ಸಮಾನತೆಯ ಹರಿಕಾರನಿಗೆ ನಮನ: ಶಿವಾ ಅಷ್ಠಗಿ

ಸಮಾನತೆಯ ಹರಿಕಾರನಿಗೆ ನಮನ: ಶಿವಾ ಅಷ್ಠಗಿ
ಬಸವಣ್ಣನವರ 892ನೇ ಜಯಂತಿಯಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ
ಕರ್ನಾಟಕದ ಸಾಂಸ್ಕೃತಿಕ ನಾಯಕ, ಸಮಾನತೆಯ ಹರಿಕಾರ, ವಿಶ್ವಗುರು ಬಸವಣ್ಣನವರ 892ನೇ ಜಯಂತೋತ್ಸವದ ಅಂಗವಾಗಿ ಕಲಬುರಗಿ ನಗರದಲ್ಲಿರುವ ಬಸವೇಶ್ವರ ಪ್ರತಿಮೆಗೆ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾದ ವತಿಯಿಂದ ಮಾಲಾರ್ಪಣೆ ಮಾಡಲಾಯಿತು. ಈ ಕಾರ್ಯಕ್ರಮವು ಯುವ ನಾಯಕ ಶಿವ ಅಷ್ಟಗಿ ಅವರ ನೇತೃತ್ವದಲ್ಲಿ ನೇರವೇರಿದ್ದು, ಬಸವಣ್ಣನವರ ಸಂದೇಶವನ್ನು ಮುಂದಿನ ಪೀಳಿಗೆಗೆ ತಲುಪಿಸಲು ಸಂಕಲ್ಪ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಈರಣ್ಣ ಹೊನ್ನಳ್ಳಿ, ಮಲ್ಲಿಕಾರ್ಜುನ್ ಉದನೂರ್, ಜಗದೇವ ಗುತ್ತೇದಾರ್, ಯುವ ಮೋರ್ಚಾ ನಗರ ಜಿಲ್ಲಾ ಅಧ್ಯಕ್ಷ ಮಹೇಶ್ ಚವಾಣ್, ಯುವ ಮೋರ್ಚಾ ದಕ್ಷಿಣ ಮಂಡಲ ಅಧ್ಯಕ್ಷ ಅಮಿತ್ ಚಿಡಗುಂಪಿ, ಯುವ ಮುಖಂಡರಾದ ನಿಜಗುಣ ಯಲಗೌಡ, ಡಾ. ಅಭಿ ಅವರಾದಿ, ರೋಹಿತ್ ವಾರದ್, ಗಂಗರಾಮ ಬಡಿಗೇರ್ ಸೇರಿದಂತೆ ಹಲವಾರು ಕಾರ್ಯಕರ್ತರು ಹಾಗೂ ಭಕ್ತರು ಉಪಸ್ಥಿತರಿದ್ದರು.
ಬಸವಣ್ಣನವರ ತತ್ವಗಳು, ಸಮಾನತೆ, ಶ್ರಮ, ಶೀಲ, ಸತ್ಯ ಇಂದಿಗೂ ಜೀವಂತ ಈ ಕಾರ್ಯಕ್ರಮದ ಮೂಲಕ ಯುವ ಸಮುದಾಯದಲ್ಲಿ ಬಸವ ಚಿಂತನ ಮತ್ತು ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶವನ್ನೂ ಹೊಂದಲಾಗಿದೆ.