ಗುರು ವಂದನೆ ಗುರುಪೂರ್ಣಿಮೆಯ ಆಚರಣೆ

ಗುರು ವಂದನೆ ಗುರುಪೂರ್ಣಿಮೆಯ ಆಚರಣೆ
ಕಮಲನಗರ:ತಾಲೂಕಿನ ಹೊಳೆಸಮುದ್ರ ಗ್ರಾಮದ ಅರಾಧ್ಯ ದೇವರಾದ ಶ್ರೀ ಸದ್ಗುರು ಹರಿನಾಥ ಮಹಾರಾಜರ ಜಾತ್ರೆಯು ಸಂಭ್ರಮದಿಂದ ಆಚರಿಸಲಾಯಿತು.
ಈ ಆಷಾಢ ಗುರುಪೂರ್ಣಿಮೆ ಜಾತ್ರೆಯು ಪ್ರತಿ ವರ್ಷದಂತೆ ಈ ವರ್ಷವೂ ಅರ್ಥಪೂರ್ಣವಾಗಿ ನೆರವೇರಿತು. ರಾಜ್ಯದ ನಾನಾ ಜಿಲ್ಲೆಗಳಿಂದ ಮಹಾರಾಷ್ಟ್ರ ಆಂಧ್ರಪ್ರದೇಶ್ ತೆಲಂಗಾಣ ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಗುರುವಾರ ಗುರು ಪೂಜಾ ಉತ್ಸವ ಕಾರ್ಯಕ್ರಮ ನಡೆಯಿತು.
ಮಠದ ಅಧ್ಯಕ್ಷ ಜ್ಞಾನೇಶ್ವರ ಪಾಟೀಲರು ಗುರು ಮತ್ತು ಶಿಷ್ಯರ ಅನೊನ್ಯ ಪ್ರೀತಿ ಪ್ರೇಮಕ್ಕೆ ಪ್ರತೀಕವಾಗಿರುವ ಜೀವಂತ ಸಂಜೀವಿನಿ ಸಮಾಧಿಯಾಗಿರುವ ಶ್ರೀ ಸದ್ಗುರು ಹರಿನಾಥ ಮಹಾರಾಜರ ಸಮಾಧಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಮಹಾ ತಪಸ್ವಿ ಸಂತ ಹರಿನಾಥ ಮಹಾರಾಜರ ಸಮಾಧಿಯು ಹೂಗಳಿಂದ ಅಲಂಕರಿಸಲಾಯಿತು. ಹಿಂದೂ ಮುಸ್ಲಿಂ ಕ್ರೈಸ್ತ ಸಿಖ್ ಇಸಾಯಿ ಹೀಗೆ ಎಲ್ಲಾ ಧರ್ಮದವರು ಪಾಲ್ಗೊಂಡಿರುತ್ತಾರೆ.ಇಲ್ಲಿ ಯಾವುದೇ ಜಾತಿ ಮತ ಪಂಥ ಗಳಿಲ್ಲ ಇದಕ್ಕೆಲ್ಲ ಹರಿನಾಥ ಮಹಾರಾಜರು ಕೈಗೊಂಡ ಪ್ರಚಾರವೇ ಸಾಕ್ಷಿ.
ಸುಭಾಂಗಿ ಮೋಹಿತ್ ಹರಿನಾಥ ಮಹಾರಾಜರ ಸಮಾಧಿಗೆ ಅಭಿಷೇಕ ಸಲ್ಲಿಸಿದರು ಸಚಿನ್ ಮೊರೆ ಹೂಗಳಿಂದ ಅಲಂಕರಿಸಿದರು.ಗುರುವಾರ ಮಂದಿರದಲ್ಲಿ ಸಾಯಂಕಾಲ ಆರು ಘಂಟೆಗೆ ಮಹಾಆರುತಿ ನೆರೆದ ಭಕ್ತರು ಸಲ್ಲಿಸಿದರು.
ನ್ಯಾನೇಶ್ವರ ಪಾಟೀಲ್ ಅನಿಲ್ ಬಿರ್ಗೆ ನಾನಾಸಾಹೇಬ ಪಾಟೀಲ್,ಗೊಪಾಳರಾವ ಪಾಟೀಲ್ಸ ಸಂಗಮೇಶ್ವರ ಎಸ್ ಮುರ್ಕೆ,ಭರತ ಕದಂ ಸಂಜು ಬೆಣ್ಣೆ ಪ್ರಭು ಬೆಣ್ಣೆ ಪ್ರದೀಪ ಪಾಟೀಲ್ ಅರ್ಚಕ ಪ್ರವೀಣ್ ಮಹಾರಾಜ್ ಇದ್ದರು.
ಗುರುಪೂರ್ಣಿಮೆಯ ಮರುದಿನ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ನಡೆಯಿತು. ಮಠದಿಂದ ಸಕಲ ವಾದ್ಯಗಳೊಂದಿಗೆ ಮೆರವಣಿಗೆ ಮೇಳದೊಂದಿಗೆ ಕಾರ್ಯಕ್ರಮ ಪ್ರಮುಖ ಬೀದಿಗಳ ಮೂಲಕ ಸಡಗರ ಸಂಭ್ರಮದಿಂದ ರಾಮಮಂದಿರಕ್ಕೆ ಬಂದು ತಲುಪುತ್ತದೆ. ಅಲ್ಲಿ ಇಂದಿನ ವಿದ್ಯಮಾನಗಳ ಕುರಿತು ಬಹಳ ವಿಶಿಷ್ಟ ರೀತಿಯಲ್ಲಿ ಭಾರುಂಡ ಕಾರ್ಯಕ್ರಮಗಳು ಜರುಗಿದವು. ಈ ಕಾರ್ಯಕ್ರಮದಲ್ಲಿ ಶಂಕರ ಪೂಜಾರಿ ತಾಜೋಧಿನ್ ಪಠಾಣ ಅಲ್ಲದೆ ನಾನಾ ರಾಜ್ಯಗಳಿಂದ ಆಗಮಿಸಿರುವ ಸೋಮನಾಥ್ ಮಾನೆಲಾದಾ, ಸವಿತಾ ಮಸ್ಕೆ ಬೊರಾಮನಿ , ತುಕಾರಾಮ ಮಾನೆ ಲಾದಾ, ಬಳಿರಾಮ್ ಡವಸೆ ಕಿಶನ್ ರಾವ್ ಬಿರಾದರ ದೊಹಾಳ,ಹನುಮಂತ ಬೀರಾದಾರ ದೊಹಾಳ,ವಾಮನರಾವ ಪೂಜಾರಿ ಉಮರಗಾ ಹೀಗೆ ತಮ್ಮ ಕಲೆಯ ಪ್ರದರ್ಶನವನ್ನು ನೀಡಿದರು. ಸುಮಾರು ಜನರು ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಸಿ ಕೊಟ್ಟರು ಈ ಮೂರು ದಿನ ಜಾತ್ರೆಗೆ ಬಂದ ಭಕ್ತರಿಗೆ ಲಹುಜಿ ಹುರುಸನಾಳ ಸುಭಾಷ್ ದನ್ನ ಭೀಮ್ ನೀಲಕಂಠರಾವ ಹಂಗರಗೆ ಇವರಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತು. ಸುಮಾರು ಜನರು ಬಾರುಂಡ ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಾನಾ ರಾಜ್ಯಗಳಿಂದ ಆಗಮಿಸಿ ತಮ್ಮ ಕಲೆಯ ಪ್ರದರ್ಶನ ನೀಡಿದರು.
ಹರಕೆ ಹೊತ್ತವರು ಸಕ್ಕರೆ ಹಂಚಿ ದರ್ಶನ್ ಪಡೆದು ಭಕ್ತರು ಪುನೀತರಾದರು.