ಮಕ್ಕಳಲ್ಲಿ ಸಾಂಸ್ಕೃತಿಕ ಪ್ರಜ್ಞೆ ಮೂಡಿಸಿ - ಭಾರತಿ ದರ್ಶನಾಪುರ
ಮಕ್ಕಳಲ್ಲಿ ಸಾಂಸ್ಕೃತಿಕ ಪ್ರಜ್ಞೆ ಮೂಡಿಸಿ - ಭಾರತಿ ದರ್ಶನಾಪುರ
ಶಹಪುರ : ಮಕ್ಕಳಿಗೆ ಮನೋರಂಜನೆಯ ಜೊತೆಗೆ ಸಾಂಸ್ಕೃತಿಕ ಪ್ರಜ್ಞೆ ಮತ್ತು ಜಾಗತಿಕ ನಾಗರಿಕರಾಗಲು ಇಂತಹ ಉತ್ಸವಗಳು ಅಗತ್ಯವಾದ ಕೌಶಲ್ಯಗಳು ಪೂರಕವಾಗಿವೆ ಎಂದು ಭಾರತಿ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ನಗರದ ಯಾದಗಿರಿ ರಸ್ತೆಯಲ್ಲಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಲೀಟ್ಲ ವಿಂಗ್ಸ್ ಫ್ರೀ ಸ್ಕೂಲ್ ನ ದ್ವಿತೀಯ ವಾರ್ಷಿಕೋತ್ಸವ ಹಾಗೂ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ನಾಡಿನ ಮಹಿಳಾ ಸಾಧಕಿಯರಿಗೆ ಕಲ್ಯಾಣ ನಾಡು ನುಡಿಸಿರಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಹಿರಿಯ ಮುಖಂಡರಾದ ಸಿದ್ಧಲಿಂಗಣ್ಣ ಆನೆಗುಂದಿ ಮಾತನಾಡಿ ಪ್ರತಿಭೆಗಳನ್ನು ಹೊರ ತರಲು ಇಂತಹ ವೇದಿಕೆಗಳು ಸೂಕ್ತ, ಇಂಥಹ ಸಮಾರಂಭದಲ್ಲಿ ಮಕ್ಕಳು ಭಾಗವಹಿಸಿ ತಮ್ಮ ಕಲೆಯನ್ನು ಅಭಿವ್ಯಕ್ತಗೊಳಿಸಿದಾಗ ಮಾತ್ರ ಅವರ ಸೃಜನಶೀಲತೆ ಜೊತೆಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿ ಅವರ ಸಮಗ್ರ ವ್ಯಕ್ತಿತ್ವ ವಿಕಾಸನಕ್ಕೆ ಸಹಕಾರಿಯಾಗುತ್ತದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಮಹಿಳಾ ಸಾಧಕಿಯರಾದ ರೇಣುಕಾ,ಚಂದ್ರಕಲಾ,ಮೀನಾಕ್ಷಿ,ಸವಿತಾ,
ಈರಮ್ಮ,ಭಾಗ್ಯಶ್ರೀ,ಸುಜಾತಾ,ಅನ್ನಪೂರ್ಣ,ಸಂಗೀತ,ಬಸಮ್ಮ,ಶ್ವೇತಾ, ಮಹಾಲಕ್ಷ್ಮಿ,ಸುಶೀಲಾ ಬಾಯಿ, ನಂದಮ್ಮ,ಉಮಾದೇವಿ ಅವರಿಗೆ "ಕಲ್ಯಾಣ ನಾಡು ನುಡಿಸಿರಿ ಪ್ರಶಸ್ತಿ" ಪ್ರದಾನ ಮಾಡಲಾಯಿತು.
ಈ ಸಮಾರಂಭದ ವೇದಿಕೆಯ ಮೇಲೆ ಖಾಸಗಿ ಶಾಲಾ ಒಕ್ಕೂಟದ ಅಧ್ಯಕ್ಷರಾದ ಆರ್.ಚನ್ನಬಸು, ಯುವ ಮುಖಂಡ ಬಸನಗೌಡ ಕಂಚಲಕವಿ,ಭೀ.ಗುಡಿ ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣಬಸವ ಪೊಲೀಸ್ ಬಿರಾದಾರ,ಜಟ್ಟೆಪ್ಪ
ಹದನೂರ,ಮುಖ್ಯ ಗುರುಗಳಾದ ವಿಜಯಲಕ್ಷ್ಮಿ ಪುರಾಣಿಕುಮಠ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶ್ರೀಶೈಲ ಹೆಗ್ಗಣದೊಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು,
ನಂತರ ಲಿಟಲ್ ವಿಂಗ್ಸ್ ಫ್ರೀ ಸ್ಕೂಲ್ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು,ಸಂಸ್ಥೆಯ ಕಾರ್ಯದರ್ಶಿ ಮಡಿವಾಳಪ್ಪ ಪಾಟೀಲ್ ಹೆಗ್ಗಣದೊಡ್ಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು,ಪಲ್ಲವಿ ನಿರೂಪಿಸಿದರು,
ನಾಜಮೀನಾ ಸ್ವಾಗತಿಸಿದರು, ಸವಿತಾ ಕಳಸದ ವಂದಿಸಿದರು. ಮಕ್ಕಳ ನೃತ್ಯ ಕಲೆಯನ್ನು ನೆರೆದಿದ್ದ ಅಪಾರ ಜನರ ಮನ ಸೊರೆಗೊಳಿಸಿದವು.
