ಹೆಲ್ಮೆಟ್ ಕಡ್ಡಾಯ: ಮರುಪರಿಶೀಲನೆಗೆ ಕರವೇ ಒತ್ತಾಯ

ಹೆಲ್ಮೆಟ್ ಕಡ್ಡಾಯ: ಮರುಪರಿಶೀಲನೆಗೆ ಕರವೇ ಒತ್ತಾಯ

ಹೆಲ್ಮೆಟ್ ಕಡ್ಡಾಯ: ಮರುಪರಿಶೀಲನೆಗೆ ಕರವೇ ಒತ್ತಾಯ

ಕಲಬುರಗಿ: ಸುಪ್ರೀಂಕೋರ್ಟ್ ನಿರ್ದೇಶನದಂತೆ ರಾಜ್ಯದಲ್ಲಿ ಹೆಲ್ಮೆಟ್ ಕಡ್ಡಾಯ ಕಾನೂನನ್ನು ಜಾರಿ ಮಾಡಲಾಗಿದೆ. ರಾಜ್ಯದ ಎಲ್ಲಾ ನಗರಗಳಲ್ಲಿ ಕಡ್ಡಾಯವಾಗಿ ರಾಜ್ಯ ಸರಕಾರ ಕಾನೂನು ಜಾರಿ ಮಾಡುವ ಆದೇಶವನ್ನು ಮರು ಪರಿಶಿಲಿಸಬೇಕು ಕರವೇ(ಪ್ರವೀಣ ಶೆಟ್ಟಿ) ಬಣದ ಕಲಬುರಗಿ ತಾಲೂಕಾ ಉಪಾಧ್ಯಕ್ಷರಾದ ಸುನೀಲ ಡಿ ಮಾಲಿಪಾಟೀಲ ಅವರು ಆಗ್ರಹಿಸಿದ್ದಾರೆ.

          ‌ ‌‌‌‌‌‌ ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಈ ಕಾನೂನನ್ನು ಕಡ್ಡಾಯಗೊಳಿಸುವುದರಿಂದ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚಾಗಲಿದೆ. ಬಿಸಿಲು ಹೆಚ್ಚಿರುವ ಪ್ರದೇಶದಲ್ಲಿ ಹೆಲ್ಮೆಟ್ ಕಡ್ಡಾಯದಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಇವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

       ಅಷ್ಟೇ ಅಲ್ಲದೇ ಈ ಕಾನೂನು ಹೆಚ್ಚು ಮಹಾನಗರ ಪಾಲಿಕೆಗಳಂತಹ ಪ್ರದೇಶ, ಅತಿಹೆಚ್ಚು ಜನಸಂದಣಿ ಇರುವ,ಹೆಚ್ಚು ಅಪಘಾತವಾಗುವ ಪ್ರದೇಶಗಳಲ್ಲಿ ಮಾಡುವುದು ಸೂಕ್ತವಾಗಿದೆ. ಕೇವಲ ಬೈಕ್ ಸವಾರರು ಮಾತ್ರವಲ್ಲದೇ ಹಿಂದೆ ಕುಳಿತವರು ಹೆಲ್ಮೆಟ ಹಾಕಿಕೊಳ್ಳಲು ಸೂಚಿಸಿರುವುದು ಹೆಚ್ಚಿನ ತ್ರಾಸದಾಯಕವಾಗಿದೆ. ಇದರಿಂದ ಮಹಿಳೆಯರಿಗೆ,ಮಕ್ಕಳಿಗೆ,ಹಿರಿಯರಿಗೆ ಅದು ಕಿರಿಕಿರಿಯಾಗಿದೆ. ಹೆಲ್ಮೆಟ್ ಕಡ್ಡಾಯ ಕಾನೂನನ್ನು ಮರು ಪರಿಶೀಲಿಸಬೇಕು ಎಂದು ಆಗ್ರಹಿಸಿದರು.

 ಈ ಕಾನೂನು ಜಾರಿ ಮಾಡಬೇಕಾದರೆ ನಗರದ ವಿಸ್ತರಣೆ, ಅದರ ವ್ಯಾಪ್ತಿಗಳು, ಜನಸಂಖ್ಯೆ, ದ್ವಿಚಕ್ರ ವಾಹನಗಳು ರಸ್ತೆಯ ಮೇಲೆ ಓಡಿಸುವಾಗ ಕನಿಷ್ಠ ವೇಗ, ಅಲ್ಲಿಯ ವಾತಾವರಣ, ಆ ಪ್ರದೇಶದ ಆರ್ಥಿಕ ವ್ಯವಹಾರಗಳನ್ನು ಹಾಗೂ ರಸ್ತೆಗಳನ್ನು ಗಮನಿಸಿ ಜಾರಿಮಾಡಲು ಮುಂದಾಗಬೇಕಿದೆ. ರಾಜ್ಯ ಸರಕಾರ ಈ ಕಾನೂನು ಬಗ್ಗೆ ತಜ್ಞರ ಸಮಿತಿಯನ್ನು ರಚಿಸಿ ಅವರ ವರದಿ, ಸಂಘಟನೆಗಳ, ರಾಜಕೀಯ ಪಕ್ಷಗಳ ಮತ್ತು ಜನರ ಅಭಿಪ್ರಾಯವನ್ನು ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದರು.