ನಾ ಕಂಡ ದೇವತೆ – ನನ್ನ ಅಮ್ಮ

ನಾ ಕಂಡ ದೇವತೆ – ನನ್ನ ಅಮ್ಮ

 ನಾ ಕಂಡ ದೇವತೆ – ನನ್ನ ಅಮ್ಮ 

ನಾ ಕಂಡ ದೇವತೆ ನನ್ನ ಅಮ್ಮ.

ಅವಳ ವಾಸ ದೇವಾಲಯದಲ್ಲಿಲ್ಲ,

ಆದರೆ ಅವಳ ಆಸನ ನನ್ನ ಮನಸಿನ ಮಂದಿರದಲ್ಲಿ.

ನನಗೆ ಅವಳ ಕೈಯ ಸ್ಪರ್ಶವೇ ಆಶೀರ್ವಾದ,

ಅವಳ ನಗುವೇ ನನ್ನ ಬೆಳಗಿನ ಸೂರ್ಯೋದಯ.

ನಾನು ಬೀಳುವಾಗ ಹಿಡಿದ ಕೈ,

ನಾನು ಅಳುವಾಗ ತೂಗಿದ ಹೃದಯ.

ಒಂಬತ್ತು ತಿಂಗಳು ಹೊತ್ತು ನನ್ನನ್ನು ಸಾಕಿದವಳು,

ತನ್ನ ಪ್ರಾಣವನ್ನೇ ಮುಡಿಪಾಗಿಸಿದವಳು.

ನನ್ನ ಹೆಜ್ಜೆ ಹೆಜ್ಜೆಗೂ ಜೋಪಾನ ಮಾಡಿದವಳು,

ನನ್ನ ನಗುವಿನಲ್ಲಿ ತನ್ನ ಜೀವನದ ಸುಖ ಕಂಡವಳು.

ತನ್ನೆಲ್ಲ ಆಸೆ-ಆಕಾಂಕ್ಷೆಗಳನ್ನು ನನಗೆ ದಾರಿಯೆರೆದವಳು…

ಇವಳೇ ನನ್ನ ಅಮ್ಮ — ನಾ ಕಂಡ ದೇವತೆ.

ಹಸಿವಾದಾಗ ತನ್ನ ಹಸಿವನ್ನು ಮರೆತು,

ನನ್ನ ಹಸಿವನ್ನು ನೀಗಿಸಿದವಳು.

ಬೇಸರವಾದಾಗ ಮಾತಾದವಳು,

ಭಯವಾದಾಗ ಧೈರ್ಯ ತುಂಬಿದವಳು,

ನನ್ನ ಬದುಕಿನ ಉದ್ದಕ್ಕೂ ಉಸಿರಾದವಳು…

ನನ್ನ ತಪ್ಪುಗಳನ್ನು ಮನ್ನಿಸುವ ಸಮುದ್ರ,

ನನ್ನ ಕನಸುಗಳಿಗೆ ಬಲ ನೀಡುವ ಗಾಳಿ.

ನಾ ಕಂಡ ಅತ್ಯದ್ಭುತ ಮೊದಲ ಸ್ನೇಹಿತೆ,

ನಾ ಕಂಡ ಶಾಶ್ವತ ದೇವತೆ — ನನ್ನ ಅಮ್ಮ.

ಅವಳ ಪ್ರೀತಿಗೆ ಅಳತೆಯಿಲ್ಲ,

ಅವಳ ತ್ಯಾಗಕ್ಕೆ ಮಿತಿಯಿಲ್ಲ.

ಈ ಜಗತ್ತು ನನಗೆ ಕೊಟ್ಟ ದೊಡ್ಡ ವರ —

ಅದು ನನ್ನ ಅಮ್ಮ. 

ಲೇಖಕಿ : ವೀಣಾ ಎ ಏನ್ 

ಆಡಗಡಿ ( ಗ್ರಾಮ )ಮಂಡಘಟ್ಟ ( ಪೋಸ್ಟ್ )ಶಿವಮೊಗ್ಗ ( ಜಿಲ್ಲೆ ಮತ್ತು ತಾಲೂಕು )