ಕೆ,ವಿ, ಎಸ್ ಆರ್ ಪ್ರೌಢಶಾಲೆ ಗದುಗಿನಲ್ಲಿ ಜರುಗಿದ ವಾರ್ಷಿಕ ಕ್ರಿಡಾಕೂಟ
ಕೆ,ವಿ, ಎಸ್ ಆರ್ ಪ್ರೌಢಶಾಲೆ ಗದುಗಿನಲ್ಲಿ ಜರುಗಿದ ವಾರ್ಷಿಕ ಕ್ರಿಡಾಕೂಟ
ಗದಗ 20:-ಕ್ರೀಡೆ ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ. ಸದೃಢ ಮಕ್ಕಳಿಂದ ಭವ್ಯಭಾರತದ ನಿರ್ಮಾಣ ಸಾಧ್ಯ ಎಂದು ಗದಗ ಕನಕದಾಸ ಶಿಕ್ಷಣ ಸಮೀತಿ ಮುಖ್ಯಸ್ಥರು ಹಾಗೂ ಗದಗ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಶಕುಂತಲಾ ಬಿ ದಂಡಿನ ನುಡಿದರು
ಇವರು ಇಂದು ಕೆ ವಿ ಎಸ್ ಆರ್ ಪ್ರೌಢಶಾಲೆ ಗದಗದಲ್ಲಿ ಜರುಗಿದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಯೋಧರು ಮತ್ತು ಇದೇ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳಾದ ಶ್ರೀ ಶ್ರೀಶೈಲಪ್ಪ ಬಿ ತೊಮ್ಮರಮಟ್ಟಿಯವರು ಹಾಗೂ ಸಂಗಯ್ಯ ಕ ಹಿರೇಮಠರವರು ಗೌರವ ಸನ್ಮಾನ ಸ್ವೀಕರಿಸಿ ಮಾತನಾಡುತ್ತ ತಮ್ಮ ಹಳೆಯ ದಿನಗಳ ನೆನಪಿಸಿಕೊಂಡು ಮಕ್ಕಳಿಗೆ ಇಂದು ಗುಣಾತ್ಮಕ ಶಿಕ್ಷಣದೊಂದಿಗೆ ಮೌಲ್ಯ ಮತ್ತು ಕ್ರೀಡಾ ಶಿಕ್ಷಣ ಅವಶ್ಯ ಎನ್ನುತ್ತಾ ಸದೃಢ ಭಾರತಕ್ಕೆ ಸದೃಢ ಮಕ್ಕಳ ನಿರ್ಮಾಣ ಇಂತ ಶಾಲೆಗಳಲ್ಲಿ ಮಾತ್ರ ಸಾಧ್ಯ ಎಂದು ಮಕ್ಕಳಿಗೆ ಮೆಚ್ಚುಗೆಯ ನುಡಿಗಳಲ್ಲಿ ದೇಶಪ್ರೇಮದ ಭಾವ ತುಂಬಿ ನುಡಿದರು.
ಇದೆ ಸಂದರ್ಭದಲ್ಲಿ ಮಕ್ಕಳಿಂದ ಪಥಸಂಚಲನ. ಕ್ರೀಡಾಜ್ಯೋತಿ ಆಗಮನ. ಕ್ರೀಡಾ ಮನೋಭಾವ ತುಂಬುವ ಸೆಲ್ಫಿ ಸ್ಟಾಂಡ್ ಅನಾವರಣ ಗಣ್ಯಮಾನ್ಯರ ಆಗಮನದ ಚಿತ್ರಣ ನೋಡುಗರ ಮನ ಸೆಳೆಯುವಂತಿತ್ತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಕೇತ ದಂಡಿನ ಮುಖ್ಯ ಶಿಕ್ಷಕಿ ಪಿ ಟಿ ಬಿಸನಳ್ಳಿ. ಪ್ರೊ ದೊಡ್ಡಮನಿ. ರಾಮು ಸರ್ ಶಿಕ್ಷಕರಾದ ಎಂ ಕೆ ಬೇವಿನಕಟ್ಟಿ. ಎಸ್ ಎಸ್ ಮುಧೋಳ. ದೀಪಾ ಎಂ. ದೈಹಿಕ ಶಿಕ್ಷಕ ಎಸ್ ಕೆ ಬಸಾಪುರ ಶಾಲಾ ಸಿಬ್ಬಂದಿ ಬಿ ಎನ್ ಕಮ್ಮಾರ. ಆಯ್ ಎಂ ಕುರ್ತಕೋಟಿ ಉಪಸ್ಥಿತರಿದ್ದರು. ಶ್ರೀ ಎಂ ಕೆ ಬೇವಿನಕಟ್ಟಿ ಶಿಕ್ಷಕರು ಕಾರ್ಯಕ್ರಮ ನಿರ್ವಹಿಸಿದರು
ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ
