ದಕ್ಷ ಅಧಿಕಾರಿ ಲಂಚಕ್ಕೆ ಬಲಿ
ದಕ್ಷ ಅಧಿಕಾರಿ ಲಂಚಕ್ಕೆ ಬಲಿ
ಪ್ರಪಂಚದಾಗ ಲಂಚ ಹೆಚ್ಚಾಗ್ಯಾದೋ
ಸತ್ಯ ಹರಿಶ್ಚಂದ್ರನ ಕಥೆ ಅಲ್ಲ ನಿಜ ಕಾವ್ಯವೋ
ದಕ್ಷ ಅಧಿಕಾರಿಗೆ ಅನ್ಯಾಯ ಮಾಡ್ಯಾರೋ
ಪಿಎಸ್ಐ ಪೋಲಿಸ್ ಗೆ ಲಂಚ ಕೇಳ್ಯಾರೋ
ಮೂವತ್ತು ಲಕ್ಷ ಕೊಡು ಇಲ್ಲ ವರ್ಗಾವಣೆ
ಆಗು ಅಂದರೋ ಚಿಕ್ಕ ವಯಸ್ಸಿನಲ್ಲೇ
ಮಾನಸಿಕ ಹಿಂಸೆ ಪಟ್ಟಾನಲ್ಲ ಭಯ ಹುಟ್ಟಿಸಿ
ಕಿರುಕುಳ ನೀಡಿ ದುಡ್ಡು ಬೇಕೆಂದರೋ
ನ್ಯಾಯ ನೀತಿ ಧರ್ಮ ಎಲ್ಲಿ ಉಳದಾದೋ
ಪ್ರಾಮಾಣಿಕತೆ ಪ್ರಬುದ್ಧತೆ ಮಾನವಿಯತೆ ಮೌಲ್ಯ
ಮರೆತು ಅನ್ಯಾಯ ಅನೀತಿ ಅಧರ್ಮಕ್ಕೆ ನಿಂತಾರೋ
ಬಡವರ ಮಗನ ಕಣ್ಣೀರು ಒರೆಸಲು ಯಾರಿಲ್ಲೋ
ಕೀಳು ಜಾತಿ ಅಂಥ ಅವಮಾನ ಮಾಡ್ತಾರೋ
ಅದೆ ಚಿಂತಿಲಿ ರಕ್ತ ಕಾರಿ ಸಾವಿಗೆ ಶರಣಾಗ್ಯಾನೋ
ಚಿಕ್ಕ ವಯಸ್ಸಿನಲ್ಲಿ ಹೊಸ ಸಂಸಾರೋ
ಹೊಟ್ಟೆಯಲ್ಲಿನ ಕಂದಮ್ಮ ನೋಡದೆ
ಒಂಭತ್ತು ತಿಂಗಳ ಗರ್ಭಿಣಿ ಹೆಂಡತಿಗೆ
ಒಂದು ಮಾತು ಹೇಳದೆ ಹೋಗ್ಯಾನೋ
ಬಿಕ್ಕಿ ಬಿಕ್ಕಿ ಅತ್ತಾಳೋ ರಣಚಂಡಿ ಆಗ್ಯಾಳೋ
ಗಂಡನ ಕೊಲೆ ಪ್ರಕರಣ ಸಿಬಿಐಗೆ ಒಪ್ಪಸ್ಯಾಳೋ
ರಾಜಕೀಯ ನಾಯಕನ ಅಪ್ಪ ಮಗನ
ಹೆಸರು ಹೇಳಿ ಗಂಡನ ಜೀವಕ್ಕೆ ಶಾಂತಿಗಾಗಿ
ಪೋಲಿಸ್ ಕಂಪ್ಲೇಂಟ್ ಮಾಡ್ಯಾಳೋ
ಪೋಲಿಸರಿಗೆ ಅನ್ಯಾಯ ಅಂದ್ರೆ ಸಾಮಾನ್ಯರ
ಕಥೆ ಕೇಳುವವರು ಯಾರೋ
ಲಂಚಕೊರರಿಗೆ ಮರಣ ವಿಧಿಸಿರೋ
ಚಪ್ಪಲಿ ಬೂಟುಗಳ ಮಾಲೆ ಹಾಕಿ ಕತ್ತೆ ಮೇಲೆ
ಮೆರವಣಿಗೆ ಮಾಡಿ ಜೀವಾವಧಿ ಶಿಕ್ಷೆ ವಿಧಿಸಿರೋ
ಇಂದಿನ ಕಾಲದಲ್ಲಿ ಲಂಚ ಹೆಚ್ಯಾಗ್ಯಾದೋ
ದುಡ್ಡಿಲ್ಲದಿದ್ದರೆ ಬೆಲೆಯಿಲ್ಲದೆ ಅವಹೇಳನ
ಮಾಡಿ ಚುಚ್ಚಿ ಚುಚ್ಚಿ ಸಾಯಿಸತಾರೋ
ಜಾಣರಿದ್ದರು ದಡ್ಡ ಅಂತ ಪಟ್ಟ ಕಟ್ಟಿ ಬಿಡತ್ತಾರೋ
ತಮಗೆ ಬೇಕಾದವರಿಗೆ ನೌಕರಿ ಕೊಟ್ಟು ಲಂಚ ಎತ್ತಾರೋ
ಸುಮ್ಮನೆ ಮಂಗ್ಯಾನ ಹಾಗೆ ಮಂದಿ ಬಾಯಿ ಒರಸ್ಯಾರೋ
ಎಲ್ಲರಿಗೂ ಸ್ಯಾಜೋಗಿ ಆಗಿ ಸುಮ್ಮನೆ ಇರುತ್ತಾರೋ
ಎಷ್ಟು ದಿನ ಅಂತ ಮೆರಿತಾರೋ ಒಂದು ದಿನ
ವಾಸ್ತವ ಸ್ಥಿತಿ ಅರ್ಥ ಮಾಡಿಕೊಳ್ಳಬೇಕೋ
ಶ್ರೀ ಗುರು ಶಿವ ಶಕ್ತಿ ಬಸವಯ್ಯ ಅನ್ನಬೇಕೋ
ಡಾ.ಶೀಲಾದೇವಿ ಎಸ್.ಬಿರಾದಾರ.ರುದ್ರವಾಡಿ