ಚೌಚೌ

ಚೌಚೌ

ಚೌಚೌ 

ಬಿಸ್ಲೇರಿ ನೀರ ಕುಡಿತಾರ

ಬಾಯಿಗೆ ಚೌಚೌ ಹಾಕಿಕೊಳ್ಳತಾರ 

ಸ್ಟಾರ್ ಗುಟ್ಕಾ ಸುರಿತಾರ

ಎಲ್ಲಿಂದರಲ್ಲಿ ಉಗಳತಾರ

ನಾನ ಸರದಾರ ಅನ್ನತಾರ//

ಹೊಳಿ ಬಾವಿ ನೀರ ಕುಡಿದ 

ಹಣ್ಣ ಹಂಪಲ ತಿಂದರ 

ಏನ ದಾಡಿ ಆಗತೈತಿ ಇವಕ 

ಕಡದ ಮಜ್ಜಿಗಿ ಕುಡಿ ಅಂದ್ರ ಒಲ್ಲ ಚಂದ್ರ//

ಬಿಸಿ ರೊಟ್ಟಿ ಬಿಟ್ಟ ತಿಂತಾವ ಹೊಟ್ಟ 

ರಾಗಿ ಅಂಬ್ಲಿ ಬ್ಯಾಡ ಕಟ್ಯಾವ ಎದಿ ಗೂಡ 

ರೋಗಿಯಾಗಿ ಸಲೈನ್ ಬಾಟಲ್ ಬೇಕ

ಶಾಕ್ ಹೊಡಿಸಿಕೊಂಡ ಕಾಗಿ

ಗೂಗಿಯಂಗ ಕಮರಿ ಹೋಗತಾವ/

ಎಳಿನೀರ ಕುಡಿಯಂದ್ರ 

ಪ್ಯಾಕೆಟ್ ಬೆನ್ ಹತ್ತತಾವ 

ಕಳ್ಳ ಸುಟಗೊಂಡ ಮಸನದ ದಾರಿ ಹಿಡಿತಾವ 

ಚಟ್ಟ ಹತ್ತೊ ಚಟಗಳ ದಾಸ ಆಗ್ಯಾವ 

ಹಾದಿ ಬಿಟ್ಟ ದಿಕ್ಕ ತಪ್ಪಿ ತಿರುಗತಾವ//

ಹೆಂಡಿರ ಮಕ್ಕಳ ಚಿಂತೆ ಇಲ್ಲ 

ಅಪ್ಪ ಅವ್ವನ ಗೊಡವಿ ಇಲ್ಲ 

ಕ್ಯಾನ್ಸರ್ ಕೆಮ್ಮು ಕರದ ಕರದ 

ಕ್ಯಾರ ಹಾಕೊಂಡ ಹಾಳಾಗಿ ಹೋಗತಾವ

ಮಾನ ಮರ್ಯಾದಿ ಗಾಳಿಗೆ ತೂರಿ ಬಿಟ್ಟಾವ//

ದುಡದದ್ದೆಲ್ಲಾ ದಂಡ ಮಾಡಿ 

ಹೇಳಿದ್ದ ಕೇಳೊವ ಅಲ್ಲ ಬಾಳ ಮಂಡ 

ಹಾಳಾಗೋ ದಾರಿ ಹಿಡಿದ ಕೆಟ್ಟ ಹೋಗ್ಯಾವ 

ಹಗಲ ಕಂಡ ಬಾವಿಗೆ ಬಿದ್ದೇವ ಅಂತಾವ

ಬೀದಿ ಹೆಣ ಆಗಿ ದಿಕ್ಕಿಲ್ಲದಂಗ ಸತ್ತ ಹೋಗತಾವ//

ಡಾ ಅನ್ನಪೂರ್ಣ ಹಿರೇಮಠ