ಶ್ರೀ ಸಿದ್ದಪ್ಪ ತಳ್ಳಳ್ಳಿ ಸೇಡಂ ಅವರಿಗೆ ದಾನ ಚಿಂತಾಮಣಿ ಸದ್ಭಾವನ ರಾಜ್ಯ ಪ್ರಶಸ್ತಿ
ಶ್ರೀ ಸಿದ್ದಪ್ಪ ತಳ್ಳಳ್ಳಿ ಸೇಡಂ ಅವರಿಗೆ ದಾನ ಚಿಂತಾಮಣಿ ಸದ್ಭಾವನ ರಾಜ್ಯ ಪ್ರಶಸ್ತಿ
ಕಲಬುರಗಿ: ಮರುಳ ಸಿದ್ದೇಶ್ವರ ಸೇವಾಶ್ರಮ ಶ್ರೀ ಗುರು ಹಾಲಸ್ವಾಮಿ ಮಠ, ಶ್ರೀ ಕ್ಷೇತ್ರ ಮುತ್ತಿಗಿಯ ಐದನೇ ಜಾತ್ರಾ ಮಹೋತ್ಸವದ ಮುಳ್ಳುಗದ್ದಗೆ ಅಂಗವಾಗಿ, ಕಲಾ ಭಾರತಿ ಸಂಘ (ರಿ), ಹಿರೇಹೆಗ್ಡಾಳ್, ಕೂಡ್ಲಗಿ ತಾಲೂಕು, ವಿಜಯನಗರ ಜಿಲ್ಲೆಯವರು ನೀಡುವ ದಾನ ಚಿಂತಾಮಣಿ ಸದ್ಭಾವನ ರಾಜ್ಯ ಪ್ರಶಸ್ತಿಗೆ ಸೇಡಂನ ಶ್ರೀ ಸಿದ್ದಪ್ಪ ತಳ್ಳಳ್ಳಿ, ಅಧ್ಯಕ್ಷರು – ಕವಿ ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನ (ರಿ) ಅವರು ಆಯ್ಕೆಯಾಗಿದ್ದಾರೆ.
ಸಮಾಜ ಸೇವೆ, ದಾನಧರ್ಮ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಅನನ್ಯ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ದಿನಾಂಕ 29-01-2026ರಂದು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಮುತ್ತಿಗಿ ಗ್ರಾಮದಲ್ಲಿ ಜರುಗಲಿರುವ ಸಂಘದ ಏಳನೇ ಸಾಂಸ್ಕೃತಿಕ ಕೋಲೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ಈ ವಿಷಯವನ್ನು ಕಲಾ ಭಾರತಿ ಸಂಘ (ರಿ), ಹಿರೇಹೆಗ್ಡಾಳ್, ಕೂಡ್ಲಗಿ ತಾಲೂಕು, ವಿಜಯನಗರ ಜಿಲ್ಲೆಯ ಅಧ್ಯಕ್ಷರಾದ ಬಣಕಾರ ಮೂಗಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
