ಅಂಧರ ಬಾಳು ಬೆಳಗಿದ ಪಂಡಿತ್ ಪುಟ್ಟರಾಜ ಗವಾಯಿಗಳು-ಡಾ.ಬಸವರಾಜ ಇಜೇರಿ

ಅಂಧರ ಬಾಳು ಬೆಳಗಿದ ಪಂಡಿತ್ ಪುಟ್ಟರಾಜ ಗವಾಯಿಗಳು-ಡಾ.ಬಸವರಾಜ ಇಜೇರಿ

ಅಂಧರ ಬಾಳು ಬೆಳಗಿದ ಪಂಡಿತ್ ಪುಟ್ಟರಾಜ ಗವಾಯಿಗಳು-ಡಾ.ಬಸವರಾಜ ಇಜೇರಿ

ಶಹಪುರ : ನಾಡಿನ ಪ್ರಖ್ಯಾತ ಸಂಗೀತ ಲೋಕದ ದಿಗ್ಗಜರು ಹಾಗೂ ಮಾಂತ್ರಿಕರಾದ ಡಾ.ಪಂಡಿತ್ ಪುಟ್ಟರಾಜ ಗವಾಯಿಗಳು ಈ ಭಾಗದ ಲಕ್ಷಾಂತರ ಅಂಧ ಕಲಾವಿದರಿಗೆ ಸಂಗೀತ ವಿದ್ಯೆಯನ್ನು ಧಾರೆ ಎರೆಯುವುದರ ಮುಖಾಂತರ ಅವರ ಬಾಳಿಗೆ ಬೆಳಕಾಗಿದ್ದಾರೆ ಎಂದು ಡಾ.ಬಸವರಾಜ ಇಜೇರಿ ಹೇಳಿದರು. 

ನಗರದ ಕುಂಬಾರಗೇರಿ ಹಿರೇಮಠದಲ್ಲಿ ಶ್ರೀ ಗುರು ಕೃಪಾ ಸಂಗೀತ ಸಂಸ್ಕೃತಿಕ ಕಲಾ ಸಂಸ್ಥೆ ಶಹಾಪುರ ಹಾಗೂ ಯಡಿಯೂರು ಸಿರಿ ಸಂಗೀತ ಕಲಾ ಸಂಸ್ಥೆ ಯಾದಗಿರಿ ಇವರ ಸಹಯೋಗದಲ್ಲಿ ಗಾನಯೋಗಿ ಡಾ.ಪಂಡಿತ್ ಪುಟ್ಟರಾಜ ಗವಾಯಿಗಳವರ 111ನೇ ಜನ್ಮದಿನದ ಅಂಗವಾಗಿ ಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರತಿಯೊಬ್ಬ ಕಲಾವಿದರಿಗೂ ಪುಟ್ಟರಾಜ ಗವಾಯಿಗಳು ಸ್ಫೂರ್ತಿ ಎಂದು ನುಡಿದರು.

ಮುಖ್ಯ ಅತಿಥಿಗಳಾದ ಶಿವರಾಜ್ ದೇಶಮುಖ್ ಮಾತನಾಡಿ ಪುಟ್ಟರಾಜ ಗವಾಯಿಗಳು ಕನ್ನಡ, ಹಿಂದಿ ಮತ್ತು ಸಂಸ್ಕೃತ ಭಾಷೆಯಲ್ಲಿ ಪಂಡಿತರಾಗಿದ್ದರು,ಸಾಕಷ್ಟು ಪುರಾಣ,ಪ್ರವಚನ,ನಾಟಕಗಳನ್ನು ರಚಿಸುವುದರ ಮುಖಾಂತರ ಸಾಹಿತ್ಯ ಕ್ಷೇತ್ರಕ್ಕೂ ಅವರ ಕೊಡುಗೆ ಅಪಾರವಿದೆ ಅಲ್ಲದೆ ಜೀವನದ ಕೊನೆಯ ಉಸಿರು ಇರುವವರೆಗೂ ಸಹಸ್ರ ಸಹಸ್ರ ಕಲಾವಿದರಿಗೆ ತಮ್ಮ ವಿದ್ಯೆಯನ್ನು ನೀಡುವುದರ ಮುಖಾಂತರ ಎಲ್ಲರ ಮನಸೊಳಗೆ ನೆಲೆಯೂರಿದ್ದಾರೆ ಎಂದು ನುಡಿದರು.

ಸಮಾರಂಭದ ವೇದಿಕೆಯ ಮೇಲೆ, ಅಯ್ಯನಗೌಡ ಆಲೂರು, ಸಂಗನಗೌಡ ಪಾಟೀಲ್,ಉಮೇಶ್ ಗುಡುಗುಂಟಿ,ಹಾಗೂ ಇತರರು ಉಪಸ್ಥಿತರಿದ್ದರು,

ಬೆಂಗಳೂರಿನ ಖ್ಯಾತ ಹಿಂದುಸ್ತಾನಿ ಕಲಾವಿದರಾದ,ಮಹೇಶ ಕುಮಾರ ಹೆರೂರ ಅವರು ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸಿದರು, ಆಕಾಶವಾಣಿ ಕಲಾವಿದ ನಾಗರಾಜ ಹುಣಸಿಗಿಡ,ಬಸವರಾಜ ವಿಶ್ವಕರ್ಮ ಶಹಪುರ,ತಬಲಾ ಹಾಗೂ ಹಾರ್ಮೋನಿಯಂ ಸಾಥ್ ಒದಗಿಸಿದರು,ಸಂಸ್ಥೆಯ ಅಧ್ಯಕ್ಷ ಮಲ್ಲಯ್ಯ ಹಿರೇಮಠ ಪ್ರಸ್ತಾವಿಕ ನುಡಿಗಳನ್ನಾಡಿದರು,ವೀರೇಶ್ ಉಳ್ಳಿ ನಿರೂಪಿಸಿ ಸ್ವಾಗತಿಸಿ, ವಂದಿಸಿದರು.