ಸಮಯ ಪಾಲನೆ ಮಾಡದ ಶಹಪುರ ತಹಶೀಲ್ ಕಚೇರಿ ಸಿಬ್ಬಂದಿ.

ಸಮಯ ಪಾಲನೆ ಮಾಡದ ಶಹಪುರ ತಹಶೀಲ್ ಕಚೇರಿ ಸಿಬ್ಬಂದಿ.

ಸಮಯ ಪಾಲನೆ ಮಾಡದ ಶಹಪುರ ತಹಶೀಲ್ ಕಚೇರಿ ಸಿಬ್ಬಂದಿ.

ಶಹಪುರ : ತಾಲೂಕಿನ ತಹಸೀಲ್ದಾರ ಕಚೇರಿಯ ಕೆಲವೊಂದು ಸಿಬ್ಬಂದಿಗಳು ಸರಿಯಾಗಿ ಸಮಯ ಪಾಲನೆ ಮಾಡುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಇದು ಶಹಪುರ ತಹಸಿಲ್ದಾರ್ ಕಚೇರಿಯ ಕೋಣೆ ಸಂಖ್ಯೆ 5 ಭೂ ಸುರಕ್ಷಾ ಅಭಿಲೇಖಾಲಯದಲ್ಲಿ ಕೈಬರಹ ಪಹಣಿ ನೀಡುವ ಸಿಬ್ಬಂದಿಗಳ ಕಥೆ ಇದು, ಸಾರ್ವಜನಿಕರೊಂದಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ,ನಿಗದಿತ ಸಮಯಕ್ಕೆ ಸರಿಯಾಗಿ ಕಚೇರಿಗೆ ಆಗಮಿಸಬೇಕೆಂಬ ಸರ್ಕಾರದ ಆದೇಶವಿದ್ದರೂ ಸರಿಯಾಗಿ ಸಮಯ ಪಾಲನೆ ಮಾಡುತ್ತಿಲ್ಲ. 

ಪದೇ ಪದೇ ಕಾಫಿ,ಟೀ,ಊಟಕ್ಕೆ ಅಂತ ಕಚೇರಿ ಬಿಟ್ಟು ಹೋಗುವುದು ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಬಂದಾಗ ವಿನಾಕಾರಣ ಸತಾಯಿಸುವುದು, ಇವರ ಚಾಳಿ ಯಾಗಿದೆ,ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಶನಿವಾರ ಮಧ್ಯಾಹ್ನ 3:50 ಆದರೂ ಕಚೇರಿಯತ್ತ ಸಿಬ್ಬಂದಿಗಳು ಸುಳಿಯಲೇ ಇಲ್ಲ,

ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಿಂದ ಬಂದಂತ ಸಾರ್ವಜನಿಕರು ಕಚೇರಿಯ ಸಿಬ್ಬಂದಿಗಳಿಗಾಗಿ ಗಂಟೆಗಟ್ಟಲೆ ಕಾಯುವಂತಾಯಿತು.ಕೂಡಲೆ ತಹಸಿಲ್ದಾರರಿಗೆ ಫೋನ್ ಮೂಲಕ ಸಂಪರ್ಕಿಸಿದರು ಪ್ರಯೋಜನಾಗಲಿಲ್ಲ.ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಾರ್ವಜನಿಕರು ಇಡಿ ಶಾಪ ಹಾಕುವಂತಾಗಿದೆ.

ಸಮಯ ಪಾಲನೆ ಮಾಡದ ಸಿಬ್ಬಂದಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮೇಲಾಧಿಕಾರಿಗಳಿಗೆ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.ಇಲ್ಲದಿದ್ದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಕೆ ನೀಡಿದ್ದಾರೆ.