ವಿಶ್ವಕರ್ಮ ಜಯಂತಿ ಬ್ಯಾನರ್ ಹಾಕದಿರುವುದಕ್ಕೆ ತಹಸೀಲ್ದಾರ್ ವಿರುದ್ಧ ವಿಶ್ವಕರ್ಮ ಸಮಾಜದವರ ಆಕ್ರೋಶ

ವಿಶ್ವಕರ್ಮ ಜಯಂತಿ ಬ್ಯಾನರ್ ಹಾಕದಿರುವುದಕ್ಕೆ ತಹಸೀಲ್ದಾರ್ ವಿರುದ್ಧ ವಿಶ್ವಕರ್ಮ ಸಮಾಜದವರ ಆಕ್ರೋಶ

ವಿಶ್ವಕರ್ಮ ಜಯಂತಿ ಬ್ಯಾನರ್ ಹಾಕದಿರುವುದಕ್ಕೆ ತಹಸೀಲ್ದಾರ್ ವಿರುದ್ಧ ವಿಶ್ವಕರ್ಮ ಸಮಾಜದವರ ಆಕ್ರೋಶ

ಚಿತ್ತಾಪುರ : ತಹಸಿಲ್ ಕಾರ್ಯಲಯದಲ್ಲಿ ಮಂಗಳವಾರ ನಡೆದ ವೇದಿಕೆ ಮೇಲೆ ಕೇವಲ ಕಲ್ಯಾಣ ಕರ್ನಾಟಕ ಉತ್ಸವಕಾರ್ಯಕ್ರಮದ ಬ್ಯಾನರ್ ಮಾತ್ರ ಹಾಕಲಾಗಿದೆ. ಆದರೆ ವೇದಿಕೆ ಮೇಲೆವಿಶ್ವಕರ್ಮ ಜಯಂತಿ ಬ್ಯಾನರ್ ಹಾಕಿಲ್ಲ, ವಿಶ್ವಕರ್ಮರ ಫೋಟೊ ಇಟ್ಟಿಲ್ಲ.ವಿಶ್ವಕರ್ಮ ಜಯಂತಿ ಕುರಿತು ಆಹ್ವಾನ ಪತ್ರಗಳು ಪ್ರಕಟಿಸಿಲ್ಲ ಎಂದು.ತಹಸೀಲ್ದಾರ್ ವಿರುದ್ದ ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಪ್ರಲ್ಹಾದ್

ವಿಶ್ವಕರ್ಮ, ರವೀಂದ್ರ ವಿಶ್ವಕರ್ಮ, ಶಂಭುಲಿಂಗ ಕರದಾಳ ಆಕ್ರೋಶ ವ್ಯಕ್ತಪಡಿಸಿದರು.

ಕಲ್ಯಾಣ ಕರ್ನಾಟ ಉತ್ಸವ ಕಾರ್ಯಕ್ರಮ ನಡೆಯುತ್ತಿದ್ದಾಗ ವಿಶ್ವಕರ್ಮ ಸಮಾಜದವರನ್ನು ಕಡೆಗಡಣೆ ಮಾಡಲಾಗುತ್ತಿದೆ ಎಂದು ತಹಸೀಲ್ದಾರನ್ನು

ಸಮಾಜದವರು ಪ್ರಶ್ನಿಸಿದರು. ವೇದಿಕೆಯಲ್ಲಿ ಸಮಾಜದ ಅಧ್ಯಕ್ಷ ಹಾಗೂ ಉಪನ್ಯಾಸಕರನ್ನು ಕೂಡಿಸಿ ಕೇವಲ ಮಾತನಾಡಲು ಅವಕಾಶ ನೀಡಿದ್ದೀರಿ ಹೊರತು

ವಿಶ್ವಕರ್ಮ ಸಮಾಜದ ಬ್ಯಾನರ್, ಭಾವಚಿತ್ರ ಇಟ್ಟಲ್ಲ ಎಂದು ಟೀಕಿಸಿದರು. ನಂತರ ಕಾಳಿಕಾ ದೇವಿ ದೇವಸ್ಥಾನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇವಲ ತಹಸೀಲ್ ಕಚೇರಿಯೊಳಗೆ ವಿಶ್ವಕರ್ಮರ ಭಾವಚಿತ್ರಕ್ಕೆ ತಹಸೀಲ್ದಾರ್ ಪೂಜೆ

ಸಲ್ಲಿಸಿ ಕೈತೊಳೆದುಕೊಂಡಿದ್ದಾರೆ. ಪ್ರತಿಬಾರಿ ವೇದಿಕೆ ಹಾಕಿ ಮಾಡುತ್ತಿದ್ದವಿಶ್ವಕರ್ಮ ಜಯಂತಿ ಈ ಬಾರಿ ಮಾಡುತ್ತಿಲ್ಲ. ವಿಶ್ವಕರ್ಮ ಸಮಾಜದವರಿಗೆ ಅಧಿಕಾರಿಗಳು ಮಲತಾಯಿ ಧೋರಣೆ ಮಾಡುತ್ತಿದ್ದಾರೆ. ಅಧಿಕಾರಿಗಳ ವಿರುದ್ಧ ಉಗ್ರಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಕಾಶಿಪತ್ತಿ ಬಡಿಗೇರ್, ಮೋನಯ್ಯ ಪಂಚಾಳ, ವೀರಣ್ಣ ಶಿಲ್ಪಿ, ರವೀಂದ್ರ ವಿಶ್ವಕರ್ಮ, ಕಲ್ಯಾಣರಾವ್ ಭಕ್ತಿ, ಪ್ರಕಾಶ್ ಸುನಾರ್, ರಾಮಚಂದ್ರ ಅಲ್ಲೂರ್, ಸಂಗಣ್ಣ ವಿಶ್ವಕರ್ಮ, ಪ್ರಕಾಶ್ ಕನಸನಹಳ್ಳಿ, ದೇವಾನಂದ್ ಪಂಚಾಳ ಇದ್ದರು.