ಸಿದ್ನೇಕೋಪ್ಪ ಭಕ್ತರಿಂದ ಕೋಡಿಕೊಪ್ಪ ಹಠಯೋಗಿ ಹುಚ್ಚೀರಪ್ಪಜ್ಜನ ಮಠಕ್ಕೆ ಕಟ್ಟಿಗೆ ತರುವ ಸಂಪ್ರದಾಯ
ಸಿದ್ನೇಕೋಪ್ಪ ಭಕ್ತರಿಂದ ಕೋಡಿಕೊಪ್ಪ ಹಠಯೋಗಿ ಹುಚ್ಚೀರಪ್ಪಜ್ಜನ ಮಠಕ್ಕೆ ಕಟ್ಟಿಗೆ ತರುವ ಸಂಪ್ರದಾಯ
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ಲ ಪಟ್ಟಣದ ಆರಾಧ್ಯ ದೇವರಾದ ಹಠಯೋಗಿ ಶ್ರೀ ಹುಚ್ಚೀರಪ್ಪಜ್ಜನ ಜಾತ್ರಾ ಮಹೋತ್ಸವ ದಿನಾಂಕ 28-01-2026 ರಂದು ಜರುಗಲಿದ್ದು, ಪ್ರತಿ ವರ್ಷ ಕೊಪ್ಪಳ ಜಿಲ್ಲಾ, ಕುಕನೂರು ತಾಲೂಕು ಗ್ರಾಮದ ಸಿದ್ನೇಕೊಪ್ಪದ ಭಕ್ತರು ಅಮಾವಾಸ್ಯೆಯ ದಿನ ಹಠಯೋಗಿ ಶ್ರೀ ಹುಚ್ಚೀರಪ್ಪಜ್ಜನ ಜಾತ್ರಾ ಗೆ ಕಟ್ಟಿಗೆ ತರುವ ಸಂಪ್ರದಾಯವನ್ನು ಹಿಂದಿನ ಹಿರಿಯಯರ ಕಾಲದಿಂದಲೂ ಇಂದಿನ ವರೆಗೂ ನಡೆದುಕೊಂಡು ಬಂದ ಪದ್ಧತಿಯನ್ನು ಅನುಸರಿಸಿ ಪ್ರತಿ ವರ್ಷ ಅಮಾವಾಸ್ಯೆಯ ದಿನವೇ ಕಟ್ಟಿಗೆ ತೆಗೆದುಕೊಂಡು ಅಜ್ಜನ ಆಶಿರ್ವಾದಕ್ಕೆ ಪಾತ್ರರಾಗುತ್ತಾರೆ, ನರೇಗಲ್ಲದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹಠಯೋಗಿ ಹುಚ್ಚೀರಪ್ಪಜ್ಜನ ಮಠಕ್ಕೆ ತಲುಪುತ್ತಾರೆ, ನರೇಗಲ್ಲ ಪಟ್ಟಣದ ಕಟ್ಟಿ ಬಸವೇಶ್ವರ ಓಣಿಯವರು ಬರುವ ಭಕ್ತಾದಿಗಳಿಗೆ ಉಪಹಾರ ವ್ಯವಸ್ಥೆಯನ್ನು ಮಾಡಿ ಅಜ್ಜನ ಕೃಪೆಗೆ ಪಾತ್ರರಾದರು.
*ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ*
