ಶಹಾಪುರದ ಬಸವರಾಜ್ ಜವಳಿಗೆ ಯು.ಪಿ.ಎಸ್.ಸಿ ಯಲ್ಲಿ 664ನೇ ರ್ಯಾಂಕ್.

ಶಹಾಪುರದ ಬಸವರಾಜ್ ಜವಳಿಗೆ ಯು.ಪಿ.ಎಸ್.ಸಿ ಯಲ್ಲಿ 664ನೇ ರ್ಯಾಂಕ್.

ಶಹಾಪುರದ ಬಸವರಾಜ್ ಜವಳಿಗೆ ಯು.ಪಿ.ಎಸ್.ಸಿ ಯಲ್ಲಿ 664ನೇ ರ್ಯಾಂಕ್.

ಶಹಾಪುರ : ಈ ಬಾರಿ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ಮೆರೆದ ಯಾದಗಿರಿ ಜಿಲ್ಲೆಯ ಶಹಾಪುರದ ನಗರದ ಬಸವರಾಜ್ ಜವಳಿ ಅವರಿಗೆ 664 ನೇ ರ್ಯಾ0ಕ್ ಪಡೆದುಕೊಂಡಿದ್ದಾನೆ.

ನೂರೆಂಟು ಸಮಸ್ಯೆ ಇದ್ದರೂ ಛಲ ಬಿಡದೆ ಓದಿ ಗೆದ್ದ ಶಹಾಪುರದ ಸಾಧಕ ಬಸವರಾಜ ಜವಳಿ ಅವರಿಗೆ ಉತ್ತಮ ಸ್ಥಾನ ಬಂದಿರುವುದು ಅಭಿನಂದನಾರ್ಹ. ಹುಟ್ಟಿದ ಊರಿಗೂ ಕಲಿಸಿದ ಗುರುಗಳಿಗೂ ಕೀರ್ತಿ ತಂದಿದ್ದಾನೆ.

ಮೂಲತಃ ಶಹಾಪುರ ಪಟ್ಟಣದ ಉದ್ಯಮಿಗಳಾದ ವಿಶ್ವನಾಥ್ ಗಿರಿಜಾ ಜವಳಿ ದಂಪತಿಗಳ ಎರಡನೇ ಮಗನಾಗಿ ಜನಿಸಿದ ಇವರು ಒಂದರಿಂದ ಏಳನೇ ತರಗತಿವರೆಗೆ ಕನ್ನಡದಲ್ಲಿ ವ್ಯಾಸಂಗ ಮಾಡಿದ್ದಾರೆ,ನಂತರದಲ್ಲಿ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ, ಸಿವಿಲ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದುಕೊಂಡು.

ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಮಾಡಿಕೊಂಡು ಕೊನೆದಾಗಿ ಮೂರನೇ ಬಾರಿಗೆ ಸಂದರ್ಶನದಲ್ಲಿ ಯುಪಿಎಸ್ಸಿಗೆ ಆಯ್ಕೆಯಾಗಿದ್ದಾರೆ. ತಾಲೂಕಿಗೆ ಮೊಟ್ಟ ಮೊದಲ ಯುಪಿಎಸ್ಸಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವುದು ನಿಜಕ್ಕೂ ಸಂತೋಷದ ಸಂಗತಿ.

ಶಹಾಪುರ ಸಾಧಕನಿಗೆ ಹಿರಿಯರಾದ ಚಂದ್ರಶೇಖರ ಸಾಹು ಆರಬೋಳ,ಸಿದ್ದಲಿಂಗಣ್ಣ ಆನೆಗುಂದಿ,ಸಿದ್ದರಾಮ ಹೊನಕಲ್, ಶಿವಣ್ಣ ಇಜೆರಿ,ಪತ್ರಕರ್ತ ಬಸವರಾಜ ಶಿಣ್ಣೂರ ಅಭಿನಂದಿಸಿ ಹರುಷ ವ್ಯಕ್ತಪಡಿಸಿದ್ದಾರೆ.