ವಚನಗಳು ಸಾರ್ವಕಾಲಿಕ ಸತ್ಯ: ಬಿ ಎಲ್ ಸಂತೋಷ

ವಚನಗಳು ಸಾರ್ವಕಾಲಿಕ ಸತ್ಯ: ಬಿ ಎಲ್ ಸಂತೋಷ

ವಚನಗಳು ಸಾರ್ವಕಾಲಿಕ ಸತ್ಯ: ಬಿ ಎಲ್ ಸಂತೋಷ

ಕಲಬುರಗಿ: ಶರಣರ ವಚನಗಳು ಸಾರ್ವಕಾಲಿಕ ಸತ್ಯವಾಗಿವೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ಹೇಳಿದ್ದಾರೆ. 

ಪ್ರಜ್ಞಾ ಪ್ರವಾಹ, ಶರಣಬಸವ ವಿಶ್ವವಿದ್ಯಾಲಯ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಇವುಗಳ ಸಂಯುಕ್ತಾಶ್ರಯದಲ್ಲಿ ಲಿಂ.ಪೂಜ್ಯ ಬಸವರಾಜಪ್ಪ ಅಪ್ಪ ಸ್ಮಾರಕ ಸಭಾ ಭವನದಲ್ಲಿ ಶನಿವಾರ ಆಯೋಜಿಸಿದ್ದ ವಚನ ದರ್ಶನ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಆಶಯ ಭಾಷಣ ಮಾಡಿದ ಅವರು, ಆಚಾರ ವಿಚಾರ, ನಂಬಿಕೆಗಳಲ್ಲಿ ಸಾಮ್ಯತೆ ಇರದಿರಬಹುದು, ಆದರೆ ಇತರರನ್ನು ಹಿಯಾಳಿಸಬಾರದು ಎಂದು ಇದನ್ನು ವಿಶ್ವ ಗುರು ಬಸವಣ್ಣನವರು ಕಳಬೇಡ ಕೊಲಬೇಡ , ಹುಸಿಯ ನುಡಿಯಲು ಬೇಡ, ತನ್ನ ಬಣ್ಣಿಸಬೇಡ ಅನ್ಯರಿಗೆ ಅಸಹ್ಯ ಪಡಬೇಡ, ಇದಿರ ಹಳಿಯಲು ಬೇಡ ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ ಇದೇ ಕೂಡಲಸಂಗನ ಒಲಿಸುವ ಪರಿ ಎಂದು ೧೨ ನೇ ಶತಮಾನದಲ್ಲಿ ಹೇಳಿದ್ದಾರೆ. 

ಯಾವುದೇ ವಿಚಾರ ಚರ್ಚೆ, ಆಚಾರಕ್ಕೆ ಹೊರತಾಗಿಲ್ಲ ಎಂದರು.

ಅನುಭವ ಮಂಟಪದಲ್ಲಿ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಶರಣರು ತಿಳಿಸಿದ್ದಾರೆ.

 ಮಹಾತ್ಮರು ಹಾಗೂ ಸಾಧಕರನ್ನು ಒಂದು ಗುಂಪಿನೊಂದಿಗೆ ಸಿಲುಕಿಸುವ ಪ್ರಯತ್ನ ಮೊದಲಿನಿಂದಲೂ ನಡೆಯುತ್ತಿದೆ ಎಂದು ವಿಷಾದಿಸಿದರು. 

 ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊ.‌ಬಸವರಾಜ ಡೋಣೂರ ಪ್ರಾಸ್ತಾವಿಕವಾಗಿ ಮಾತನಾಡಿ, ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ಪ್ರತಿರೋಧಗಳು ಬರುತ್ತವೆ.ಆದರೆ ಇವೆಲ್ಲವುಗಳನ್ನು ಎದುರಿಸಿ ಮುಂದೆ ಸಾಗಬೇಕು ಎಂದರು.

ಬಸವಣ್ಣನವರ ಮೇಲೆ ಯಾವುದೇ ಶಕ್ತಿ ಹಿಡಿತ ಸಾಧಿಸಲು ಸಾಧ್ಯವಿಲ್ಲ. ಬಸವಣ್ಣನವರು ಸಾಮಾಜಿಕ ಸಮಾನತೆಯ ಅನುಭಾವಿಕ ಸಾಹಿತ್ಯ ನೀಡಿದ್ದಾರೆಂದು ಪುಸ್ತಕದ ಆಶಯ ಕುರಿತು ಅಭಿಪ್ರಾಯಿಸಿದರು. 

ಅಧ್ಯಕ್ಷತೆ ವಹಿಸಿದ್ದ ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಬಸವಾದಿ ಶರಣರ ತತ್ವ ಸಿದ್ಧಾಂತಗಳ ಅಧ್ಯಯನ ನಿರಂತರವಾಗಿ ನಡೆಯಲಿ ಎಂದರು.

ಗದಗನ ಜಗದ್ಗುರು ಶ್ರೀ ಶಿವಾನಂದ ಬೃಹನ್ಮಠದ ಜಗದ್ಗುರು ಸದಾಶಿವಾನಂದ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

      --------------------------------------------------------------------

ಇಂದು ಕಲಬುರಗಿ ನಗರಕ್ಕೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ ಅವರಿಗೆ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರವರ ಪುಸ್ತಕ ನೀಡುವ ಮೂಲಕ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಡಾ ಅಂಬಾರಾಯ ಅಷ್ಠಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸಿದ್ದಾಜಿ ಪಾಟೀಲ್,ಶಿವ ಅಷ್ಠಗಿ ಇದ್ದರು