ಶೃಂಗೇರಿ: ಅರ್ಹ ವಿದ್ಯಾರ್ಥಿಗಳಿಗೆ ಜೆ.ಪಿ. ನಾರಾಯಣಸ್ವಾಮಿ ಪ್ರತಿಷ್ಠಾನದಿಂದ ಪ್ರೋತ್ಸಾಹಧನ ವಿತರಣೆ
ಶೃಂಗೇರಿ: ಅರ್ಹ ವಿದ್ಯಾರ್ಥಿಗಳಿಗೆ ಜೆ.ಪಿ. ನಾರಾಯಣಸ್ವಾಮಿ ಪ್ರತಿಷ್ಠಾನದಿಂದ ಪ್ರೋತ್ಸಾಹಧನ ವಿತರಣೆ
ಶೃಂಗೇರಿ: ಪಟ್ಟಣದ ಆರ್ಯ ಈಡಿಗರ ಸಮುದಾಯ ಭವನದಲ್ಲಿ ಶ್ರೀ ಜೆ.ಪಿ. ನಾರಾಯಣಸ್ವಾಮಿ ಪ್ರತಿಷ್ಠಾನ (ರಿ), ಬೆಂಗಳೂರು ಹಾಗೂ ಆರ್ಯ ಈಡಿಗರ ಸಂಘ (ರಿ), ಶೃಂಗೇರಿ ಇವರ ಜಂಟಿ ಆಶ್ರಯದಲ್ಲಿ 2025-26ನೇ ಸಾಲಿನ ಚಿಕ್ಕಮಗಳೂರು ಜಿಲ್ಲೆಯ ಅರ್ಹ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹಧನ ವಿತರಣಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜೆ.ಪಿ.ಎನ್ ಪ್ರತಿಷ್ಠಾನದ ಟ್ರಸ್ಟಿಗಳಾದ ಎಂ.ಆರ್. ಪೂರ್ಣೇಶ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, "ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪ್ರತಿಷ್ಠಾನವು ಸದಾ ಬೆನ್ನೆಲುಬಾಗಿ ನಿಲ್ಲಲಿದೆ" ಎಂದು ಆಶಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ಕುಸುಮ ಅಜಯ್ ಅವರು ಸಂಸ್ಥೆಯ ಸೇವಾ ವರದಿಯನ್ನು ವಾಚಿಸಿ, ಪ್ರತಿಷ್ಠಾನವು ಸಮಾಜದ ಹಿತದೃಷ್ಟಿಯಿಂದ ಹಮ್ಮಿಕೊಂಡಿರುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಜೆ.ಪಿ.ಎನ್.ಪಿ. ಕಚೇರಿ ಸಂಯೋಜಕಿಯಾದ ಕು. ಕಾಶಿಬಾಯಿ ಸಿ. ಗುತ್ತೇದಾರ್ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಪ್ರೋತ್ಸಾಹಧನ ಸ್ವೀಕರಿಸಿದ ವಿದ್ಯಾರ್ಥಿಗಳು ಪ್ರತಿಷ್ಠಾನದ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಒಟ್ಟು ರೂ. 2,35,000/- ಮೊತ್ತದ ವಿದ್ಯಾರ್ಥಿವೇತನವನ್ನು 36 ಮಂದಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶೃಂಗೇರಿ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎ.ಆರ್. ನಾರಾಯಣ ಅವರು ಮಾತನಾಡಿ, ಶಿಕ್ಷಣದ ಮಹತ್ವ ಹಾಗೂ ಸಮಾಜದ ಸಂಘಟನೆಯ ಬಗ್ಗೆ ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ರಾಮಸ್ವಾಮಿ ಹೆಗ್ತೂರು. ಸುಬ್ರಮಣ್ಯ ಗುಬ್ಬಗೋಡು. ಶಿವಕುಮಾರ್ ಗದ್ಧೆಮನೆ . ಗೋಪಾಲ ಟಿ ಎಸ್ ತೊರೊಳ್ಳಿ. ದಿನೇಶ್ ಗುಣಿತಲು. ಚಿನ್ನಯ್ಯ ಕೊಂಡಗೇರಿ. ವಿಷ್ಣುಮೂರ್ತಿ ಹಣಗಲು. ಲಕ್ಷ್ಮಣ್ ನಾಯ್ಕ್ ಬೋಳುಗೋಡು ಪೋಷಕರು, ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.
ಪ್ರಕಾಶ್ ಜಿ ಪಿ ನಿರೂಪಿಸಿದರು. ಕು. ಅಕ್ಷರಿ ಪ್ರಾರ್ಥನೆಗೀತೆ ಹಾಡಿದರು.ನಂದೀಶ್ ಕೆ ಜಿ ಸ್ವಾಗತಿಸಿ ವಂದಿಸಿದರು.
ವರದಿ ಕಾಶಿಬಾಯಿ ಸಿ ಗುತ್ತೇದಾರ್
JPNP office coordinator
