ಸ್ವಾಭಿಮಾನದ ಸೌಧ.
ಸ್ವಾಭಿಮಾನದ ಸೌಧ.
ಬೆಚ್ಚನೆಯ ಮಡಿಲಲಿ
ಬಿತ್ತಿದಳು ಒಡಲಲಿ
ಸ್ವಾಭಿಮಾನದ ಬೀಜ
ಮಮತೆಯ ತಾಯಿ ಸಹಜ
ಹರಿಯ ಬಿಡದಿರು ಮನವ ಇಚ್ಛೆ ಬಂದಂತೆ
ಮಾಡುತಿರು ಮನದಲ್ಲಿ
ಸರಿತಪ್ಪುಗಳ ತುಲನೆ
ಕಟ್ಟಿದೆನು ಸ್ವಾಭಿಮಾನದ ಸೌಧ ಮನದೂಗಿಸಿ
ಬಂದುದನು ಎದುರಿಸುತ
ಹಿಗ್ಗದಲೆ ಕುಗ್ಗದಲೆ
ಎಳೆಯುತಾ ಬಾಳ ಬಂಡಿ
ನಕ್ಕು ನಗಿಸುತ
ಬಿಕ್ಕಳಿಸುವರಿಗೆ ಭುಜ ತಟ್ಟುತ
ಸ್ವಚ್ಛ ಮನವಿರುತಿರೆ ಬಂಗಾರದರಮನೆ
ಇರುವ ಭಾಗ್ಯವ ನೆನೆದು ಹರುಷಬಡುತಲಿ ಎಲ್ಲಾ
ಚೊಕ್ಕ ಸಂಸಾರದಲಿ ಆಡಂಬರದ ಗೊಡವಿಯಿಲ್ಲಾ
ಒಲವಿಗೆ ಮಿಗಿಲಾದ ಸಿರಿವಂತಿಕೆ ಇಲ್ಲಾ
ಕರವೊಡ್ಡದೆ ಭರವಸೆಯ ಬೆಳಕು ನೀಡುವ ಜೀವನ ಸ್ವಾಭಿಮಾನದ ಬದುಕು ಒಂದೊಂದು ಇಟ್ಟಿಗೆಯಿಂದ ಮೇಲೇರುತಿದೆ ತಾನೇ.
ಶ್ರೀ ಮತಿ ಜಯಶ್ರೀ ಜೋಷಿ ವಿಜಯಪುರ (ಹನುಮಸಾಗರ)