.ಅ.ಬಾ. ಚಿಯವರ ಹೊನ್ನ ಹೂಗಳು
.ಅ.ಬಾ. ಚಿಯವರ ಹೊನ್ನ ಹೂಗಳು
ಸೊಲ್ಲಾಪೂರ ಜಿಲ್ಲೆಯ ಹಿರಿಯ ಸಾಹಿತಿಗಳು ನಿವೃತ್ತ ಶಿಕ್ಷಕರೂ ಹಾಗೂ ಕನ್ನಡ ಪರ ಹೋರಾಟಗಾರ ಅ.ಬಾ.ಚಿಕ್ಕಮಣ್ಣೂರ ಯವರು.ಅ. ಬಾ ಚಿ.ಗುರೂಜಿ ಹೆಸರಿನಿಂದ ಪ್ರಸಿದ್ಧಿ ಪಡೆದವರು. ತಮ್ಮ ವೃತ್ತಿಯ ಜೊತೆಗೆ ತಾಯಿ ನುಡಿ ಕನ್ನಡ ಕಂಪನ್ನು ಕಾವ್ಯ ಕಿರುನಾಟಕ ಮಕ್ಕಳ ಸಾಹಿತ್ಯ ನೃತ್ಯಗೀತೆಗಳ ಹರಡುತ್ತಿರುವ ಭಾವ ಜೀವಿ ಕನ್ನಡಸಾಹಿತ್ಯ ಪರಿಷತ್ ಅಜೀವ ಸದಸ್ಯರು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗಡಿನಾಡು ಪ್ರತಿನಿಧಿಯಾಗಿ ಕೆಲಸ ಮಾಡಿದ್ದಾರೆ. ಹೊನ್ನ ಹೂಗಳು ಕವನ ಸಂಕಲನ ಮೂಲಕ ತಮ್ಮ ಅಭಿವ್ಯಕ್ತಿ ವಲಯವನ್ನು ವಿಸ್ತರಿಸಿಕೊಂಡಿದ್ದಾರೆ..
ಅದೋ ನೋಡು ಮಳ್ಳಿ ಅಗಬ್ಯಾಡ ಕಳ್ಳಿ. ಸೊನ್ನಲಿಗಿಸಿದ್ದ ರಾಮ ಎಲ್ಲಿ ?ಕಾನಡಿ ವಿಠಲನೆ ಲಿಸಿದನು ಯಾಕ ಪಂಢರಿಪೂರ ಕ್ಷೇತ್ರದಲ್ಲಿ..
ಕನ್ನಡ ಭಾಷೆಯ ಅಭಿಮಾನದ ಜೊತೆಗೆ ಸ್ವಾಭಿಮಾನ ಬೆಳೆಸಿಕೊಳ್ಳಬೇಕು ಮನೆ ಹಾಗೂ ಮನ ಬೆಳಗುವಕೆಲಸ ಮಾಡಬೇಕಾಗಿದೆ. ತಾಯಿ ನುಡಿ ಮರೆತರೆ ಹೆತ್ತ ತಾಯಿಯನ್ನು ಮರೆ೦ತೆ ಸಿದ್ದರಾಮೇಶ್ವರರು ಕರ್ನಾಟಕದವರು ಆದರೆ ಮರಾಠಿ ನೆಲದಲ್ಲಿ ನಂದಾ ದೀಪವಾಗಿ ಬೆಳಗುತ್ತಿರುವುದು ಪ್ರತಿಯೊಬ್ಬ ಕನ್ನಡಿಗರಿಗೆ ಸಂತೋಷದ ವಿಷಯ ವಿಠಲ ದೇವ ಕರ್ನಾಟಕದವರು ಲಕ್ಷಾಂತರ ಭಕ್ತರಿಗೆ ದರ್ಶನ ನೀಡುತ್ತಿದ್ದಾನೆ.ಚಾಲುಕ್ಯರು ಮಹಾರಾಷ್ಟವನ್ನು ಆಳ್ವಿಕೆ ಮಾಡಿದ ಇತಿಹಾಸದ ಪುಟಗಳಲ್ಲಿ ನೋಡಬಹುದು..
ಬೆರತು ಬಾಳುವ ಮತಿವಂತ ಜನಗಳು .
ನನ್ನ ಬಂಧು ಬಳಗ ಅ.ಬ. ಚಿ.ಗುಡಿಯಲ್ಲಿ ಕನ್ನಡತಿ ಕುಂತಾಳ ನಮಿಸಿ - ಬಾರ ಒಳಗ..
ಮರಾಠಿ ನೆಲದಲ್ಲಿ ಕನ್ನಡ ಅಕ್ಷರ ಬಿತ್ತಿ ಕನ್ನಡ ನಾಡನ್ನು ಕಟ್ಟಿ ಕನ್ನಡ ಕಹಳೆ ಇಂದಿಗೂ ಸಹ ಕೇಳಿಸುತ್ತಿದೆ. ಇದೇ ಕನ್ನಡ ಕಟ್ಟಾಳು ಅ.ಬಾ. ಚಿಯವರ ಕನ್ನಡ ಪರ ನಿಲುವು ಕನ್ನಡ ಅಭಿಮಾನ ಇಂದಿಗೂ ಉಸಿರಾಡುತ್ತಿದೆ. ಮನೆಯಲ್ಲಿ ನೂರಾರು ಕನ್ನಡ ಸಾಹಿತ್ಯ ಕೃತಿಗಳು ಓದುಗರಿಗೆ ನೀಡಿ ಕನ್ನಡ ಹಾಗೂ ಸಾಹಿತ್ಯದ ಅಭಿರುಚಿ ಹಾಗೂ ಕನ್ನಡ ಕಲಿಸುವ ಸೇವೆ ಮಾಡುತ್ತಿದ್ದಾರೆ. ಇವರ ಅನೇಕ ಕವನಗಳು ಮಹಾರಾಷ್ಟ ರಾಜ್ಯದ ಕನ್ನಡ ಪಠ್ಯ ಪುಸ್ತಕ ಬಾಲಭಾರತಿಯಲ್ಲಿ ಪ್ರಕಟಗೊಂಡಿವೆ. ಹೀಗೆ ಕನ್ನಡ ಭಾಷೆ ಜೀವನದ ಉಸಿರು ಅಂದರೆ ತಪ್ಪಗಲಾರದು 75 ರ ವಯಸ್ಸಿನಲ್ಲಿ ಇಂದಿಗೂ ಸಹ ಕನ್ನಡಕ್ಕೆ ಕುತ್ತು ಬಂದರೆ ಹೋರಾಟ ಮಾಡುವ ಸ್ವಾಭಿಮಾನಿ ಹೋರಾಟಗಾರ ಅ.ಬಾ .ಚಿ. ಗುರೂಜಿ ಯೆಂದರೆ ತಪ್ಪಗಲಾರದು.
ಗಡಿ ನೆಲದ ಕಣ ಕಣದಲ್ಲಿ ಮಹಾರಾಷ್ಟದ ಸೆರಗಿನಲ್ಲಿ ಜತ್ತ ಸಾಂಗ್ಲಿ ಸೋಲ್ಲಾಪೂರ ಅಕ್ಕಲಕೋಟ ಮನೆ ಮನೆಯಲ್ಲಿ ತಾಯಿ ಕನ್ನಡಾಂಭೆಯ ಕಂಡು ಧನ್ಯನಾದೆ ?
ಮಹಾರಾಷ್ಟ ನೆಲದಲ್ಲಿ ಕನ್ನಡ ಮನೆ ಮನೆಯಲ್ಲಿ ಮನ ಮನದಲ್ಲಿ ಉಸಿರಾಡುತ್ತಿದೆ. ಇದಕ್ಕೆ ಕಾರಣ ಕನ್ನಡಿಗರು ನಾಡಿ - ನಾಡಿಯಲ್ಲಿ ಹರಿಯುತ್ತಿರುವುದು ಕನ್ನಡ ಹಾಗೂ ಕನ್ನಡತನ ಇಂದಿಗೂ ಸಹ ಬೆಳೆಸಿಕೊಂಡು ಬರುತ್ತಿರುವುದು ಭಾಷೆಯ ಮೇಲೆ ಇಟ್ಟಿರುವ ಅಭಿಮಾನವೇ ಸಾಕ್ಷಿ ಅಕ್ಕಲಕೋಟ ದಕ್ಷಿಣ ಸೋಲ್ಲಾಪೂರ ಜತ್ತ ಹೀಗೆ ಹತ್ತು ಹಲವು ಪ್ರದೇಶಗಳಲ್ಲಿ ಕನ್ನಡ ಇಂದಿಗೂ ಸಹ ಆಡು ಭಾಷೆಯಾಗಿರುವುದು.ಕರ್ನಾಟಕ ದೂರ ಇದ್ದರೂ ಕನ್ನಡ ಹತ್ತಿರ ಹತ್ತಿರ ಮಹಾರಾಷ್ಟದ ನೆಲದಲ್ಲಿ ಆಗಿಹೋದ ಹೋರಾಟಗಾರರ ಸಾಹಿತಿಗಳ ರಾಜಕಾರಣಿಗಳ ಹೋರಾಟದ ಫಲವಾಗಿ ಕನ್ನಡ ಕಣ ಕಣದಲ್ಲಿ ಹರಿಯುತ್ತಿರುವುದು.
ಪದವಿ ಗೌರವಗಳಿಗೆ
ಹಾತೊರೆಯದೆ .
ಕಾಯಕ ನಿಷ್ಟೆಯಲ್ಲಿ ಪಳಗಿದವರು.
ಮುಂಬಯಿ ಮಹಾನಗರದಲ್ಲಿ ಲಕ್ಷಾಂತರ ಜನರಲ್ಲಿ ಬಂಟರು ಸಹ ಒಬ್ಬರು ತಮ್ಮ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕನ್ನಡವನ್ನು ಪ್ರೀತಿಸಿದವರು. ಆಶೆ ಆಮಿಷಗಳಿಗೆ ಆಶೆ ಪಡದೇ ಪದವಿ ಗೌರವಗಳಿಗೆ ಬೆನ್ನು ಹತ್ತದೆ ಕಾಯಕ ಯಾವುದೇ ಇದ್ದರೂ ಕೂಡ ಬಡ ಬಗ್ಗರಿಗೆ ಆಶ್ರಯ ನೀಡಿ ಕೆಲಸ ನೀಡಿ ಮಾನವೀಯತೆಯ ಗುಣಗಳನ್ನು ಬೆಳೆಸಿಕೊಂಡವರು ಮು೦ಬಯಿಯಲ್ಲಿ ಕನ್ನಡವನ್ನುಉಳಿಸಿ ಬೆಳಸುವುದರಲ್ಲಿ ಪ್ರಮುಖ ಪಾತ್ರವಿದೆ. ಕಾಯಕ ಹಾಗೂ ಕನ್ನಡ ಭಾಷೆ ನಿಕಟ ಸಂಬಂಧ ಇರುವುದರಿಂದ ಬಂಟರುಮುಂಬಯಿಯಲ್ಲಿ ಹೋಟೇಲ ಉದ್ಯಮ ರಾಜಕೀಯ ಚಲನಚಿತ್ರ ಪೋಲಿಸ ಇಲಾಖೆ ಎಲ್ಲ ತರದಲ್ಲಿ ಬಂಟರ ಹೆಜ್ಜೆ ಗುರುತು ಕಾಣಬಹುದು..
ಹಸಿರು ತೋರಣ ಉಡುಗೆ ತೊಡಿಸಲು
ಕುಮಾರ ಪಡೆದಿ ನಾಡಿಗೆ .
ಜನನಿ ಹೆತ್ತು ಧಾರೆ ಎರೆದಿ. ಸುವರ್ಣ ಕನ್ನಡ ತಾಯಿಗೆ .
ಮಾಜಿಮುಖ್ಯಮಂತ್ರಿ ಹಾಗೂ ಕೇಂದ್ರ ಮಂತ್ರಿಗಳಾದ ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿಯವರು ಬಡವರ ದೀನ ದಲಿತರ ಹೀಗೆ ನಾಡಿನ ಜನರ ಸಮಸ್ಯೆಗಳನ್ನು ಬಗೆಹರಿಸಿದವರು ಅಧಿಕಾರ ಇದ್ದರೂ ಅಧಿಕಾರ ಹೋದರೂ ಜನಪರ ಯೋಜನೆಗಳನ್ನು ಜಾರಿಗೆ ತಂದು ನಾಡಿನ ಜನರ ನಾಡಿಮಿಡಿತ ಕಂಡವರು. ಕುಮಾರಸ್ವಾಮಿಯನ್ನು ನಾಡಿಗೆ ಕೊಡುಗೆಯಾಗಿ ನೀಡಿದ ತಾಯಿಗೆ ಅಭಿನಂದನೆ ಸಲ್ಲಿಸಲೇ ಬೇಕು ಕುಮಾರಸ್ವಾಮಿಯವರ ಕಾರ್ಯಗಳು ಹೀಗೆ ನಿರಂತರವಾಗಿರಲಿ.
ಲೇಖಕರಾದ ಅ.ಬಾ. ಚಿಕ್ಕಮಣ್ಣೂರ ಯವರ ಸಾಹಿತ್ಯ ಸೇವೆ ಹಾಗೂ ಕನ್ನಡ ಪರ ಹೋರಾಟ ಪ್ರತಿಯೊಬ್ಬ ಕನ್ನಡಿಗ ರಿಗೆ ಸ್ಫೂತಿ೯ ಹಾಗೂ ದಾರಿದೀಪ..
ಲೇಖಕರು: ದಯಾನಂದ ಪಾಟೀಲ ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ ಮಹಾರಾಷ್ಟ
