ಒಣಜಂಬ ಕವನ

ಶೀರ್ಷಿಕೆ: ಒಣಜಂಬ
ಮನಸ್ಸಿಗೆ ಎಷ್ಟು ನೋವು ಕೊಡುವೆ
ಪ್ರೀತಿಯ ಭಾಷೆ ನಿನಗೆ ಅರಿವಿಲ್ಲವೆ
ಗಂಡೆಂಬ ದರ್ಪದಿ ಅಟ್ಟಹಾಸ ಮೆರೆಯುತ್ತಿರುವೆ
ಒಣಜಂಬ ತೋರುತ ನನ್ನ ಪ್ರೀತಿ ಕಳೆದುಕೊಳ್ಳುವೆ
ನಾ ನಿನ್ನ ನಂಬಿ ಭ್ರಮೆಯಲ್ಲಿ ಮುಳುಗಿದೆ
ಮಾನವೀಯ ಗುಣ ನಿನ್ನಲ್ಲಿ ಮರೆಯಾಗಿದೆ
ಬೇಸರದಿ ನೆನೆದು ನನ್ನಿ ಮನಸು ಕಂಗಾಲಾಗಿದೆ
ನಿನ್ನ ರೋಷವ ಸ್ತ್ರೀಗೆ ತೋರಿಸದೆ
ನಿನ್ನಾತ್ಮಕ್ಕೆ ಪರಿಚಯಿಸು ಮೊಂಡುತನವ ನಶಿಸು
ಅಹಂ ತೊರೆದು ನಿನ್ನಾತ್ಮ ಸಾಕ್ಷಿಗೆ ಪ್ರಶ್ನಿಸು
ಮೌಲ್ಯತನದಿ ನಿನ್ನ ಹೃದಯಕ್ಕೆ ಉತ್ತರಿಸು
ಕಣ್ಣಿಗೆ ಕಾಣದೆಯಿದ್ದರೂ ಅರಿಯಬಲ್ಲದು ಮನಸು
ಕೋಪ ಹತೋಟಿಯಲ್ಲಿದ್ದರೆ ಬಾಳು ನಂದನವನ ಇಲ್ಲದಿರೆ ಮುಳ್ಳಾಗಿ ಚುಚ್ಚುತ್ತೆ ಪ್ರತಿದಿನ
ರೋಷವ ತೋರಿ ಅಂಕೆಗೆ ತರುವುದು ಹುಚ್ಚುತನ
ನನ್ನ ಮೇಲೆ ನಿಸ್ವಾರ್ಥ ಪ್ರೀತಿಯಿಲ್ಲದ ದಿನ
ಬದುಕಲಿ ನಾನೆಂಬ ಅಹಂಕಾರದಿ ಹೂವಂತ
ಹೃದಯ ಹಿಂಡಿ ಹಿಪ್ಪೆ ಮಾಡುತ
ಅಸಮಾನತೆಯಲ್ಲಿ ನಲುಗಿದ ಮನದ ತುಳಿತ
ಮನುಜ ಬದುಕಿನಲ್ಲಿ ಸಹನೆಯಿರಬೇಕು ಅನವರತ
ರಚನೆ: ಬಂತನಾಳ ಶೋಭಾರಾಣಿ ಕಲಬುರ್ಗಿ