ಬೀದರ ನಗರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ವೀರಶೆಟ್ಟಿ ಪಾಟೀಲ ನೇಮಕ

ಬೀದರ ನಗರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ವೀರಶೆಟ್ಟಿ ಪಾಟೀಲ ನೇಮಕ

ಬೀದರ ನಗರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ವೀರಶೆಟ್ಟಿ ಪಾಟೀಲ ನೇಮಕ

ಬಸವಕಲ್ಯಾಣ: ರಾಷ್ಟ್ರೀಯ ಬಸವ ದಳ ಬೀದರ ನಗರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ವೀರಶೆಟ್ಟಿ ಪಾಟೀಲ ಮರಕಲ್ ಅವರನ್ನು ನೇಮಕ ಮಾಡಲಾಗಿದೆ ಎಂದು ಬಸವ ಧರ್ಮ ಪೀಠಾಧ್ಯಕ್ಷ ಪೂಜ್ಯ ಸಿದ್ದರಾಮೇಶ್ವರ ಸ್ವಾಮಿಜಿಗಳು ಘೋಷಿಸಿದ್ದರು.

ನಗರದ ಬಸವ ಧರ್ಮ ಪೀಠದ ಮಾಹಾಮನೆ ಆವರಣದಲ್ಲಿ 24ನೇ ಕಲ್ಯಾಣ ಪರ್ವ ಉತ್ಸವ ನಿಮಿತ್ತ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ವೀರಶೆಟ್ಟಿ ಪಾಟೀಲರಿಗೆ ಷಟಸ್ಥಲ ಧ್ವಜ ಹಸ್ತಾಂತರಿಸಿ ಮಾತನಾಡಿದ ಪೂಜ್ಯರು ರಾಷ್ಟ್ರೀಯ ಬಸವ ದಳ ಜಿಲ್ಲೆಯಲ್ಲಿ 

ಇನ್ನಷ್ಟು ಸಂಘಟನೆ ಬಲಿಷ್ಠವಾಗಿ ಮಾಡುವ ನಿಟ್ಟಿನಲ್ಲಿ ಉಳಿದ ಪದಾಧಿಕಾರಿಗಳನ್ನು ನೇಮಕಾತಿ ಮಾಡಲಾಗುತ್ತಿದೆ.

ಎಲ್ಲಾ ಪದಾಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಹುರುಪಿನಿಂದ ಕೆಲಸವನ್ನು ಮಾಡಬೇಕೆಂದರು. 

ಈ ಸಮಯದಲ್ಲಿ ಬಸವಕುಮಾರ ಸ್ವಾಮಿಜಿಗಳು,

ಲಾವಣ್ಯ ಮಾತಾಜಿ,

ರಾಜ್ಯಾಧ್ಯಕ್ಷ ಕೆ ವೀರೇಶ, ಕಲ್ಯಾಣ ಪರ್ವ ಸ್ವಾಗತ ಸಮಿತಿ ಅಧ್ಯಕ್ಷ ಕಂಟೆಪ್ಪಾ ಗಂದಿಗುಡಿ, ಕಲ್ಯಾಣ ಪರ್ವ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಶಿವರಾಜ್ ನರಶೆಟ್ಟಿ, ಕಲ್ಯಾಣ ಪರ್ವ

ಮೆರವಣಿಗೆ ಸಮಿತಿ ಅಧ್ಯಕ್ಷ 

ರಾಜೇಂದ್ರಕುಮಾರ್ ಗಂದಗೆ, ಕಲ್ಯಾಣ ಪರ್ವ 

ವೇದಿಕೆ ಸಮಿತಿ ಅಧ್ಯಕ್ಷ ಸುರೇಶ ಸ್ವಾಮಿ, ಪ್ರಚಾರ ಸಮಿತಿ ಅಧ್ಯಕ್ಷ ಸಂಗಮೇಶ ಎನ್ ಜವಾದಿ, ಬಸವಕಲ್ಯಾಣ ತಾಲೂಕು ಅಧ್ಯಕ್ಷ ರವಿ ಕೋಳಕೂರು, ಚಿಟಗುಪ್ಪಾ ತಾಲೂಕು ಅಧ್ಯಕ್ಷ ರಾಜಶೇಖರ ದೇವಣಿ, ಔರಾದ್ ತಾಲೂಕು ಅಧ್ಯಕ್ಷ ಶಿವಶರಣಪ್ಪ ವಲ್ಲಾಪೂರೆ, ಪ್ರಚಾರ ಸಮಿತಿ ಕಾರ್ಯದರ್ಶಿ ವಿಲಾಸ ಪಾಟೀಲ, ಗಣೇಶ ಬಿರಾದಾರ್ ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ - ಸಂಗಮೇಶ ಎನ್ ಜವಾದಿ