ಶಿಕ್ಷಕ ಮಿತ್ರ ಪ್ಯಾನಲನಿಂದ ನಾಮಪತ್ರ ಸಲ್ಲಿಕೆ ಸಾವಿತ್ರಿ.ಬಿ. ಪಾಟೀಲ

ಶಿಕ್ಷಕ ಮಿತ್ರ ಪ್ಯಾನಲಿನ ಮುಖಂಡರಾದ ಶ್ರೀಮತಿ ಸಾವಿತ್ರಿ ಬಿ. ಪಾಟೀಲ ಅವರ ಮುಖಂಡತ್ವದಲ್ಲಿ ಚುನಾವಣೆ ನಾಮಪತ್ರ ಸಲ್ಲಿಕೆ
ಕಲಬುರಗಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕು ಶಾಖೆ ಶಹಬಾದ್ ಕಾರ್ಯಕಾರಣ ಸಮಿತಿಯ ಚುನಾವಣೆಗೆ ಶಿಕ್ಷಕ ಮಿತ್ರ ಪ್ಯಾನಲ್ ಚುನಾವಣೆಗೆ ಸಾವಿತ್ರಿ ಬಿ. ಪಾಟೀಲ ಅವರ ನೇತೃತ್ವದಲ್ಲಿ ಸಂತೋಷ್ ಸಲಗರ್, ಅಬ್ದುಲ್ ಸಲೀಂ, ಕವಿತಾ ಸಾಲೋಕಿ, ನಾಲ್ಕು ಜನ ಶಿಕ್ಷಕರು 2024 ರಿಂದ 2029ನೇ ಅವಧಿಗಾಗಿ ನಾಮಪತ್ರವನ್ನು ಚುನಾವಣೆ ಅಧಿಕಾರಿಗಳಾದ ರಮೇಶ್ ಹಾಜಪ್ಪ ಬಿಳಾರ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಬೆಂಬಲಿತ ಶಿಕ್ಷಕರು ಭಾಗಿಯಾಗಿದ್ದರು.