ಶಿವನಗೌಡ ನಾಯಕ ಕ್ಷಮೆಯಾಚನೆಗೆ ಆಗ್ರಹ
ಶಿವನಗೌಡ ನಾಯಕ ಕ್ಷಮೆಯಾಚನೆಗೆ ಆಗ್ರಹ
ಕಲಬುರಗಿ: ದಲಿತ ಸಚಿವನಿಂದಲೇ ದಲಿತರಿಗೆ ಅನ್ಯಾಯವಾಗಿದೆ ಎಂದು ಸಚಿವ ಮಹದೇವಪ್ಪ ವಿರುದ್ಧ ಮಾಜಿ ಸಚಿವ ಶಿವನಗೌಡ ನಾಯಕ್ ನಾಲಿಗೆ ಹರಿಬಿಟ್ಟಿದ್ದಾರೆ ಕೂಡಲೇ ಮಾಜಿ ಸಚಿವ ಶಿವನಗೌಡ ನಾಯಕ ಅವರು ಸಚಿವ ಎಷ್ ಸಿ.ಮಹಾದೇವಪ್ಪ ಬಳಿ ಕ್ಷಮೆಯಾಚಿಸಬೇಕು ಎಂದು ಅಖಿಲ ಕರ್ನಾಟಕ ಡಾ.ಎಚ್.ಸಿ ಮಹಾದೇವಪ್ಪ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಓಂಕಾರ ವಠಾರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಭಾನುವಾರ ಚಿತ್ರದುರ್ಗದಲ್ಲಿ ಬಿಜೆಪಿಯ ಎಸ್ಸಿ-ಎಸ್ಟಿ ನಾಯಕರ ಬೃಹತ್ ಜನಾಂದೋಲನದಲ್ಲಿ ಮಾಜಿ ಸಚಿವ ಶಿವನಗೌಡ ನಾಯಕ್ ಅವರು ತಮ್ಮ ಭಾಷಣದಲ್ಲಿ ನಾಲಿಗೆಯನ್ನು ಹರಿಬಿಟ್ಟಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿದ್ದಾರೆ.
ಸಚಿವ ಹೆಚ್.ಸಿ ಮಹದೇವಪ್ಪ ವಿರುದ್ಧ ಏಕ ವಚನದಲ್ಲೇ ಮಾತನಾಡಿದ ಅವರು ದಲಿತ ಸಚಿವ ಮಹಾದೇವಪ್ಪ ಅವರಿಂದಲೇ ನಮಗೆ ಅನ್ಯಾಯವಾಗಿದೆ. ಅವರು ಸಿಕ್ಕರೆ ಕಪಾಳಕ್ಕೆ ಹೊಡಿಬೇಕು ಅನಿಸುತ್ತೆ ಎಂದು ಅವರು ಹೇಳಿಕೆಯಿಂದ ಇಡೀ ಅವರ ಅಭಿಮಾನಿಗಳ ಬಳಗಕ್ಕೆ ನೋವುಂಟಾಗಿದೆ.ಕೂಡಲೇ ಶಿವನಗೌಡ ಅವರು ಇಡೀ ರಾಜ್ಯಾದ್ಯಂತ ಸಚಿವ ಡಾ.ಎಚ್.ಸಿ ಮಹಾದೇಪ್ಪ ಅವರ ಅಭಿಮಾನಿಗಳ ಬಳಿ ಕ್ಷಮೆ ಕೇಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
