ಒಂದು ರಾಷ್ಟ್ರ- ಒಂದು ಮೀಸಲಾತಿ ಜಾರಿಗೆ ಪ್ರಧಾನ ಮಂತ್ರಿಗಳಿಗೆ ಸಂಜಯ್ ರಾಠೋಡ್ ಒತ್ತಾಯ

ಒಂದು ರಾಷ್ಟ್ರ- ಒಂದು ಮೀಸಲಾತಿ ಜಾರಿಗೆ ಪ್ರಧಾನ ಮಂತ್ರಿಗಳಿಗೆ ಸಂಜಯ್ ರಾಠೋಡ್ ಒತ್ತಾಯ

ಒಂದು ರಾಷ್ಟ್ರ- ಒಂದು ಮೀಸಲಾತಿ ಜಾರಿಗೆ ಪ್ರಧಾನ ಮಂತ್ರಿಗಳಿಗೆ ಸಂಜಯ್ ರಾಠೋಡ್ ಒತ್ತಾಯ

ನವದೆಹಲಿಯ ಶ್ರೀ ಸಂತ ಸೇವಾಲಾಲ್ ಜಯಂತಿಯಲ್ಲಿ ಹೇಳಿಕೆ

ನವದೆಹಲಿ : ಒಂದು ರಾಷ್ಟ್ರ ಒಂದು ಚುನಾವಣೆ ಮಾದರಿಯಲ್ಲಿ ಒಂದು ರಾಷ್ಟ್ರ - ಒಂದು ಮೀಸಲಾತಿ ನೀತಿಯನ್ನು ಜಾರಿ ಮಾಡಿ ಪ್ರಧಾನ ಮಂತ್ರಿಗಳು ಬಂಜಾರ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಮಹಾರಾಷ್ಟ್ರ ಸರಕಾರದ ಜಲ ಮತ್ತು ಮಣ್ಣು ಸಂರಕ್ಷಣಾ ಖಾತೆಯ ಸಚಿವರಾದ ಸಂಜಯ್ ರಾಥೋಡ್ ಹೇಳಿದರು. 

   ನವದೆಹಲಿಯಲ್ಲಿ ಫೆಬ್ರವರಿ 28ರಂದು ಡಾಕ್ಟರ್ ಅಂಬೇಡ್ಕರ್ ಇಂಟರ್ನ್ಯಾಷನಲ್ ಸೆಂಟರ್ ನಲ್ಲಿ ನಡೆದ ಸಂತ ಶ್ರೀ ಸೇವಾಲಾಲ್ ಜಯಂತಿ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಷ್ಟ್ರದಲ್ಲಿರುವ ಸುಮಾರು 15 ಕೋಟಿಯಷ್ಟು ಬಂಜಾರ ಸಮುದಾಯದ ಜನರಿಗೆ ಮಹಾರಾಷ್ಟ್ರ, ರಾಜಸ್ಥಾನ ಮಧ್ಯಪ್ರದೇಶ ಗಳಲ್ಲಿ ಹಿಂದುಳಿದ ವರ್ಗ ತೆಲಂಗಾಣದಲ್ಲಿ ಪರಿಶಿಷ್ಟ ವರ್ಗ, ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಹೀಗೆ ಗುರುತಿಸಲಾಗುತ್ತಿದ್ದು ಇಡೀ ದೇಶದಲ್ಲಿ ಒಂದೇ ಭಾಷೆ ಒಂದೇ ಸಂಸ್ಕೃತಿ ಪರಂಪರೆಯನ್ನು ಅನುಸರಿಸಿಕೊಂಡು ಬರುತ್ತಿರುವವರಿಗೆ ನ್ಯಾಯ ನೀಡಲು ರಾಷ್ಟ್ರದಲ್ಲಿ ಸಮಾನ ನೀತಿಯನ್ನು ಜಾರಿಗೊಳಿಸುವುದು ಅತ್ಯಂತ ಅಗತ್ಯವಾಗಿದೆ. ಕೇಂದ್ರ ಸರ್ಕಾರವು ಕೂಡಲೇ ತಾಂಡಾ ಅಭಿವೃದ್ಧಿ ನಿಗಮವನ್ನು ರಚಿ ಸಿದರೆ ಅತ್ಯಂತ ಹಿಂದುಳಿದ ಸಮುದಾಯದವರು ವಾಸಿಸುವ ತಾಂಡಾಗಳಿಗೆ ಅಭಿವೃದ್ಧಿಯ ಹೊಸ ಸ್ಪರ್ಶವನ್ನು ನೀಡಲು ಸಾಧ್ಯವಾಗುತ್ತದೆ ಎಂದರು.

   ಲಂಬಾಣಿ ಭಾಷೆಯನ್ನು ಎಂಟನೇ ಪರೀಕ್ಷೆ ಇದಕ್ಕೆ ಸೇರಿಸುವುದು ಅತ್ಯಂತ ಅಗತ್ಯವಾಗಿದ್ದು ಶೀಘ್ರದಲ್ಲೇ ಮುಂಬೈಯಲ್ಲಿ ತಜ್ಞರನ್ನು ಕರೆಸಿ, ವಿಚಾರಗೋಷ್ಠಿ ನಡೆಸಲು ಉದ್ದೇಶಿಸಲಾಗಿದೆ. ಮಹಾರಾಷ್ಟ್ರ ಸರಕಾರವು ಬಂಜಾರ ಸಮುದಾಯಕ್ಕೆ ಮೂರು ಎಕರೆ ಜಮೀನು ಮಂಜೂರು ಮಾಡಿದ್ದು ಏ. 8 ವಿಶ್ವ ಬಂಜಾರ ದಿನದಂದು ಬಂಜಾರ ಭವನ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

     ಮಹಾರಾಷ್ಟ್ರದ ಪೌರಾಗಢದಲ್ಲಿ ಐದು ಬಾರಿ ಚುನಾವಣೆಯನ್ನು ಗೆದ್ದು ಬಂಜಾರ ಸಮುದಾಯದ ಶ್ರದ್ಧಾ ಕೇಂದ್ರದಲ್ಲಿ ಮಹಾರಾಷ್ಟ್ರ ಸರಕಾರದ 720 ಕೋಟಿ ರೂಪಾಯಿ ಅನುದಾನದೊಂದಿಗೆ ಬಂಜಾರ ಸಾಂಸ್ಕೃತಿಕ ಕೇಂದ್ರವನ್ನು ಪ್ರಧಾನಿಗಳಿಂದ ಉದ್ಘಾಟನೆ ಮಾಡಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಸಮುದಾಯದ ಅಭಿವೃದ್ಧಿಗಾಗಿ ಎಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂದು ಸಚಿವರು ಹೇಳಿದರು.