ಡಾ ಎಸ್ ಎಂ ಹಿರೇಮಠ

ಡಾ ಎಸ್ ಎಂ ಹಿರೇಮಠ

*ಸಾರ್ಥಕ ಬದುಕಿನ ಸಾಧಕರು-ವಿಶೇಷ ವ್ಯಕ್ತಿ ಪರಿಚಯ*

*ವೀರಶೈವ ಸಾಹಿತಿ ಚರಿತ್ರೆ ಕಾರ ಡಾ.ಎಸ್.ಎಂ.ಹಿರೇಮಠ ಕಾರ್ಯ ಶ್ಲಾಘನೀಯ*

*ಮತ್ತು ಏಳನೇ ಸಂಪುಟದ ಮಹತ್ವ*

ಕನ್ನಡ ಸಾಹಿತ್ಯ ಲೋಕದಲ್ಲಿ ಅದ್ವಿತೀಯ ಸಾಧನೆಯ ಶಿಖರ ಏರಿದವರಲ್ಲಿ ಡಾ. ಎಸ್.ಎಂ. ಹಿರೇಮಠ ಒಬ್ಬರು.

ಅವರೊಬ್ಬ ಕಲಾತಪಸ್ವಿಗಳು, ಸಾಹಿತ್ಯದ ಜಗದ್ಗುರುಗಳು ಹೌದು. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನಿಂಬರಗಿ ಗ್ರಾಮದವರು.ಶ್ರೀಮತಿ ನೀಲಮ್ಮ-ಪುರಾಣರತ್ನ ಮಹಾಂತಯ್ಯ ಸ್ವಾಮಿ ಇವರ ತಂದೆ- ತಾಯಿಗಳು. ೨೨-೦೭-೧೯೫೬ ರಂದು ಜನಿಸಿದರು.ಎಂ.ಎ: ಪಿಎಚ್.ಡಿ. ಡಿ.ಲಿಟ್ ಪದವಿ ಹೊಂದಿದವರು.ಎಂ.ಎ.ಕನ್ನಡ ದಲ್ಲಿ ಪ್ರಥಮ ರ್ಯಂಕ ಮತ್ತು ಚಿನ್ನದ ಪದಕ ಪಡೆದ ಪ್ರತಿಭಾನ್ವಿತರು.

ವೃತ್ತಿ ಕಾಯದಲಿ ನಿರತರು:ಅರೆಕಾಲಿಕ ಕನ್ನಡ ಅಧ್ಯಾಪಕ (ಶ್ರೀ ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯ, ಕಲಬುರಗಿ-೧೯೮೨-೮೫)

ಕನ್ನಡ ಅಧ್ಯಾಪಕ (ಖಾಯಂ),(ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ-೧೯೮೫-೧೯೯೫),ಕನ್ನಡ ಅಧ್ಯಾಪಕ-ಪ್ರವಾಚಕ-ಪ್ರಾಧ್ಯಾಪಕ (ಗುಲ್ಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ, ೧೯೯೫-೨೦೧೮ ) ಮೂವತ್ತಾರು ವರ್ಷಗಳ ಕಾಲ ಬೋಧನೆ,ಸಂಶೋಧನೆ, ಮಾರ್ಗದರ್ಶನ,ಅಧ್ಯಯನ, ಅಧ್ಯಾಪನ,ಮಾಡುತ್ತಲೇ ಪ್ತಮಾಣಿಕ,ಸತ್ಯ,ನಿಷ್ಠೆಯ ಗುರುಗಳು.ಗುಲಬರ್ಗಾ ವಿಶ್ವವಿದ್ಯಾಲಯದ ಬಸವಾದಿ ಶರಣ ಸಾಹಿತ್ಯ ಕೇಂದ್ರ, ನಿಜಶರಣ ಅಂಬಿಗರ ಚೌಡಯ್ಯ,ಹಡಪದ ಅಪ್ಪಣ್ಣ, ಹೇಮರೆಡ್ಡಿ ಮಲ್ಲಮ್ಮ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಇಪ್ಪತ್ತೈದು ಪಿಎಚ್.ಡಿ ಪದವಿ ಪಡೆದವರು ಇದ್ದಾರೆ.

ದಾಂಪತ್ಯ- ಕುಟುಂಬ:ಶ್ರೀಮತಿ ಅಮರಾವತಿ ಹಿರೇಮಠ ಅವರನ್ನು 01-2-1985 ರಲ್ಲಿ ವಿವಾಹವಾದರು. ಇವರಿಗೆ ಮಗಳು ಡಾ. ಅಶ್ವಿನಿ ಹಿರೇಮಠ,DCH, DNB, DM Neuro ,ಅಳಿಯ ಡಾ. ಮಡಿವಾಳ ಸ್ವಾಮಿ ಢವಳಗಿ ಮಠ, M.D. (Gen Medi) D.M (Cardio)

ಮಗ ಮಹಾಂತೇಶ ಹಿರೇಮಠ, ಎಂ.ಟಿ.ಎ,ಸೊಸೆ ಚೇತನಾ ಹಿರೇಮಠ, ಎಂ.ಎ., ಬಿ.ಇಡಿ.,ಮೊಮ್ಮಗಳು ಪ್ರಾರ್ಥನಾ ಹಿರೇಮಠ,ಮಗಳು- ಅಳಿಯ,ಮಗ-ಸೊಸೆ, ಮೊಮ್ಮಗಳು ಸಹ ಹೊಂದಿ ಸಂತೃಪ್ತ ಜೀವನ ಹೊಂದಿದರು.ಇವರ ಪತ್ನಿ ಶ್ರೀಮತಿ ಅಮರಾವತಿ ಅವರು ಸಹ ಹಲವಾರು ಕವನ,ಲೇಖನ, ಬರೆದಿದ್ದು ಎರಡು ಕೃತಿ ಪ್ರಕಟವಾಗಿವೆ.

ಇವರಿಗೆ ಸಂದ ಮಹತ್ವದ ಗೌರವಗಳು :

೧. ಡಿ.ಲಿಟ್ ಪದವಿ-ಶರಣಬಸವ ವಿಶ್ವವಿದ್ಯಾಲಯ ಕಲಬುರಗಿ (೨೦೨೧)

3. ಚಿನ್ನದ ಪದಕ ಪುರಸ್ಕಾರ-ಮುಂಬೈ ವಿಶ್ವವಿದ್ಯಾಲಯ, ಕನ್ನಡ ವಿಭಾಗ (೨೦೧೫)

3. "ಬೆಸ್ಟ್ ಸಿಟಿಝನ್ ಆಫ್ ಇಂಡಿಯಾ" ಅವಾರ್ಡ್~ದಿ ಇಂಟರ್ ನ್ಯಾಶನಲ್ ಪಬ್ಲಿಶಿಂಗ್ ಹೌಸ್, ನ್ಯೂ ದೆಹಲಿ (೨೦೧೭).

"ಶಿವಕಮಲ" ಪ್ರಶಸ್ತಿ-ಜಗದ್ಗುರು ಜ್ಞಾನಸಿಂಹಾಸನ, ಜಂಗಮ ವಾಡಿಮಠ, ವಾರಣಾಸಿ (2000).

5. ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷತೆಯ ಗೌರವ-ಆಳಂದ ತಾಲ್ಲೂಕಾ ಎರಡನೇ ಸಾಹಿತ್ಯ ಸಮ್ಮೇಳನ ಪಡಸಾವಳಿ (೨೦೦೩)

6.ಬೀದರ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಹಾರಕೂಡ ಶ್ರೀ ಚೆನ್ನಬಸವೇಶ್ವರ ಸಂಸ್ಥಾನ ಹಿರೇಮಠದಿಂದ ಎರಡು ತೊಲೆ ಚಿನ್ನದ ಪದಕ ಒಂದು ಲಕ್ಷ ರೂ. ನಗದು ಹೊಂದಿರುವ ಪ್ರಶಸ್ತಿ ಫಲಕದೊಂದಿಗೆ ಪ್ರತಿಷ್ಠಿತ " ಶ್ರೀ ಚೆನ್ನ-ರೇಣಕ-ಬಸವ " ಪ್ರಶಸ್ತಿ (೨೦೨೫).

7.ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ಕೊಡಮಾಡುವ ಜೀವಮಾನದ ಸಾಹಿತ್ಯ ಸೇವೆಗೆ ಸಾಹಿತ್ಯ ಶ್ರೀ ಪ್ರಶಸ್ತಿ ಲಭಿಸಿವೆ.

ಡಾ.ಎಸ್.ಎಂ.ಹಿರೇಮಠರ ಸಾಹಿತ್ಯಾವಲೋಕನ ಕಾವ್ಯ

1. ಕವಿಯಲ್ಲದವನ ಕವನಗಳು ಭಾಗ-೧ (ನೂರು ಕವನಗಳು)

2.ಕವಿಯಲ್ಲದವನ ಕವನಗಳು ಭಾಗ-೨ (ನೂರು ಕವನಗಳು)

3.. ಕವಿಯಲ್ಲದವನ ಕವನಗಳು ಭಾಗ-೩, (ನೂರು ಕವನಗಳು)

4. ಕವಿಯಲ್ಲದವನ ಕವನಗಳು ಭಾಗ-೪ (ನೂರು ಕವನಗಳು).

5.ಕವಿಯಲ್ಲದವನ ಕವನಗಳು ಭಾಗ-೬ (ನೂರು ಕವನಗಳು)

6. ಕವಿಯಲ್ಲದವನ ಕವನಗಳು ಭಾಗ-೫ (ನೂರು ಕವನಗಳು)

7. ಕವಿಯಲ್ಲದವನ ಕವನಗಳು ಭಾಗ-೭ (ನೂರು ಕವನಗಳು)

.8.ಕವಿಯಲ್ಲದವನ ಕವನಗಳು ಭಾಗ-೮ (ನೂರು ಕವನಗಳು)

9.ಕವಿಯಲ್ಲದವನ ಕವನಗಳು ಭಾಗ-೯ (ನೂರು ಕವನಗಳು)

೧೦. ಕವಿಯಲ್ಲದವನ ಕವನಗಳು ಭಾಗ-೧೦ (ನೂರು ಕವನಗಳು)

೧೧. ಮಹಾದಾಸೋಹಿಯ ದಾಸೋಹಗಾಥೆ (ಖಂಡಕಾವ್ಯ)

ನಾಟಕ

೧೨. ಕನ್ನಡ ವಾಹ್ಮಯ ವೈಜಯಂತಿ

೧೩. ಕಡಕೋಳ ಮಡಿವಾಳ ಶಿವಯೋಗಿ

೧೪. ಶಿವಜ್ಯೋತಿ

'೧೫. ಸಿರಡಿ ಸಂತ

೧೬. ಮಹಾದಾಸೋಹಿ

೧೭. ಮೂರು ಮೆಟ್ಟಿಲಕತೆ

೧೮. ಅತೃಪ್ತ ಆತ್ಮಗಳು

೧೯. ಮಹಿಳೋತ್ತಮೆ

೨೦. ದಳ್ಳುರಿ

೨೧. ಜ್ವಾಲೆ

೨೨. ಪರಾಶರ

೨೩. ಚಿನ್ನರ ಬಣ್ಣದ ಲೋಕ (ಮಕ್ಕಳ ನಾಟಕಗಳು)

೨೪. ಏಕಲವ್ಯ

೨೫. ಧರ್ಮವ್ಯಾಧ

೨೬. ಸತ್ಯಕಾಮ ಜಾಬಾಲ

೨೭. ಭೀಷ್ಮ ಪ್ರತಿಜ್ಞೆ

೩೦. ಸಮಾಜ ಸುಧಾರಣಾ ಸಮಿತಿ

೩೧. ಫಿಲಂ ಇಂಟರ್‌ವ್ಯೂವ್

೩೨. ಕೈವಲ್ಯ 22. 2

೩೪. ಹಸಿವು

೩೫. ಕೊನೆಯ ಎಲೆ

೩೬. ಮೆತ್ತನಕಲ್ಲು

೩೭. ಡಾ. ಎಸ್.ಎಂ. ಹಿರೇಮಠರ ನಾಟಕಲೋಕ-ಭಾಗ-೧.

೩೮. ಡಾ. ಎಸ್.ಎಂ. ಹಿರೇಮಠರ ನಾಟಕಲೋಕ-ಭಾಗ-೨.

೩೯. ಡಾ. ಎಸ್.ಎಂ. ಹಿರೇಮಠರ ನಾಟಕಲೋಕ-ಭಾಗ-೩.

೪೦. ಡಾ. ಎಸ್.ಎಂ. ಹಿರೇಮಠರ ನಾಟಕಲೋಕ-ಭಾಗ-೪.

೪೧. ಕಾರ್ಮೋಡ.

೪೨. ವರ ಪರೀಕ್ಷೆ

೪೩. ಕಣ್ಣರಿಯದಿದ್ದರೂ ಕರಳು ಅರಿಯಿತು

೪೪. ಗುಣಕ್ಕೆ ಮತ್ಸರವುಂಟೆ?

೪೫. ನಿಜಶರಣ

೪೬. ಸಾವಿಲ್ಲದ ಚಲುವಂಗೊಲಿದ ರೂಹಿಲ್ಲದ ಚೆಲುವೆ

೪೭. ನೀರಿಗೆ-ನೇಣಿಗೆ ಹೊರಗಾದವನು.

೪೮. ಅನಂತದ ಅರಿವಿಗೆ ಅಲ್ಲಮನೆಂಬ ನಾಮ.

೪೯. ಶಿವಯೋಗಿಯ ಶರೀರ ವೃಥಾ ಸವೆಯಲಾಗದು.

೫೦. ಸರ್ವಜ್ಞ

೫೧. ಹಜರತ ಸ್ವಾಜಾ ಬಂದಾನವಾಜರು

೫೨. ಹಣೆಬರಹ

೫೩. ಶರಣ ಆದಯ್ಯ

೫೪. ಏಕಾಂತರಾಮಯ್ಯ

೫೫. ಗಜೇಶ ಮಸಣಯ್ಯ

ಸಂಶೋಧನೆ

೫೬. ವೇದಗಳಲ್ಲಿ ದಾಸೋಹ ಚಿಂತನೆಗಳು

೫೭. ಉಪನಿಷತ್ತುಗಳು-ದಾಸೋಹ

೫೮. ಶಿವಾಗಮಗಳಲ್ಲಿ ದಾಸೋಹದ ಪರಿಕಲ್ಪನೆ

೫೯. ಗುಡ್ಡದ ಮಹಾತಪಸ್ವಿ ಮಹಾಂತೇಶ್ವರ ಮಠ

೬೦. ಆಳಂದ ಪರಿಸರದ ಸಾಂಸ್ಕೃತಿಕ ಕ್ಷೇತ್ರಗಳು

೬೧. ಕಡಕೋಳ ಮಹಾಶಿವಯೋಗಿ ಮಡಿವಾಳರ ಮಠ

೬೨. ಕಲಬುರಗಿ ಜಿಲ್ಲೆಯ ವೀರಶೈವ ಮಠಗಳು

೬೩. ವೀರಶೈವ ಪರಿಕಲ್ಪನೆ

೬೪. ಷಟ್‌ಸ್ಥಲ - ವೈಚಾರಿಕ ದೃಷ್ಟಿ

೬೫. ಸಮಾಜಮುಖೀ ಅಷ್ಟಾವರಣಗಳು

೬೬. ಲಿಂಗತತ್ವ ದರ್ಶನ

೬೭. ಜಂಗಮ-ಪ್ರಾಚೀನತೆ

೬೮. ಜೇವರಗಿ ತಾಲ್ಲೂಕಿನ ಶಿವಶರಣರು

೬೯. ಶರಣರವಚನಗಳಲ್ಲಿ ಅನುಭಾವ ಚಿಂತನೆ

೭೦. ಅನುಭವ ಮಂಟಪ ದರ್ಶನ

೭೧. ಶರಣಬಸವ ಪ್ರಭೆ

೨. ಶರಣಬಸವರ ಕಾಲದ ಗೌಡ-ದೇಸಾಯಿ ಮನೆತನಗಳು

೭೩. ಶರಣಬಸವರ ಪರಿಸರದ ವೀರಶೈವ ಮಹಾಪುರುಷರು

೭೪. ಶರಣಬಸವರ ಸಂಪರ್ಕದ ವ್ಯಕ್ತಿ ಶಕ್ತಿಗಳು

೭೫. ಶರಣಬಸವರ ಭೂತಾನುಕಂಪೆ

೭೬. ಶರಣಬಸವೇಶ್ವರ (ಪ್ರಸಾರಾಂಗ, ಗು.ವಿ.ವಿ.)

೭೭. ದಾಸೋಹ ದರ್ಶನ

೭೮. ಹರಸೂರು ಅಣವೀರಪ್ಪ

೭೯. ಅಣವೀರಪ್ಪನ ತತ್ವಪದಗಳ ಮೌಲ್ಯಪ್ರಜ್ಞೆ

೮೦. ಅಣವೀರಪ್ಪನ ವಿಡಂಬನೆಯ ದೃಷ್ಟಿ

೮೧. ಶರಣಬಸವೇಶ್ವರರು ಹಾಗೂ ಅವರ ಪರಿಸರದ ಸಾಹಿತ್ಯ (ಪಿಎಚ್.ಡಿ. ಮಹಾಪ್ರಬಂಧ)

೮೨. ಕೊಂಡಗುಳಿ ಕೇಶಿರಾಜ ಸಂಶೋಧನಾತ್ಮಕ ಅಧ್ಯಯನ

೮೩. ಕೊಂಡಗುಳಿ ಪರಿಸರದ ಸ್ಮಾರಕಗಳು

ಕರ್ನಾಟಕ ವೀರಶೈವ ಸಾಹಿತಿ ಚರಿತ್ರೆ

ಸಂಪುಟ-೭ (೧೯೪೦-೧೯೪೯)

೮೪. ಕೇಶಿರಾಜನ ಕೃತಿಗಳ ಅವಲೋಕನ.

೮೫. ಕೊಂಡಗುಳಿ ಕೇಶಿರಾಜ ವೀರಶೈವತತ್ವ

೮೬. ಕೊಂಡಗುಳಿ ಕೇಶಿರಾಜನ ಶಾಸನಗಳು

೮೭. ವೇದಾಗಮೋಪನಿಷತ್ತುಗಳು - ಸಿದ್ಧರಾಮ ಶಿವಯೋಗಿ

೮೮. ಶಿವಯೋಗಿ ಸಿದ್ಧರಾಮನ ಶಾಸನ-ಸ್ಮಾರಕಗಳು

೮೯. ವೀರಶೈವ ದರ್ಶನ-ಸಂಸ್ಕೃತಿ

೯೦. ವೀರಶೈವ ಸಂಸ್ಕೃತಿ-ಒಳನೋಟಗಳು

೯೧. ವೀರಶೈವದ ವೈಶಿಷ್ಟ್ಯಗಳು

೯೨. ಅಥಣಿ ಶಿವಯೋಗಿ-ಸಂಶೋಧನೆ

೯೩. ಶಿವಶರಣೆ ಗೊಗ್ಗವ್ವ

೯೪. ಬೀದರ ಜಿಲ್ಲೆಯ ತತ್ವಪದಕಾರರ ಸ್ಮಾರಕಗಳು (ಬೀದರ ತಾಲ್ಲೂಕಾ ಸಂ.-೧) (ಕರ್ನಾಟಕ ಸರಕಾರದ ಪ್ರಕಟನೆ)

೯೫. ಬೀದರ ಜಿಲ್ಲೆಯ ತತ್ವಪದಕಾರರ ಸ್ಮಾರಕಗಳು (ಔರಾದ-ಬಸವಕಲ್ಯಾಣ ತಾಲ್ಲೂಕಾ ಸಂ.೨) (ಕರ್ನಾಟಕ ಸರಕಾರದ ಪ್ರಕಟನೆ)

೯೬. ಬೀದರ ಜಿಲ್ಲೆಯ ತತ್ವಪದಕಾರರ ಸ್ಮಾರಕಗಳು (ಭಾಲ್ಕಿ-ಹುಮನಾಬಾದ್ ತಾಲ್ಲೂಕಾ-ಸಂ.೩) (ಕರ್ನಾಟಕ ಸರ್ಕಾರದ ಪ್ರಕಟನೆ)

೯೭. ಸಂಶೋಧನೆಯ ತ್ರಿಮುಖ

೯೮. ಮಹಾದಾಸೋಹಿ ಶರಣಬಸವೇಶ್ವರರ ದೇವಾಲಯ-ಸ್ಮಾರಕಗಳ ಸಂಶೋಧನಾ ಧ್ಯಯನ (ಸಂ.೧- ಯು.ಜಿಸಿ)

೯೯. ಮಹಾದಾಸೋಹಿ ಶರಣಬಸವೇಶ್ವರರ ದೇವಾಲಯ-ಸ್ಮಾರಕಗಳ ಸಂಶೋಧನಾ ಧ್ಯಯನ (ಸಂ.೨, ಯು.ಜಿ.ಸಿ)

೧೦೦. ಮಹಾದಾಸೋಹಿ ಶರಣಬಸವೇಶ್ವರರ ದೇವಾಲಯ-ಸ್ಮಾರಕಗಳ ಸಂಶೋಧನಾ ಧ್ಯಯನ (ಸಂ.೩. ಯು.ಜಿ.ಸಿ)

೧೦೧. ಮಹಾದಾಸೋಹಿ ಶರಣಸಬೇಶ್ವರರ ದೇವಾಲಯ-ಸ್ಮಾರಕಗಳ ಸಂಶೋಧನಾಧ್ಯಯನ (ಸಂ.೪. ಯು.ಜಿ.ಸಿ)

೧೦೨. ಬಚ್ಚಬರಿಯ ಬಸವ

೧೦೩. ಸಂಶೋಧನೆ: ಸ್ವರೂಪ-ಅನುಸಂಧಾನ

೧೦೪. ಮಹತ್ವಭು ಮಹಂತ ಪರಂಪರೆ

೧೦೫. ಮಹಾದಾಸೋಹಿ ಶರಣಬಸವ : ಸಂಶೋಧನ ಸಂಕಥನ

೧೦೬. ಸಾವಿರದ ಅಲಂದೆಯ ಸಂಸ್ಥಾನ ಹಿರೇಮಠ

೧೦೭. ಗಜೇಶ ಮಸಣಯ್ಯ ದಂಪತಿಗಳು ಅನ್ವೇಷಣಾತ್ಮಕ ಅಧ್ಯಯನ

ಕಾವ್ಯಮೀಮಾಂಸೆ

೧೦೮. ಭಾರತೀಯ ಕಾವ್ಯ ತತ್ವಚಿಂತನೆ

೧೦೯. ಮಮ್ಮಟನ ಕಾವ್ಯಚಿಂತನೆ

೧೧೦. ಪಾಶ್ಚಾತ್ಯ ಕಾವ್ಯ ತತ್ವ ಚಿಂತನೆ

೧೧೧. ಪಾಶ್ಚಾತ್ಯ ಕವಿಗಳ ಕಾವ್ಯದರ್ಶನ

೧೧೨. ಕನ್ನಡ ಕಾವ್ಯ ಮೀಮಾಂಸೆ

೧೧೩. ಹರಿಹರನ ಕಾವ್ಯ ಸೌಂದರ್ಯ

೧೧೪. ಷಡಕ್ಷರ ದೇವನ ಕಾವ್ಯ ಸೌಂದರ್ಯ

೧೧೫. ಕುಮಾರ ವ್ಯಾಸನ ಕಾವ್ಯ ಸೌಂದರ್ಯ

೧೧೬. ವಚನಕಾರರ ಕಾವ್ಯ ಮೀಮಾಂಸೆ

೧೧೭. ಅಕ್ಕನ ಕಾವ್ಯ ಪರಿಕಲ್ಪನೆ

೧೧೮. ಆಧುನಿಕ ಕನ್ನಡ ಕಾವ್ಯ ಮೀಮಾಂಸೆ

೧೧೯. ಬಸವಣ್ಣನವರ ವಚನ ಕಾವ್ಯ ಮೌಲ್ಯ

೧೨೦. ಭಾರತೀಯ ಕಾವ್ಯ ಮೀಮಾಂಸೆ: ಒಳನೋಟಗಳು

೧೨೧. ಜನಪದ ಕಾವ್ಯ ಮೀಮಾಂಸೆಸವಕಲ್ಯಾಣ ತಾಲ್ಲೂದಕಗಳ ಸಂಶೋಲಾ

೧೨೨. ಹೊಸಗನ್ನಡ ಕ್ರಿಯಾಕಲ್ಪ

೧೨೩. ಪಾಶ್ಚಾತ್ಯ ಕಾವ್ಯ ಮೀಮಾಂಸೆಗೊಂದು ಪೂರ್ವರಂಗ

೧೨೪. ಪಾಶ್ಚಾತ್ಯ ಕಾವ್ಯ ಮೀಮಾಂಸೆ-ಒಳನೋಟಗಳು

೧೨೫. ಅರವಿಂದರ ಕಾವ್ಯಮೀಮಾಂಸೆ

೧೨೬. ಒಲಿದಂತೆ ಹಾಡುವೆ

೧೨೭. ಪ್ರತಿಭೆಯ ವಿಶ್ವದೊಂದಿಗಿನ ಸಂವಾದ

೧೨೮. ನಿಶ್ಯಬ್ದ (ಸಂ.೧- ಕಾವ್ಯಮೀಮಾಂಸೆ)

೧೨೯. ನಿಶ್ಯಬ್ದ (ಸಂ.೨ - ಕಾವ್ಯಮೀಮಾಂಸೆ)

೧೩೦. ಪಾಶ್ಚಾತ್ಯ ಕಾವ್ಯಮೀಮಾಂಸೆ: ಸೃಷ್ಟಿ-ದೃಷ್ಟಿ

೧೩೧. ಶಾಸನ ಕಾವ್ಯಮೀಮಾಂಸೆ

೧೩೨. ಲಾಕ್ಷಣಿಕ : ಮೂರು ದಾರಿಗಳು

೧೩೩. ರಾಜಶೇಖರನ ಕಾವ್ಯ ಮೀಮಾಂಸೆ

೧೩೪. ಆನಂದವರ್ಧನನ ಧ್ವನಿ ಸ್ವರೂಪ

೧೩೫. ಶೈಲಿ: ಅರ್ಥ ಸ್ವರೂಪ

೧೩೬. ನಡುಗನ್ನಡ ಕವಿಗಳ ಕಾವ್ಯ ದೃಷ್ಟಿ

೧೩೭. ಭಾರತೀಯ ಕಾವ್ಯ ಮೀಮಾಂಸೆ : ಸೃಷ್ಟಿ-ದೃಷ್ಟಿ

೧೩೮. ಕನಕ ಕಾವ್ಯ ಮೀಮಾಂಸೆ

೧೩೯. ವಚನಕಾರರ ಕಾವ್ಯಮೀಮಾಂಸೆ (ಸಮಗ)

ವಿಮರ್ಶೆ

೧೪೦. ವಿಮರ್ಶಾ ಸಂಪುಟ

೧೪೧. ತಪಸ್ಸು

೧೪೨. ಶಬ್ದ ಲಜ್ಜೆ

೧೪೩. ವಿಭಾವ

೧೪೪, ಪ್ರತಿಭಾನ

೧೪೫. ಕಲಾತಪಸ್ವಿಯ ವಾಹ್ಮಯ ತಲ್ಲಣಗಳು

೧೪೬. ನಿಜಶರಣ ಅಂಬಿಗರ ಚೌಡಯ್ಯ: ವಚನ-ನಿರ್ವಚನ

೧೪೭. ಶೀವಯೋಗಿ ಸಿದ್ಧರಾಮ : ವಚನ-ನಿರ್ವಚನ (ಸಂ.೧)

೧೪೮. ಶ್ರೀ ಷಣ್ಮುಖ ಶಿವಯೋಗಿ : ವಚನ-ನಿರ್ವಚನ (ಸಂ.೧)

೧೪೯. ಶ್ರೀ ಷಣ್ಮುಖ ಶಿವಯೋಗಿ : ವಚನ-ನಿರ್ವಚನ (ಸಂ.೨)

೧೫೦. ಸಾಧರಣೀಕರಣ

೧೫೧. ರಸವೆ ಶಿವ

೧೫೨. ವಚನ ಪರಿಶೋಧ

೧೫೩. ತತ್ವಪದ-ಪರಾಮರ್ಶೆ

೧೫೪. ಹಡಪದ ಶರಣೆ ಲಿಂಗಮ್ಮ - ಅಪ್ಪಣ್ಣನವರು: ವಚನ-ನಿರ್ವಚನ.

ಶಾಸ್ತ್ರ

೧೫೫. ಶಬ್ದಮಣಿ ದರ್ಪಣಾಂತರಂಗ

೧೫೬. ಕೇಶಿರಾಜನ ಅಸಾಧರಣ ಲಕ್ಷಣಗಳ ವಿಮರ್ಶೆ

೧೫೭. ಹಳಗನ್ನಡ ವ್ಯಾಕರಣ ಪರಂಪರೆ

೧೫೮. ಛಂದಸ್ಸಾಗರ

೧೫೯. ಛಂದೋಗ್ರಂಥ ಪರಂಪರೆ

೧೬೦. ಶಬ್ದಮಣಿ ದರ್ಪಣ ಪರಾಮರ್ಶೆ

೧೬೧. ಛಂದೋಲಂಕಾರ

೧೬೨. ಪಿ. ಬಸವಣ್ಣನವರ 'ಛಂದೋಲಹರಿ' ಕುರಿತು.

೧೬೩. ರಗಳೆ-ಸಾಂಗತ್ಯ

೧೬೪. ಷಟ್ಟದಿ: ವಿನ್ಯಾಸ-ವೈವಿಧ್ಯ

ಶಾಸನ

೧೬೫. ಶಾಸನಗಳಲ್ಲಿ ಸಮಾಜ

೧೬೬. ವೀರಗಲ್ಲು

೧೬೭. ಮಾಸ್ತಿಕಲ್ಲು: ಪರಿಕಲ್ಪನೆ-ಶಿಲ್ಪ ವೈವಿಧ್ಯ

೧೬೮. ಶಾಸನಾಧ್ಯಯನ

೧೬೯. ಶಾಸನ ಪರಿಭಾಷೆ

೧೭೦. ಶಾಸಾನುಸಂಧಾನ

ಸಾಹಿತ್ಯ ಚರಿತ್ರೆ

೧೭೧. ಕನ್ನಡ ಸಾಹಿತ್ಯ ಚರಿತ್ರೆಯ ಘಟ್ಟಗಳು

೧೭೨. ವಚನಕಾರರ ಚರಿತ್ರೆ

೧೭೩. ಕನ್ನಡ ಕಾವ್ಯ ಚರಿತ್ರೆ

೧೭೪. ವೀರಶೈವ ಸಾಹಿತ್ಯ ಪಥ

೧೭೫. ವೀರಶೈವ ಸಾಹಿತ್ಯ

೧೭೬. ವೀರಶೈವ ಸಾಹಿತ್ಯ ಸಮೀಕ್ಷೆ (ಕನ್ನಡೇತರ)

೧೭೭. ವೀರಶೈವ ಸಂಸ್ಕೃತ ಸಾಹಿತ್ಯಾವಲೋಕನ

೧೭೮. ವೀರಶೈವ ತೆಲುಗು ಸಾಹಿತ್ಯ “

೧೭೯. ಸರ್ವಜ್ಞ : ಜೀವನ-ಸಾಧನೆ

೧೮೦. ವೀರಶೈವ ಸಾಹಿತ್ಯದ ವೈಶಿಷ್ಟ್ಯಗಳು

೧೮೧. ಕನ್ನಡ ಸಾಹಿತ್ಯ ಸೌರಭ

೧೮೨. ಕರ್ನಾಟಕ ವೀರಶೈವ ಸಾಹಿತಿ ಚರಿತ್ರೆ-ಸಂ.೧.

೧೮೩. ಕರ್ನಾಟಕ ವೀರಶೈವ ಸಾಹಿತಿ ಚರಿತ್ರೆ - ಸಂ.೨

೧೮೪. ಕರ್ನಾಟಕ ವೀರಶೈವ ಸಾಹಿತಿ ಚರಿತ್ರೆ - ಸಂ.೩.

೧೮೫. ಕರ್ನಾಟಕ ವೀರಶೈವ ಸಾಹಿತಿ ಚರಿತ್ರೆ ..

೧೮೬. ಕರ್ನಾಟಕ ವೀರಶೈವ ಸಾಹಿತಿ ಚರಿತ್ರೆ ಸಂ.೫.

೧೮೭. ಕರ್ನಾಟಕ ವೀರಶೈವ ಸಾಹಿತಿ ಚರಿತ್ರೆ ಸಂ.೬.

೧೮೮. ಕರ್ನಾಟಕ ವೀರಶೈವ ಸಾಹಿತಿ ಚರಿತ್ರೆ ಸಂ.೭.

೧೮೯. ಕರ್ನಾಟಕ ವೀರಶೈವ ಸಾಹಿತಿ ಚರಿತ್ರೆ ..

೧೯೦. ಕರ್ನಾಟಕ ವೀರಶೈವ ಸಾಹಿತಿ ಚರಿತ್ರೆ ..

೧೯೧. ಕರ್ನಾಟಕ ವೀರಶೈವ ಸಾಹಿತಿ ಚರಿತ್ರೆ - ಸಂ.೧೦.

.

ವೈಚಾರಿಕ

೧೯೨. ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರ ಮಹಾದಾಸೋಹ ಸೂತ್ರಗಳು.

'೧೯೩. ಕಾಯಕ ಸಿದ್ಧಾಂತ

೧೯೪. ಶರಣರ ವೈಚಾರಿಕತೆ

೧೯೫. ದಾಸೋಹವೆಂಬುದೊಂದು ಧರ್ಮವೆ?

೧೯೬. ವೀರಶೈವ ಜೀವನ ಪಥ

೧೯೭. ಶರಣಬಸವೇಶ್ವರರ ಪವಾಡಗಳು-ಸಾಂಕೇತಿಕತೆ

೧೯೮. ಪವಾಡಕತೆಗಳ ಹಿನ್ನೆಲೆಯ ದೃಷ್ಟಿ

೧೯೯. ಮಹಾದಾಸೋಹ (ಪ್ರಸಾರಾಂಗ)

೨೦೦. ದಾಸೋಹ ದ್ರಷ್ಟಾರನ ಮಹಾದಾಸೋಹದ ನೆಲೆಗಳು

೨೦೧. ಚೆನ್ನಬಸವಣ್ಣ-ವೈಚಾರಿಕತೆ

೨೦೨. ಗಣಾಚಾರ-ವೈಚಾರಿಕತೆ

೨೦೩. ಮಹಾದೇವಿಯಕ್ಕನ ಸಾಮಾಜಿಕ ವಿಚಾರ ಸಂಹಿತೆ

೨೦೪. ಮಾಂಸಾಹಾರಿಗಳ ವೀರಶೈವರೆನ್ನಬಹುದೆ?

೨೦೫. ಪ್ರಸಾದ ತತ್ವ

೨೦೬ ಪಾದೋದಕ ಪರಿಕಲ್ಪನೆ

೨೦೭. ವೈಚಾರಿಕತೆಯ ನೆಲೆಯಲ್ಲಿ ಜಂಗಮ ತತ್ವ

೨೦೮. ಚಿಂತನೆಗಳು

ಸಂಕೀರ್ಣ

೨೦೯. ರಂಗಭೂಮಿಯ ನೆನಪುಗಳು-ಭಾಗ-೧.

೨೧೦. ರಂಗಭೂಮಿಯ ನೆನಪುಗಳು-ಭಾಗ-೨.

೨೧೧. ಕುಂತಳನಾಡು

೨೧೨. ಆದರ್ಶ ಫಿಲಂ ಸಂಸ್ಥೆಯ ಅನುಭವಗಳು.

೨೧೩. ಸಂವಹನ ಮಾಧ್ಯಮಗಳು

೨೧೪. ಕೆಲವು ಸಮೂಹ ಮಾಧ್ಯಮಗಳು

೨೧೫. ಚಲನಚಿತ್ರ ಪರಿಕಲ್ಪನೆ

೨೧೬. ಚಲನಚಿತ್ರ ನಿರ್ಮಾಣದ ತಂತ್ರಗಳು

೨೧೭. ಬೀದಿನಾಟಕ: ತಂತ್ರ-ಪ್ರಯೋಗ

೨೧೮. ಕನ್ನಡ ಸಾಹಿತ್ಯದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತರು-ಭಾಗ-೧.

೨೧೯. ಸಾವಿನ ಪರಿಕಲ್ಪನೆ

೨೨೦. ವೀರಶೈವರು-ಸಾವು

೨೨೧. ಶಿವಶರಣರು ಅರ್ಥೈಸಿರುವ ಸಾವು

೨೨೨. ಮೌನವಿಕಿರಣ

೨೨೩. ಚಿಕ್ಕೇನಕೊಪ್ಪದ ಶರಣರ ಆಧ್ಯಾತ್ಮಿಕ ಚಿಂತನೆಗಳು.

೨೨೪. ಸಾವಿರದ ಆಲಂದ: ಸಾಂಸ್ಕೃತಿಕ ಸಮೀಕ್ಷೆ

೨೨೫. ಕಾವ್ಯಗಳಲ್ಲಿ ಮಹಾಕಾವ್ಯ ಸೌಂದರ್ಯ

೨೨೬. ಕನ್ನಡ ಸಾಹಿತ್ಯದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತರು-ಭಾಗ-೨.

೨೨೭. ಮಹಾದಾಸೋಹ ದ್ರಷ್ಟಾರ

೨೨೮. ಅಂತರ್‌ದೃಷ್ಟಿಗಳ ಧೋರಣೆ.

೨೨೯. ಅಂತರ್‌ದೃಷ್ಟಿಗಳ ಸಾಮಾಜಿಕ ನೆಲೆ

೨೩೦. ಮಹಾದಾಸೋಹ ಸೂತ್ರಗಳ ವಿಮರ್ಶೆ

೨೩೧. ಸಮೂಹ ಮಾಧ್ಯಮಗಳ ಸುತ್ತ

೨೩೨. ವೀರಶೈವ

೨೩೩. ವಚನವಾಹ್ಮಯದಲ್ಲಿ ಮನುಷ್ಯನ ಹುಡುಕಾಟ

೨೩೪. ಮನುಷ್ಯ: ಚಿಂತನೆ

೨೩೫. ಮಾನವ ಧರ್ಮದ ವೈಶಿಷ್ಟ್ಯ

೨೩೬. ಸಂಸ್ಕೃತಿ-ಸುಸಂಸ್ಕೃತಿ

೨೩೭ ಮಾದಾರ ಧೂಳಯ್ಯನವರ ವಿಚಾರ ಸಂಹಿತೆ

೨೩೮. ಅಕ್ಕಮ್ಮ ಶರಣೆಯರ ಆಚಾರ ಸಂಹಿತೆ

೨೩೯. ಭಗವದ್ಗೀತೆ-ಶರಣಗೀತೆ : ತೌಲನಿಕ ಅನುಸಂಧಾನ.

೨೪೦. ಕರ್ಮಯೋಗ-ಕಾಯಕ

೨೪೧. ಧ್ಯಾನಯೋಗ-ಶಿವಯೋಗ

೨೪೨. ಕೃಷ್ಣ ಪ್ರಜ್ಞೆ

೨೪೩. ಶರಣ ಪ್ರಜ್ಞೆ

೨೪೪. ವಚನ ವಾಹ್ಮಯದ ವೈಶಿಷ್ಟ್ಯಗಳು

ಚರಿತ್ರೆ

೨೪೫. ಮಹಾಂತ ಶಿವಯೋಗಿಗಳ ಚರಿತ್ರೆ

೨೪೬. ಸಿದ್ದಲಿಂಗರು

೨೪೭. ಗುಬ್ಬಿಮಲ್ಲಣಾರ

೨೪೮. ಷಣ್ಮುಖರು

೨೪೯. ಸಗರನಾಡಿನ ಅನುಭಾವಿಗಳು

೨೫೦, ಸೂಫಿಸಂತರು

೨೫೧. ಪುಟ್ಟರಾಜರು

೨೫೨. ನಿಜಗುಣ ಶಿವಯೋಗಿ

೨೫೩. ಮುಕ್ತಾಯಕ್ಕ

೨೫೪. ಸಕಲೇಶ ಮಾದರಸ

೨೫೫. ಸುಜ್ಞಾನದೇವ

೨೫೬. ಕೆರೆಯ ಪದ್ಮರಸ

೨೫೭. ಲಕ್ಕಣ್ಣ ದಂಡೇಶ

೨೫೮. ನಿಷ್ಟಹ ಸೇವಾ ಜೀವಿ

೨೫೯. ಪುಣ್ಯ ಜೀವಿ

೨೬೦. ಗದುಗಿನ ನಾಗಜ್ಜ

೨೬೧. ಗದುಗಿನ ಚೆನ್ನವೀರಸ್ವಾಮಿ ಹಿಕ್ಕಿ ಮಠ

೨೬೨. ಶ್ರೀಕೃಷ್ಣದೇವರಾಯ

೨೬೩. ಪರಮೇಶ್ವರ ಪುಲಕೇಶಿ

೨೬೪. ಚಾಲುಕ್ಯ ಆರನೇ ವಿಕ್ರಮಾದಿತ್ಯ

೨೬೫. ಹೊಯ್ಸಳ ದೊರೆ ವಿಷ್ಣುವರ್ಧನ

೨೬೬. ಮಡಿವಾಳರ ಶಿಷ್ಯರು

೨೬೭. ಘನಮಠದ ನಾಗಭೂಷಣ ಶಿವಯೋಗಿ

೨೬೮. ಆದಿ ದೊಡ್ಡಪ್ಪ ಶರಣರು

೨೬೯. ಶರಣರ ಶಿಷ್ಯ ರಾಮಜಿ ದಾದಾ

೨೭೦. ದಂಡರಾಯ ಶರಣರು

೨೭೧. ಕುಮಾರ ಶಿವಯೋಗಿ

೨೭೨. ಬಸವಣ್ಣಪ್ಪ ಮಾಸ್ತರರು

೨೭೩. ನಿರಂಜನ ಜಂಗಮ

೨೭೪. ಮಹಾ ಕವಿ ರಾಘವಾಂಕ

೨೭೫. ಹರಿಹರದೇವ

೨೬೬. ಬಾಮರಸ

೨೭೭. ನಿಜಲಿಂಗ ಚಿಕ್ಕಯ್ಯ

೨೭೮. ಸರ್ವಭೂಷಣರು

೨೭೯. ಕೇದಾರ ಕ್ಷೇತ್ರ

೨೮೦. ಬಸವ ಭಾಗ್ಯ

೨೮೧. ಮಹಾದಾಸೋಹಿ ಶರಣಬಸವರು

೨೮೨. ಪೂಜ್ಯ ದೊಡ್ಡಪ್ಪ ಅಪ್ಪ (ಪ್ರಸಾರಾಂಗ)

೨೮೩. ಆರೂಢ ಚೇತನ ಅಪ್ಪಸಿದ್ದ

೨೮೪. ಅಲ್ಲಮ ಪ್ರಭು ದೇವರು

೨೮೫. ಅಥಣಿ ಮರುಘಂದ್ರ ಶಿವಯೋಗಿಗಳ ಕಾರಣಿಕ ವ್ಯಕ್ತಿತ್ವ

೨೮೬. ಮಹಾದಾಸೋಹ ಪೀಠದ ಸಾಂಸ್ಕೃತಿಕ ಚರಿತ್ರೆ

೨೮೭ ಶರಣಬಸವೇಶ್ವರರು (ಪ್ರಸಾರಾಂಗ)

೨೮೮. ದೊಡ್ಡಪ್ಪ ಅಪ್ಪ (ಕನ್ನಡ ಪುಸ್ತಕ ಪ್ರಾಧಿಕಾರ)

೨೮೯. ಮಹಾದಾಸೋಹಪ್ರಜ್ಞಾನಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು.

೨೯೦. ಸಂಚಿಹೊನ್ನಮ್ಮ

೨೯೧. ಕನಕದಾಸರು

೨೯೨. ಮುದ್ದಣ್ಣ

೨೯೩. ನಯಸೇನ

೨೯೪. ಸಿಂಗರಾರ

೨೯೫. ಮೃಡಗಿರಿಯ ಮಹಾಬೆಳಗು

೨೯೬. ಮಹಾದಾಸೋಹಿ ಶರಣಬಸವರ ವಚನವೇದ

ಸಂಪಾದನೆ

೨೯೭. ಜನಪದ ಕಾವ್ಯ ಧಾರೆ

೨೯೮. ಮಹಾದಾಸೋಹ ಸೂತ್ರಗಳ ವ್ಯಾಖ್ಯಾನ

೨೯೯, ಮಹಾಬೆಳಗು

೩೦೦. ನಡಗಡ್ಡಿ ಬಸವನ ಹಾಡುಗಳು

೩೦೧. ಶರಣಬಸವರ ಬಗೆಗಿನ ಐತಿಹ್ಯಗಳು

೩೦೨. ಮಹಾಗಾವಿ ಶರಣಯ್ಯನವರ ಕೃತಿಗಳು

೩೦೩. ಸಂತುಷ್ಟಿ (ಇತರರೊಂದಿಗೆ)

೩೦೪. ಗುಡ್ಡದ ಶಿವಯೋಗಿ ಪುರಾಣ (ಇತರರೊಂದಿಗೆ)

೩೦೫. ಅಲ್ಪಜ್ಞಾತ ರೇವಣಸಿದ್ಧನ ಕೃತಿಗಳು

೩೦೬. ಶರಣಬಸವೇಶ್ವರ ತಾರಾವಳಿ

೩೦೭. ಕಾಯ ಕಾಂತಾರ

೩೦೮. ಹರಸೂರು ಅಣವೀರಪ್ಪನ ಸ್ವರವಚನಗಳು

೩೦೯. ಆಯ್ದ ವಚನಗಳು ( ಇತರರೊಂದಿಗೆ)

೩೧೦. ಮಹಾದಾಸೋಹ ಸಂಪುಟ-೧.

೩೧೧. ಮಹಾದಾಸೋಹ ಸಂಪುಟ-೨.

೩೧೨. ಮಹಾದಾಸೋಹ ಸಂಪುಟ-೩.

೩೧೩. ಧರ್ಮಾಮೃತ ಸಂಗ್ರಹ (ಪ್ರಸಾರಾಂಗ ಗು.ವಿ.ಕ.)

೩೧೪, ಮಹಾದಾಸೋಹಿ (ಪ್ರಸಾರಾಂಗ ಗು.ವಿ.ಕ.)

೩೧೫. ಹೊಗನ್ನಡ ಕಥನ ಕವನಗಳು (ಪ್ರಸಾರಾಂಗ ಗು.ವಿ.ಕ.)

೩೧೬. ವಚನಕಾರರ ಕಾವ್ಯ ಚಿಂತನೆ (ಕರ್ನಾಟಕ ಸರ್ಕಾರ)

೩೧೭. ಹೊಸಗನ್ನಡ ಪ್ರಾತಿನಿಧಿಕ ಕವಿತೆಗಳು (ಪ್ರಸಾರಾಂಗ)

೩೧೮. ಕನ್ನಡ ಅನುಭವ ಸಾಹಿತ್ಯ (ಪ್ರಸಾರಂಗ, ಗು.ವಿ.ಕ.)

೩೧೯. ಅಂತರ್‌ದೃಷ್ಟಿ-ಸಂ.೧

೩೨೦. ಅಂತರ್‌ದೃಷ್ಟಿ-ಸಂ.೨.

೩೨೧. ಅಂತರ್‌ ದೃಷ್ಟಿ-ಸಂ.೩

೩೨೨. ಮಹಾದಾಸೋಹ ಜ್ಞಾನರತ್ನ

೩೩೩. ಶ್ರೀ ಸಿದ್ಧಾಂತ ಶಿಖಾಮಣಿ - ಶಿವಯೋಗ (ಸ್ವತಂತ್ರಕೃತಿ) - ಇತ್ಯಾದಿ.

ಕರ್ನಾಟಕ ವೀರಶೈವ ಸಾಹಿತಿ ಚರಿತ್ರೆ-ಸಂಪುಟ-೭ (೧೯೪೦-೧೯೪೯)

 ಹೀಗೆ ಸಾಹಿತ್ಯ ಕ್ಷೇತ್ರದಲ್ಲಿ ಹಲವು ಪ್ರಕಾರದಲ್ಲಿ ಕೃಷಿ ಮಾಡಿದ ಡಾ‌.ಎಸ್.ಎಂ.ಹಿರೇಮಠರು ಸಹ ಕರ್ನಾಟಕ ವೀರಶೈವ ಸಾಹಿತಿ ಚರಿತ್ರೆ ಎಂಬ ಸಂಪುಟ ಗಳನ್ನು ಹೊರ ತಂದವರು.

 ಕರ್ನಾಟಕ ವೀರಶೈವ ಸಾಹಿತಿ ಚರಿತ್ರೆ-ಸಂ.೧., ಕರ್ನಾಟಕ ವೀರಶೈವ ಸಾಹಿತಿ ಚರಿತ್ರೆ - ಸಂ.೨,ಕರ್ನಾಟಕ ವೀರಶೈವ ಸಾಹಿತಿ ಚರಿತ್ರೆ - ಸಂ.೩., ಕರ್ನಾಟಕ ವೀರಶೈವ ಸಾಹಿತಿ ಚರಿತ್ರೆ .,ಕರ್ನಾಟಕ ವೀರಶೈವ ಸಾಹಿತಿ ಚರಿತ್ರೆ ಸಂ.೫. ಕರ್ನಾಟಕ ವೀರಶೈವ ಸಾಹಿತಿ ಚರಿತ್ರೆ ಸಂ.೬.,ಕರ್ನಾಟಕ ವೀರಶೈವ ಸಾಹಿತಿ ಚರಿತ್ರೆ ಸಂ.೭, ಕರ್ನಾಟಕ ವೀರಶೈವ ಸಾಹಿತಿ ಚರಿತ್ರೆ -ಸಂ.೮., ಕರ್ನಾಟಕ ವೀರಶೈವ ಸಾಹಿತಿ ಚರಿತ್ರೆ ,ಸಂ.೯.,ಕರ್ನಾಟಕ ವೀರಶೈವ ಸಾಹಿತಿ ಚರಿತ್ರೆ - ಸಂ.೧೦. ಹೀಗೆ ಹತ್ತು ಸಂಪುಟಗಳು ಆರು ಸಾವಿರ ಪುಟಗಳನ್ನು ಹೊಂದಿದೆ. ಇಲ್ಲಿ ಒಂದೊಂದು ಸಂಪುಟವು ಮಹತ್ವದ್ದಾಗಿದೆ.ಇಂದು ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಅಂದರೆ ಹಿರೇಮಠರು ಮಾತ್ರ ಸಮನ್ವಯತೆ ಗೊಳಿಸಿ ವೀರಶೈವ- ಲಿಂಗಾಯತ ಬೇರೆ ಬೇರೆ ಅಲ್ಲವೆಂದು,

ಇಲ್ಲಿ ವಿಶಾಲ ಅರ್ಥ ಬಳಸಿದ್ದಾರೆ.ಇಲ್ಲಿನ ಎಲ್ಲಾ ವೀರಶೈವ ಅಂದರೆ ಎಲ್ಲಾ ಜಾತಿ, ಜನಸಂಗ,ಧರ್ಮದವರು ಮಾಡಿದ ಸಾಹಿತ್ಯ ಸೇವೆ ಮತ್ತು ವೀರಶೈವಕ್ಕೆ ಸಲ್ಲಿಸಿದ ಕೊಡುಗೆ ಇಲ್ಲಿ ದಾಖಲಾಗಿವೆ.ಅವರು- ಇವರು ಎನ್ನದೇ ನಮ್ಮವರೆಂಬ ಬಸವಣ್ಣನವರ ತತ್ವ- ಸಿದ್ಧಾಂತವನ್ನು ಅನುಸರಿಸಿ, ಆಚರಿಸಿ,ಅದನ್ನು ಪಾಲಿಸಿಕೊಂಡು ಬಂದ ವೀರಶೈವ 

ಸಾಹಿತಿ ಚರಿತ್ರೆಕಾರರ ಗುಣ ಇದೇ ವೀರಶೈವ ಪರಂಪರೆಯೂ ಹೌದು ಮತ್ತು ಸಂಸ್ಕೃತಿ ಯೂ ಹೌದು !.

ಕರ್ನಾಟಕ ವೀರಶೈವ ಸಾಹಿತಿ ಚರಿತ್ರೆ- ಸಂಪುಟ-೭ ಇದನ್ನು

ಶ್ರೀ ಚನ್ನಬಸವೇಶ್ವರ ಹಿರೇಮಠ ಸಂಸ್ಥಾನ ಹಾರಕೂಡದ ಪೂಜ್ಯಶ್ರೀ ಡಾ.ಚನ್ನವೀರ ಶಿವಾಚಾರ್ಯರು ೨೦೨೫ ರಲ್ಲಿ

ಪ್ರಕಟಿಸಿದ್ದಾರೆ.ನಾಲ್ಕು ಪುಟ ವರ್ಣ ಪುಟ ಮತ್ತು ೫೫೨ ಪುಟಗಳನ್ನು ಹೊಂದಿದೆ.ಬೆಕೆ ೬೫೦ ರೂಪಾಯಿಗಳು.

ಮುಖಪುಟ ಮತ್ತು ಪುಟ ವಿನ್ಯಾಸವನ್ನು ಶ್ರೀ ಆರ್.ಎಸ್.ಶ್ರೀಧರ ಬೆಂಗಳೂರು ಮಾಡಿದ್ದಾರೆ‌.ಓಂ ಶಕ್ತಿ ಗ್ರಾಫಿಕ್ಸ ಬೆಂಗಳೂರು ಮುದ್ರಣ ಮಾಡಿದರೆ ಮುಖಪುಟ ವಿನ್ಯಾಸವನ್ನು ಪ್ರಖ್ಯಾತ ಕಲಾವಿದ ಶ್ರೀ ಸುಧಾಕರ ದರ್ಬೆ ಮಾಡಿರುವರು.

ಈ ಏಳನೆಯ ಸಂಪುಟವು ೧೯೪೦ ರಿಂದ ೧೯೪೯ ರವರೆಗೆ

ಹತ್ತು ವರ್ಷಗಳ ಅವಧಿಯ ಸಾಹಿತಿಗಳಿದ್ದಾರೆ. ವಿರೂಪಾಕ್ಷಪ್ಪ ಕೊರಗಲ್ಲ ರಿಂದ ಒ್ರಾರಂಭವಾಗಿ ಅಣ್ಣಪ್ಪ ಸಾಮದೆ ಅವರ ವರೆಗೆ ಬಂದು ನಿಂತೆದೆ.ಈ ಅವಧಿಯಲ್ಲಿ

೧೩೦ ಸಾಹಿತಿ ಮಾಹಿತಿ ಇದೆ.ಇದರಲ್ಲಿ ಏಳು ಜನ ಸ್ವಾಮೀಜಿ ಗಳಿದ್ದಾರೆ.ಹದಿನೈದು ಜನ ಮಹಿಳೆಯರು, ಹಾಗೂ ಉಳಿದವರು,ಸಾಹಿತಿ,ಬೇರೆ ಬೇರೆ ಕ್ಷೇತ್ರದ ವರು ಇದ್ದಾರೆ.ಪೂಜ್ಯಶ್ರೀ ಗೌರಿ ಶಂಕರ ಸ್ವಾಮೀಜಿ, ಶಾಂತಲಿಂಗ ಸ್ವಾಮೀಜಿ, ಪೂಜ್ಯಶ್ರೀ ನಿರುಪಾಧೀಶರು,ಪೂಜ್ಯಶ್ರೀ ಜಡೆಯ ಶಾಂತಲಿಂಗ ಸ್ವಾಮೀಜಿ, ಪೂಜ್ಯ ಶ್ರೀ ಅನ್ನದಾನೀಶ್ವರ ಸ್ವಾಮೀಜಿ, ಪೂಜ್ಯ ಶ್ರೀ ಸಿದ್ದರಾಮ ಶರಣ ರು,ಬೆಲ್ದಾಳ,ಪೂಜ್ಯಶ್ರೀ ಗವಿ ಮಹಾಂತೇಶ್ವರ ಶಿವಯೋಗಿ ಗಳು ಸೇರಿದ್ದಾರೆ‌.ಇವರು ಕೇವಲ ಧರ್ಮಕ್ಕೆ ಮಾತ್ರ ಸೀಮಿ ತರಾಗದೇ ಸಾಹಿತ್ಯದ ಹಲವು ಮುಖಗಳ ಸೇವೆ ದಾಖಲಿಸಿ ದ್ದಾರೆ.

ಮಹಿಳಾ ಸಾಹಿತಿಗಳಾದ ಶಾಂತಾದೇವಿ ಹಿರೇಮಠ, ಶಕುಂತಲಾ ದುರ್ಗಿ,ಪಾರ್ವತಿ ಚೆಕ್ಕಿ,ಯಶೋಧಮ್ಮ ಸಿದ್ಧಬಟ್ಟೆ,ಶಶಿಕಲಾ ಸುಬ್ಬಣ್ಣ,ನೀಲಗಂಗಾ ಚರಂತಿಮಠ,ಶಶಿಕಲಾ ವೀರಯ್ಯ ಸ್ವಾಮಿ,ಪ್ರಭಾವತಿ ದೇಸಾಯಿ,ಸುಶೀಲಾ ನರಕೆ,ಶಕುಂತಲಾ ದಂಡಗಿ,ಶಶಿಕಲಾ ಗಿರಿ,ಪ್ರೇಮಲೀಲಾ,ದಾಕ್ಷಾಯಣಿ ಸೋಮಶೇಖರ,ಶಾಂತಾ ಜಗದೀಶ,ಶಾಂತಾ ಪಸ್ತಾಪೂರ ಹದಿನೈದು ಲೇಖಕಿಯರು ಇದ್ದಾರೆ.ಇಪ್ಪತ್ತೆರಡು ಜನರನ್ನು ಹೊರತುಪಡಿಸಿದರೆ, ಉಳಿ ದ ನೂರೆಂಟು ಸಾಹಿತಿಗಳ ಮಾಹಿತಿಯಿದೆ‌.

ಸೋಮಶೇಖರ ಇಮ್ರಾಪುರ,ಎಸ್.ಜಿ.ನಾಗಲೋಟಿಮಠ, ಶಿವಾನಂದ ವಿರಕ್ತಮಠ,ಬಸವರಾಜ ಶಿರೂರು,ಶಾಂತಪ್ಪ ಬೂದಿಹಾಳ,ಜಯವಂತ ಕಾಡದೇವರು,ದಾನಪ್ಪ ಬಗಲಿ, ವೀರಣ್ಣ ರಾಜೂರು,ವಿಜಯಾಶಂಕರ,ಬಸವರಾಜ ನಾಯ್ಕರ್,ಬಸವರಾಜ ಮಲಶೆಟ್ಟಿ, ಮೊದಲಾದ ದಿಗ್ಗಜರ ಕಾವ್ಯ,ಕಥೆ,ಜಾನಪದ,ಸಂಶೋಧನೆ,ವಿವಿಧ ಮುಖಗಳ ಅನಾವರಣ ಮಾಡಿದ್ದಾರೆ.ಕಲ್ಯಾಣ ಕರ್ನಾಟಕದ ಕೊರಗಲ್ಲ,ಶಾಂತಪ್ಪ ಬೂದಿಹಾಳು,ಅಕ್ಕೋಣಿ ಅಪ್ಪಾರಾವ, ಸೊನ್ನದ,ದ್ಯಾಂಪುರ ಸಂಗಯ್ಯ,ಗೋಗಿ,ಸಂಗಮೇಶ ಸವದತ್ತಿಮಠ,ಲಿಂಗಣ್ಣ ಸತ್ಯಂಪೇಟೆ,ಶರಣಪ್ಪ ಗುಡದಿನ್ನಿ, ಗುರುಲಿಂಗಪ್ಪ ವಿಸಾಜಿ,ರೇವಣಸಿದ್ದಯ್ಯ ಸ್ವಾಮಿ, ಬಮುಕ್ಕುಂದಿಮಠ,ಬ್ಯಾಳಿ ಕೊಟ್ರಪ್ಪ,ಮಲ್ಲಿನಾಥ ಹಿರೇಮಠ, ವೀರಣ್ಣ ಸಙತಾಜಿ,ಧೋತ್ರೆ,ಮುನಿಯಪ್ಪ ಹುಬ್ಬಳ್ಳಿ, ಬಸವ ಪ್ರಭು ಪಾಟೀಲ,ಕಾಶಿನಾಥ ಅಂಬಲಗೆ, ರಾಮಶೆಟ್ಟಿ ಹುಡುಗಿ,ಸುಭಾಶ್ಚಂದ್ರ ಜಶೆಟ್ಟಿ,ಭೀಮಣ್ಣ ಬೋನಾಳ, ಮೊದಲಾದವರಿದ್ದಾರೆ.ಇಂತಹ ಸಾಹಿತಿಗಳ ಸಂಪೂರ್ಣ ಮಾಹಿತಿ,ವಿಷಯ,ಸಮಗ್ರ ಸಾಹಿತ್ಯ ನೋಟ ಹೊರ ಹಾಕಿದ್ದಾರೆ.ವೀರಶೈವ ಸಾಹಿತ್ಯ ಸಂಪುಟಗಳು ಬಂದಿವೆ.ಆದರೆ ಸಾಹಿತಿಗಳ ಸಂಪುಟಗಳು ಹೊರ ಬಂದಿರ ಲಿಲ್ಲ. ಇದನ್ನು ಮನಗೊಂಡ ಹಿರೇಮಠರು ಮನವು ತಹ ತಹಿಸಿ ಯಾವುದೇ ವಿಶ್ವವಿದ್ಯಾಲಯ, ಪ್ರಸಾರಾಂಗ, ಅಕಾಡೆಮಿ, ಪ್ರಾಧಿಕಾರ, ಪರಿಷತ್ತು ಮಾಡದೇ ಇರುವ ಕಾರ್ಯವನ್ನು ಏಕಾಙಗಿಯಾಗಿ ಒಬ್ಬರೇ ಇಂಟಿ ಸಲಗದಂತೆ ಕಾರ್ಯ ನಿರ್ವಹಿಸುವ ರೀತಿ ಅನನ್ಯ.ಕೇವಲ ಒಂದು ವರ್ಷದ ಅವಧಿಯಲ್ಲಿ ಹತ್ತು ಸಂಪುಟ ಹೊರ ತರುವ ಮೂಲಕ ಅದರಲ್ಲೂ ಏಳನೇ ಸಂಪುಟ ವಿಶಿಷ್ಟವಾಗಿ,ಅಷ್ಟೇ ಸಮಗ್ರವಾಗಿ, ಅಪಾರ ದಾಖಲೆ,ವಿಮರ್ಶೆ,ಸಂಶೋಧನೆ, ವಿಶ್ಲೇಷಣೆ, ಸಂಗ್ರಹಿಸಿ ಒಂದು ಸಂಶೋಧನಾತ್ಮಕ ನೆಲೆಗಳಲ್ಲಿ ಕಟ್ಟಿ ಕೊಟ್ಟ ಸಂಪುಟವು ಬಹು ಸ್ವಾರಸ್ಯಕರವಾಗಿ,ವಿಷಯ ಹೂರಣದಿಂದ ಕೂಡಿದ ಪರಿಪಕ್ವ ಸಂಪುಟವಾಗಿದೆ. ಡಾ.ಎಸ್.ಎಂ.ಹಿರೇಮಠರು ನಡೆದುದೇ ಮಾರ್ಗ ಎಂಬಂತೆ ವೀರಶೈವ ಸಾಹಿತಿ ಚರಿತ್ರೆ ಸಂಪುಟದ ಹೊಸ ಮಾರ್ಗ ಹಾಕಿ ಕೊಟ್ಟದ್ದು ಇದೊಂದು ವೀರಶೈವ ಮಾರ್ಗಕ್ಕೆ ದಿಕ್ಸೂಚಿ ಆಗಿವೆ.ಇದಕ್ಕಾಗಿ ನಾಡಿನ ವಿದ್ವಾಂಸರ ಪರವಾಗಿ ಡಾ‌.ಎಸ್.ಎಂ.ಹಿರೇಮಠ ಅವರಿಗೂ ಪ್ರಕಟಿಸಿದ ಹಾರಕೂಡದ ಡಾ‌.ಚನ್ನವೀರ ಶಿವಾಚಾರ್ಯ ಅವರಿಗೂ ಅಭಿನಂದನೆ ಗಳನ್ನು ಸಲ್ಲಿಸುತ್ತೇನೆ.

ಲೇಖಕರು: ಡಾ.ಗವಿಸಿದ್ದಪ್ಪ ಹೆಚ್. ಪಾಟೀಲ ಸಾಹಿತಿಗಳು, ಕಲಬುರ್ಗಿ.