ಸಾಂಸ್ಕೃತಿಕ ನಾಯಕ ಬಸವಣ್ಣ

ಸಾಂಸ್ಕೃತಿಕ ನಾಯಕ ಬಸವಣ್ಣ

ಸಾಂಸ್ಕೃತಿಕ ನಾಯಕ ಬಸವಣ್ಣ,  ಕವಿತೆ 

ನೀನಂದು ಬೆಳಗಿಸಿದ ಮಾನವೀಯತೆಯ ದೀಪ 

ಶತಶತಮಾನಗಳು ಉರುಳಿದರೂ ಪ್ರಜ್ವಲಿಸುತ್ತಿದೆ 

ಕಳೆದು ಮೇಲು-ಕೀಳು ಮತ್ತೆ ಜಾತಿ ಭೇದ ಪಾಪ

ನೀನಾದೆ ಸಮಾನತೆಯ ಹರಿಕಾರ ಹಾಕಿ ಭದ್ರ ಬುನಾದಿ

ಎನಗಿಂತ ಕಿರಿಯರಿಲ್ಲ.. ಎಂದು ಸರಳತೆ ಮೆರೆದು

ಎಲ್ಲರನ್ನು ಅಪ್ಪಿಕೊಂಡೆ, ಸರ್ವರಿಗೂ ಬದುಕುವ ಹಕ್ಕಿದೆ 

ಎಂದು ನಮಗೆ ತೋರಿದೆ ಸುಗಮ ಹಾದಿ

ಎನ್ನ ಕಾಲೇ ಕಂಬ ದೇಹವೇ ದೇಗುಲ ಎಂದು ಸಾರಿ

ಮೂಢನಂಬಿಕೆಗಳಿಗೆ ಹೋಗಲಾಡಿಸಿ

ಅಂಗೈಯಲ್ಲಿ ಲಿಂಗವಿಟ್ಟು 

ಆಚಾರವೇ ಸ್ವರ್ಗವೆಂದು ಮಾಡಿದೆ ಜಯಭೇರಿ

ದಯವೇ ಧರ್ಮದ ಮೂಲವೆಂದು 

ಧರ್ಮ ಸಂಸ್ಕೃತಿಗಳನ್ನು ಎತ್ತಿ ಹಿಡಿದು 

ಎಲ್ಲರನ್ನು ನಮ್ಮವರೆಂದು ಅಪ್ಪಿಕೊಂಡೆ

ವಚನಗಳ ಬೆಳಕಿನಲ್ಲಿ ಸರ್ವರನ್ನು ನಡೆಸಿದೆ

ಮನುಜ ಧರ್ಮದ ಕ್ರಾಂತಿಯನ್ನು ಮಾಡಿ 

ಮಹಿಳೆಯರನ್ನು ಉದ್ದರಿಸಿದೆ 

ಶಿವಶರಣರ ಸಮ್ಮಿಲನದಲ್ಲಿ 

ಅನುಭವ ಮಂಟಪ ಸ್ಥಾಪಿಸಿ

ಲೋಕದ ಮೊಟ್ಟ ಮೊದಲನೇ ಪಾರ್ಲಿಮೆಂಟ್ ಕ್ಕೆ 

ನಾಂದಿ ಹಾಡಿದ ಕೀರ್ತಿ ನಿನಗೆ 

ಯುಗಾವತಾರಿ ಓ ಬಸವಣ್ಣ

ಲೋಕವಿರುವರೆಗೂ ನಿನ್ನ ತತ್ವಗಳು ನಿತ್ಯ ನೂತನ

ನೀನು ತೋರಿದ ದಾರಿಯಲ್ಲಿ

ನಾವೆಲ್ಲ ಹೆಜ್ಜೆ ಇಟ್ಟು ನಡೆಯುವೆವು ಎಕೆಂದರೆ

ಬಸವಣ್ಣ ನೀನೇ ನಾಡಿನ ಸಾಂಸ್ಕೃತಿಕ ನಾಯಕ.

-ಡಾ.ಎಂ.ಜಿ.ದೇಶಪಾಂಡೆ

ಸಾಹಿತಿಗಳು ಬೀದರ