ಮಕ್ಕಳಿಗೆ ಕನ್ನಡ ಕಲಿಸುವುದು ಮುಖ್ಯ - ಮಡಿವಾಳಪ್ಪ ಪಾಟೀಲ

ಮಕ್ಕಳಿಗೆ ಕನ್ನಡ ಕಲಿಸುವುದು ಮುಖ್ಯ - ಮಡಿವಾಳಪ್ಪ ಪಾಟೀಲ

ಮಕ್ಕಳಿಗೆ ಕನ್ನಡ ಕಲಿಸುವುದು ಮುಖ್ಯ - ಮಡಿವಾಳಪ್ಪ ಪಾಟೀಲ

ಶಹಪುರ : ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆಯ ಜೊತೆಗೆ ಕನ್ನಡ ಭಾಷೆಯು ಕೂಡ ಕಲಿಸುವುದು ಬಹಳ ಮುಖ್ಯವಾಗಿದೆ ಎಂದು ಕನ್ನಡ ಉಪನ್ಯಾಸಕ ಮಡಿವಾಳಪ್ಪ ಪಾಟೀಲ್ ಹೇಳಿದರು.

ತಾಲೂಕಿನ ಸೈದಾಪುರ ಗ್ರಾಮದ ಯುನೈಟೆಡ್ ಪಬ್ಲಿಕ್ ಶಾಲೆಯಲ್ಲಿ ಕರ್ನಾಟಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಇತ್ತೀಚಿಗೆ ಹಮ್ಮಿಕೊಂಡಿರುವ *ಕನ್ನಡ ಕಲರವ* ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡುತ್ತಾ ಮಾತನಾಡಿದರು.

ಬದುಕಿಗಾಗಿ ಇಂಗ್ಲೀಷ್ ಮುಖ್ಯ ಆದರೆ ಸ್ವಾಭಿಮಾನಕ್ಕಾಗಿ ಕನ್ನಡ ಕಲಿಯಲೇಬೇಕು,ಯಾಕೆಂದರೆ ಕನ್ನಡಕ್ಕೆ ತನ್ನದೇ ಆದ ಸ್ಥಾನಮಾನ ಹೊಂದಿದೆ ಹಾಗೂ ಒಂದು ವಿಶೇಷ ಶಕ್ತಿ ಇದೆ ಎಂದು ಹೇಳಿದರು.

ಪತ್ರಕರ್ತ ಪ್ರಕಾಶ್ ದೊರೆ ಮುಡಬೋಳ ಮಾತನಾಡಿ, ಆಂಗ್ಲಶಾಲಾ ವಿದ್ಯಾರ್ಥಿಗಳಿಗೆ ಕನ್ನಡ ಆಸಕ್ತಿ ಹೆಚ್ಚಿಸುವ ದೃಷ್ಟಿಯಿಂದ ಈ ಶಾಲೆ ಆಯ್ಕೆ ಮಾಡಿಕೊಂಡು ಕನ್ನಡ ಸಾಹಿತ್ಯ,ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ ವಾದದ್ದು ಎಂದು ಬಣ್ಣಿಸಿದರು.

ಭೀ.ಗುಡಿ ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶರಣಬಸವ ಪೊಲೀಸ್ ಬಿರಾದಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು,ಈ ಸಮಾರಂಭದ ವೇದಿಕೆಯ ಮೇಲೆ ಮುಖ್ಯ ಗುರುಗಳಾದ ಶಿವಲಿಂಗಮ್ಮ ಪೊ. ಬಿರಾದರ್,ಯಶೋಧ ಕಲಬುರ್ಗಿ, ಚೌಡಮ್ಮ ಕನ್ಯಾಕುಳ್ಳೂರ,ಭಾಗ್ಯಶ್ರೀ, ಶಿಲ್ಪಾ ಕೇರಳ,ನಾಗಮ್ಮ,ಭಾರತಿ ಇನ್ನಿತರರು ಉಪಸ್ಥಿತರಿದ್ದರು.