ರಸ್ತಾಪುರ ವಿ.ಎಸ್.ಎಸ್.ಎನ್ ಅಧ್ಯಕ್ಷರಿಗೆ ಸನ್ಮಾನ.

ರಸ್ತಾಪುರ ವಿ.ಎಸ್.ಎಸ್.ಎನ್ ಅಧ್ಯಕ್ಷರಿಗೆ ಸನ್ಮಾನ.
ಶಹಾಪುರ : ತಾಲೂಕಿನ ರಸ್ತಾಪುರ ಗ್ರಾಮದ ವಿ.ಎಸ್.ಎಸ್.ಎನ್ ಅಧ್ಯಕ್ಷ ಶರಬಣ್ಣ ಸಾಹು ರಸ್ತಾಪುರ ಇವರಿಗೆ ಸಗರ ಗ್ರಾಮದ ಗೆಳೆಯರ ಬಳಗದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶರಬಣ್ಣ ಸಾಹು ರಸ್ತಾಪುರ ವಿ.ಎಸ್.ಎಸ್.ಎನ್ ಅಧ್ಯಕ್ಷ ಸ್ಥಾನವು ಜನಸೇವೆಗೆ ದೊರೆತ ಅವಕಾಶವಾಗಿದ್ದು, ಆದ್ದರಿಂದ ಮಹತ್ತರ ಜವಾಬ್ದಾರಿ ನನ್ನ ಮೇಲಿದೆ,ಈ ಸಂಘದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಯುವ ಮುಖಂಡರಾದ ವಾಸುದೇವ್ ವಠಾರ,ನಿವೃತ್ತ ಶಿಕ್ಷಕ ಬೂದೆಪ್ಪ ಉಳ್ಳಿ,ಬಸವರಾಜ ಯಾಳಗಿ, ಮಹಾಂತೇಶ್ ಗುಗ್ಗರಿ, ಸಿದ್ದಯ್ಯ ಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.