ಕಡೇಚೂರ್ ನಿವಾಸಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭೇಟಿ ಗೌರವ ನಮನ ಸಲ್ಲಿಕೆ
ಕಡೇಚೂರ್ ನಿವಾಸಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭೇಟಿ ಗೌರವ ನಮನ ಸಲ್ಲಿಕೆ
ಕಲಬುರಗಿ : ಬಿಜೆಪಿಯ ಹಿರಿಯ ಮುಖಂಡರಾಗಿದ್ದ ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟಗಾರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಹಾದೇವಪ್ಪ ಕಡೆಚೂರ್ ಅವರ ನಿವಾಸಕ್ಕೆ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ, ಮತ್ತು ಗ್ರಾಹಕ ವ್ಯವಹಾರಗಳ ಖಾತೆಯ ಸಚಿವರಾದ ಪ್ರಲ್ಹಾದ ಜೋಶಿ ಭೇಟಿ ನೀಡಿ ಕುಟುಂಬ ಸದಸ್ಯರ ಜೊತೆ ಮಾತುಕತೆ ಯನ್ನಾಡಿ ಹಿರಿಯರನ್ನು ಸ್ಮರಿಸಿಕೊಂಡರು.
ಕಲಬುರಗಿಗೆ ಫೆ.20ರಂದು ವಿವಿಧ ಕಾರ್ಯಕ್ರಮ ಳಲ್ಲಿ ಭಾಗವಹಿಸಲು ಆಗಮಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಇತ್ತೀಚೆಗಷ್ಟೇ ಅಗಲಿದ ಬಿಜೆಪಿಯ ಹಿರಿಯ ಚೇತನ ಮಹಾದೇವಪ್ಪ ಕಡೇಚೂರ್ ಮತ್ತು ಶ್ರೀಮತಿ ಬಾಲಮ್ಮ ಮಹಾದೇವಪ್ಪ ಕಡೇಚೂರ್ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಅಗಲಿದ ಹಿರಿಯರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಗೌರವ ನಮನ ಸಲ್ಲಿಸಿ ದರು.ಕಡೇಚೂರ್ ಅವರು ಜನಸಂಘವನ್ನು ಕಟ್ಟುವುದರಿಂದ ತೊಡಗಿ ಬಿಜೆಪಿಯ ಹಿರಿಯ ಮುಖಂಡರಾಗಿ ಅನೇಕ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದವರು ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಹಲವಾರು ನಾಯಕರನ್ನು ಹುಟ್ಟು ಹಾಕಿದವರು. ಶಿಸ್ತಿನ ಸಿಪಾಯಿಯಾಗಿ ಜೀವನ ಸವಿಸಿದ ಹಿರಿಯ ಚೇತನರಾಗಿದ್ದು ಅವರ ಆದರ್ಶ ಪಕ್ಷದ ಎಲ್ಲಾ ಕಾರ್ಯಕರ್ತರಿಗೂ ಸದಾ ಅನುಕರಣೀಯ. ಇಂತಹ ನಿಸ್ಕೃಹ ಪ್ರಾಮಾಣಿಕ ಹಾಗೂ ತ್ಯಾಗ ಜೀವಿಗಳಿಂದಲೆ ಪಕ್ಷವು ಇಷ್ಟು ಎತ್ತರಕ್ಕೆ ಬೆಳೆದು ಸಮಾಜದಲ್ಲಿ ಆದರ್ಶದ ರಾಜಕಾರಣ ನೆಲೆಗೊಳ್ಳಲು ಗಟ್ಟಿ ಅಡಿಪಾಯವನ್ನು ಹಾಕಿದೆ ಎಂದು ಹೇಳಿದರು. ಕಡೇಚೂರ್ ಮನೆತನ ಭಾರತೀಯ ಕುಟುಂಬ ಸಂಸ್ಕೃತಿಯನ್ನು ಉಳಿಸಿಕೊಂಡಿದ್ದು ಅವಿಭಕ್ತ ಕುಟುಂಬವಾಗಿ 29 ಜನ ಒಟ್ಟಿಗೆ ಈಗಲೂ ಬಾಳುವುದು ನಿಜಕ್ಕೂ ಒಂದು ಆದರ್ಶವಾಗಿದೆ ಹಾಗೂ ಈ ಪರಂಪರೆಯನ್ನು ಹಾಕಿ ಹೋದ ಹಿರಿಯರ ಆದರ್ಶವನ್ನು ಮುಂದುವರಿಸಿಕೊಂಡು ಹೋಗುವ ದೊಡ್ಡ ಜವಾಬ್ದಾರಿಯನ್ನು ಸದಾ ಭಕ್ತಿ ಶ್ರದ್ಧೆಯಿಂದ ಮುಂದುವರಿಸಬೇಕು ಎಂದು ಸಲಹೆ ನೀಡಿದರು. ಕಡೇಚೂರ್ ಮನೆ ಭೇಟಿಯಿಂದ ನನಗೆ ಧನ್ಯತೆಯ ಭಾವ ಬಂದಿದೆ ಎಂದು ಭಾವುಕರಾಗಿ ಜೋಶಿ ನುಡಿದರು.
ಈ ಸಂದರ್ಭದಲ್ಲಿ ಮಹಾದೇವಪ್ಪ ಕಡೇಚೂರ್ ಅವರ ಹಿರಿಯ ಪುತ್ರ ಹಾಗೂ ಉದ್ಯಮಿ ವೆಂಕಟೇಶ ಕಡೇಚೂರ್ ಕುಟುಂಬದ ಪರವಾಗಿ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಅವರಿಗೆ ಶಾಲು ಹಾಗೂ ಕಡೇಚೂರ್ ಅವರ ಜೀವನ ಸಾಧನೆ ಕುರಿತ "ಅನನ್ಯ ಮಹಾದೇವ" ಕೃತಿಯನ್ನು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಬಿಜೆಪಿಯ ಜಿಲ್ಲಾಧ್ಯಕ್ಷರಾದ ಅಶೋಕ್ ಬಗಲಿ, ನಗರ ಅಧ್ಯಕ್ಷರಾದ ಚಂದು ಪಾಟೀಲ್, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರು, ಕಾಡಾ ಮಾಜಿ ಅಧ್ಯಕ್ಷರಾದ ಶರಣಪ್ಪ ತಳವಾರ್,ಮುಖಂಡರಾದ ತ್ರಿವಿಕ್ರಮ ಜೋಶಿ, ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷರಾದ ವೀರೇಂದ್ರ ಪಾಟೀಲ್ ರಾಯಕೋಡ್ , ಇಂಜಿನಿಯರ್ ದಿಲೀಪ್ ವಿಶ್ವಕರ್ಮ,
ಡಾ. ರಾಜೇಶ್ ಕಡೇಚೂರ್,ಕಲಬುರಗಿ ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಶ್ರೀಮತಿ ಪ್ರಮೀಳಾ ಎಂ.ಕೆ, ಮಹೇಶ್ ಕಡೇಚೂರ್, ದಿನೇಶ್, ಕಡೇಚೂರ್, ಅನೀಶ್ ಕಡೇಚೂರ್ ಮತ್ತಿತರರು ಇದ್ದರು.
