿಯನ್ನು ನೀಡಿರುವುದು ಅವರಲ್ಲಿರುವ ಕಾವ್ಯಶಕ್ತಿ ಹಾಗೂ ಸಮಾಜಮುಖಿ ಕಾಳಜಿ ಎದ್ದು ಕಾಣುತ್ತಿದೆ ಎಂದು ಈ ಕೃತಿಯ ಬೆನ್ನುಡಿಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಪ್ರಕೃತಿ' ಕವನವು

ಪ್ರಕೃತಿ, ಪ್ರಾಣಿ, ಪಕ್ಷಿಗಳ ಒಂದು ಸುಂದರ ತೋಟ ನಿನ್ನಿಂದಾಗದಿರಲಿ ಅವುಗಳಿಗೆ ಕಾಟ ಗಿಡಮರಗಳಿಗೆ ಬೇಡ ಕೊಡಲಿ ಪೆಟ್ಟು ಅವುಗಳೊಂದಿಗಿದ ನಿನ್ನ ಜೀವನದ ನಂಟು ಎಂಬ ಸುಂದರ ಚಿತ್ರಣವನ್ನೊಳಗೊಂಡಿದೆ.

ಈ ಕೃತಿಯಲ್ಲಿ ಬಂಡಾಯದ ಬಹಾದ್ದೂರ ಡಾ. ಚನ್ನಣ್ಣ ವಾಲಿಕಾರ ಅವರ ನೆನಹು ಹೆಪ್ಪುಗಟ್ಟಿ ನಿಂತಿದೆ. ಉತ್ತಮ ಶಿಕ್ಷಕ ಡಾ. ಕೆ.ಎಸ್. ಬಂಧು ಅವರ ಮಾನವೀಯತೆಯ ಮಂದಾರ ಅರಳಿನಿಂತಿದೆ. ಡಿಜಿಟಲ್ ಗ್ರಂಥಾಲಯದ ಪಿತಾಮಹ ಸತೀಶಕುಮಾರ ಹೊಸಮನಿ ಮುಂತಾದ ಮಹನೀಯರ ಕುರಿತಾದ ಕವನಗಳು ಸೊಗಸಾಗಿ ಮೂಡಿಬಂದಿವೆ.

ತಾಯಿ' ಎಂಬ ಕವನವು ಮಾತೆಯ ಮಹತ್ವವನ್ನು ತಿಳಿಸಿದರೆ 'ಯಾವುದು ಹರಕೆ' ಎಂಬ ಕವನವು

' ಎಲ್ಲೋ ಇರುವ ದೇವರನ್ನು ಹುಡುಕಬೇಡಿ ವ್ರತ, ನೇಮ, ಉಪವಾಸ ದೇವರಿಗೆ ಬೇಕಿಲ್ಲ ಹೆತ್ತವರಿಗೆ ಉಪವಾಸ ಹಾಕಿದರೆ ದೇವರು ಮೆಚ್ಚುವುದಿಲ್ಲವೆಂದು ತಿಳಿಸಿದೆ.

ಜನ್ಮ ಕೊಟ್ಟವರೆ ದೇವರು ಮರೆಯದಿರಿ

ಕೊರೊನಾ ಕುರಿತಾದ ಕವನದಲ್ಲಿ ಕವಿ ಮನೋಹರ ಅವರು 'ಮನೆಗೊಂದು ಮರ ಬೇಕು, ಊರಿಗೊಂದು ವನ ಬೇಕು' ಸರಕಾರದ ನಿಯಮ ಪಾಲಿಸಬೇಕು. ಕೊರೋನಾದಿಂದ ಮುಕ್ತರಾಗಬೇಕು ಎಂದು ಸಷ್ಟಡಿಸಿದ್ದಾರೆ. ಹೆಣ್ಣು ಎಂದು ಜರಿಯಬೇಡಿ ಹಣ್ಣೆ ಸಂಸಾರದ ಕಣ್ಣು ಮರೆಯಬೇಡಿ, ಹೆಣ್ಣು ಕೇವಲ ಭೋಗಕ್ಕೆಂದು ತಿಳಿಯಬೇಡಿ, ಬಾಳಿನ ಭಾಗ್ಯದೇವತೆ ಮರೆಯಬೇಡಿ, ಹೆಣ್ಣಿದ್ದರೆ ಲೋಕ, ಇಲ್ಲದಿದ್ದರೆ ಶೋಕ, ಹೆಣ್ಣಿನಿಂದಲೇ ಸೃಷ್ಟಿ, ಹೆಣ್ಣಿನಿಂದಲೇ ವೃದ್ಧಿ ಎಂಬುದಾಗಿ 'ಹೆಣ್ಣು' ಎಂಬ ಕವನದಲ್ಲಿ ಹೆಣ್ಣಿನ ಅವಶ್ಯಕತೆ ಮತ್ತು ಆಕೆಯ ಮಹತ್ವವನ್ನು ಎತ್ತಿ ತೋರಿಸಿದ್ದಾರೆ.

ನಮ್ಮ ಕನ್ನಡ ನಾಡು ಸಂಸ್ಕೃತಿಯ ನೆಲೆಬೀಡು ಗಾನ ಕೋಗಿಲೆಗಳ ತವರೂರು

ಸಂಗೀತ ಸಾಹಿತ್ಯಕ್ಕೆ ಹೆಸರಾದ ಕನ್ನಡ ನಾಡು

ಶಿಲ್ಪಕಲೆಗಳ ಸೌಂದರ್ಯದ ನಾಡು ಎಂಬುದಾಗಿ ಕವಿ ಮನೋಹರ ಅವರು ಮನದುಂಬಿ ಹಾಡಿದ್ದಾರೆ. ಮನಸೊಂದಿದ್ದರೆ ಮಾರ್ಗಗಳು ಹಲವು, ಉಸಿರಿರುವವರೆಗೆ ಸಾಧನೆ ಮಾಡುತ್ತಿರಬೇಕು. ಅದು ಇನ್ನೊಬ್ಬರಿಗೆ ಇನ್ನೊಬ್ಬರಿಗೆ ಸ್ಫೂರ್ತಿಯಾಗಬೇಕು ಸ್ಫೂರ್ತಿಯಾಗದೇ ಎಂಬುದಾಗಿ “ಸಾಧನೆಗೆ ಸಾವಿರಾರು ದಾರಿಗಳು' ಎಂಬ ಕವನದ ಸಲಹೆ ನೀಡಿದ್ದಾರೆ. ಮಳೆ, ಬೇವು ಬೆಲ್ಲ, ಆಸೆಗೆ ಮಿತಿ ಇರಲಿ, ಅಹಂಕಾರ, ಕಷ್ಟ-ಸುಖಗಳು, ಅಕ್ಷರದವ್ವ, ಬಲಿಯಾಗಬೇಡ ಮುಂತಾದ ಕವನಗಳು ಓದುಗರ ಗಮನ ಸೆಳೆಯುತ್ತವೆ. ಕೆಲವು ಕವನಗಳು ಚಿಂತನೆಗೆ ಹಚ್ಚುತ್ತವೆ. ಬದಲಾವಣೆಯತ್ತ ಮುಖ ಮಾಡಲು ಪ್ರೇರೆಪಿಸುತ್ತವೆ. ಸಜ್ಜನರಾಗಲು ಸ್ಫೂರ್ತಿ ನೀಡುತ್ತವೆ. ಬದುಕು ಸಾರ್ಥಕಗೊಳಿಸಿಕೊಳ್ಳಲು ದಾರಿ ತೋರಿಸುತ್ತವೆ. ಒಟ್ಟಾರೆಯಾಗಿ ಮನೋಹರ ಮರಗುತ್ತಿಯವರ 'ಪ್ರಕೃತಿ' ಕವನ ಸಂಕಲನವು ಓದುಗ ಮನ ತಲುಪಿ, ಯಶಸ್ಸನ್ನು ಕಂಡಿದೆ.