ಸಮಸ್ಯೆಗಳು ವ್ಯಕ್ತಿಯನ್ನು ಗಟ್ಟಿಗೊಳಿಸುತ್ತವೆ, ಸವಾಲುಗಳು ಸಾಮರ್ಥ್ಯ ಬೆಳೆಸುತ್ತವೆ: ನ್ಯಾಯಮೂರ್ತಿ ಶಿವರಾಜ್ ಪಾಟೀಲ

ಸಮಸ್ಯೆಗಳು ವ್ಯಕ್ತಿಯನ್ನು ಗಟ್ಟಿಗೊಳಿಸುತ್ತವೆ, ಸವಾಲುಗಳು ಸಾಮರ್ಥ್ಯ ಬೆಳೆಸುತ್ತವೆ: ನ್ಯಾಯಮೂರ್ತಿ ಶಿವರಾಜ್ ಪಾಟೀಲ

ಸಮಸ್ಯೆಗಳು ವ್ಯಕ್ತಿಯನ್ನು ಗಟ್ಟಿಗೊಳಿಸುತ್ತವೆ, ಸವಾಲುಗಳು ಸಾಮರ್ಥ್ಯ ಬೆಳೆಸುತ್ತವೆ: ನ್ಯಾಯಮೂರ್ತಿ ಶಿವರಾಜ್ ಪಾಟೀಲ

ಕಲಬುರಗಿ : ಸಮಸ್ಯೆಗಳು ವ್ಯಕ್ತಿಯನ್ನು ಗಟ್ಟಿಗೊಳಿಸುತ್ತವೆ, ಸವಾಲುಗಳು ನಮ್ಮೊಳಗಿನ ಸಾಮರ್ಥ್ಯವನ್ನು ಬೆಳೆಸುತ್ತವೆ ಎಂದು ನಿವೃತ್ತ ನ್ಯಾಯಮೂರ್ತಿ ನಾಡೋಜ ಶಿವರಾಜ್ ಪಾಟೀಲ ಹೇಳಿದರು.

ನಗರದ ವಿಶ್ವೇಶ್ವರಯ್ಯ ಸಭಾಭವನದಲ್ಲಿ ನ್ಯಾಯಮೂರ್ತಿ ನಾಡೋಜ ಶಿವರಾಜ್ ಪಾಟೀಲ ಪ್ರತಿಷ್ಠಾನ ಹಾಗೂ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ್ ಪಾಟೀಲ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ನ್ಯಾಯಮೂರ್ತಿ ನಾಡೋಜ ಶಿವರಾಜ್ ಪಾಟೀಲ ಅವರ ಜೀವನ,ಸಾಹಿತ್ಯ ಮತ್ತು ಸಾಧನೆ ವಿಚಾರ ಸಂಕಿರಣ, “ಗಂಧವ್ರತ – ಪ್ರಬುದ್ಧಪಥ” ಕೃತಿ ಲೋಕಾರ್ಪಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಜೀವನದಲ್ಲಿ ಬಡತನ ಶಾಪವಲ್ಲ, ಅದು ಒಬ್ಬ ವ್ಯಕ್ತಿಯನ್ನು ರೂಪಿಸುವ ವರವಾಗಬಹುದು. ಪರಿಶ್ರಮ, ಪ್ರಾಮಾಣಿಕತೆ, ವಿನಯ, ಶ್ರದ್ಧೆ ಹಾಗೂ ಬದ್ಧತೆ ಇದ್ದರೆ ಯಾರಾದರೂ ಜೀವನದಲ್ಲಿ ಮುಂದಕ್ಕೆ ಬರಬಹುದು ಎಂದು ಅವರು ಹೇಳಿದರು. 

ಮಾನವೀಯ ದೃಷ್ಟಿಕೋನವನ್ನು ಹೊಂದಿಕೊಂಡು ಕಾನೂನು ಚೌಕಟ್ಟಿನೊಳಗೆ ನ್ಯಾಯ ದೊರಕಿಸುವುದು ನ್ಯಾಯಾಧೀಶರ ಮುಖ್ಯ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್, ಹಳ್ಳಿಯಿಂದ ದೆಹಲಿಯವರೆಗೆ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಶಿವರಾಜ್ ಪಾಟೀಲ ಅವರು ಅನೇಕ ಉತ್ತಮ ತೀರ್ಪುಗಳನ್ನು ನೀಡಿದ್ದಾರೆ. ಅವರ ಆದೇಶಗಳು ಇಂದಿನ ವಕೀಲರಿಗೆ ದಾರಿದೀಪವಾಗಿವೆ ಎಂದು ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ್ ಬಿಳಿಮಲೆ ಮಾತನಾಡಿ, ದೆಹಲಿಯಲ್ಲಿ ಕನ್ನಡ ಭವನ ನಿರ್ಮಾಣಕ್ಕೆ 7 ಕೋಟಿ ರೂ. ವೆಚ್ಚ ಮಾಡಿ ಕನ್ನಡಿಗರ ಅಭಿಮಾನವನ್ನು ಹೆಚ್ಚಿಸುವ ಕೆಲಸ ನಡೆದಿದೆ. ಸರೋಜಿನಿ ಮಹೇಶಿ ಅವರು ಜಾಗ ನೀಡಿದ ಹಿನ್ನೆಲೆ ಈ ಕಾರ್ಯ ಸಾಧ್ಯವಾಯಿತು ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಭಾಲ್ಕಿಯ ನಾಡೋಜ ಬಸವಲಿಂಗ ಪಟ್ಟದೇವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಹಾಭಾರತ ಮತ್ತು ರಾಮಾಯಣದ ಕಾವ್ಯ ಪರಂಪರೆಯನ್ನು ನೆನಪಿಸುವ ನೈತಿಕ ಮೌಲ್ಯಗಳ ಕುರಿತು ಅವರು ಮಾತನಾಡಿದರು.

ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ  ದೇವಯ್ಯ ಗುತ್ತೇದಾರ, ವಿಜಯ ವಾಣಿ ಸ್ಥಾನಿಕ ಸಂಪಾದಕ ಬಾಬುರಾವ್ ಯಡ್ರಾಮಿ, ಸಂಯುಕ್ತ ಕರ್ನಾಟಕ ಸ್ಥಾನಿಕ ಸಂಪಾದಕ ಪ್ರಭಾಕರ ಜೋಶಿ, ಮಹಿಪಾಲ ರೆಡ್ಡಿ ಮುನ್ನೂರ ಇವರಿಗೆ ವಿಶೇಷವಾಗಿ ಗೌರವಿಸಿ ಸನ್ಮಾನಿಸಿದರು.

ಕೃತಿ ಸಂಪಾದಕ ಕಲ್ಯಾಣರಾವ ಪಾಟೀಲ,ಚೆನ್ನಾರೆಡ್ಡ ಪಾಟೀಲ,ಸಾರಿಕಾದೇವಿ ಕಾಳಗಿ, ಡಾ. ಶರಣಬಸಪ್ಪ ಕಾಮರೆಡ್ಡಿ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಪ್ಪಾರಾವ ಅಕ್ಕೊಣಿ, ನಾಗೇಂದ್ರ ಮಸುತಿ , ಎಸ್ ಎಂ ಹಿರೇಮಠ, ಶರಣಗೌಡ ಪಾಟೀಲ ಪಾಳಾ, ಅಪ್ಪಾಸಾಹೇಬ ತೀರ್ಥೆ,ಎ ಕೆ ರಾಮೇಶ್ವರ, ಸಿ ಎಸ್ ಮಾಲಿ ಪಾಟೀಲ, ಶ್ರೀಶೈಲ ನಾಗರಾಳ,ಹಣಮಂತರಾವ್ ದೋಡ್ಡಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.