ಶ್ರೀದ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ

ಶ್ರೀದ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ

ಶ್ರೀದ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ

ಯಾದಗಿರಿ : ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ 5252ನೇ ಶ್ರೀ ಕೃಷ್ಣ ಜನ್ಮಾಷ್ಠಮಿ ಮತ್ತು ನಂದೋತ್ಸವ ಕಾರ್ಯಕ್ರಮ ನಿಮಿತ್ಯ ಇಸ್ಕಾನ್ ಸಂಸ್ಥೆ ಹಾಗೂ ಶ್ರೀದ ಆಸ್ಪತ್ರೆ ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು.ಈ ಶಿಬಿರದಲ್ಲಿ ದೀರ್ಘಕಾಲದ ಮೊಣಕಾಲು ನೋವು, ಚರ್ಮ ರೋಗಗಳು, ಕೂದಲಿನ ಸಮಸ್ಯೆಗಳು ಮುಂತಾದ ರೋಗಗಳಿಗೆ ಉಚಿತ ತಪಾಸಣೆ ಮಾಡಿ, ಉಚಿತವಾಗಿ ಆಯುರ್ವೇದಿಕ್ ಔಷಧಿಯನ್ನು ರೋಗಿಗಳಿಗೆ ವಿತರಿಸಲಾಯಿತು 

ಈ ಸಂದರ್ಭದಲ್ಲಿ ವೈದ್ಯರಾದ ಡಾ.ಪೂಜಾ ಗಚ್ಚಿನಮನಿ ಹಾಗೂ ಇಸ್ಕಾನ್ ಸಂಸ್ಥೆಯ ಸದಸ್ಯರಾದ ಮಲ್ಲಿಕಾರ್ಜುನ ಚೈತನ್ಯ ದಾಸ್, ವೆಂಕಟೇಶ್ ಪೂಜಾರಿ, ಶರಣಬಸಪ್ಪ ಪ್ರಭು ಹೊನ್ನೇಶ್ ಪೂಜಾರಿ, ಮಹದೇವ ಗಣಪುರ, ಕಾಂಚನಾ ಮಾತಾಜಿ, ಅನಿತಾ ಮಾತಾಜಿ,ಪೂರ್ಣಿಮಾ ಮಾತಾಜಿ, ಶ್ವೇತ ಮಾತಾಜಿ, ವಿಕ್ರಮ್, ಪ್ರಭು,ಲಕನ್, ಇನ್ನಿತರರಿದ್ದರು.