ಕೇಂದ್ರ ಗೃಹ ಮಂತ್ರಿ ಅಮೀತ್ ಶಾ ಹೇಳಿಕೆ ಖಂಡಿಸಿ, ಜ.6 ರಂದು ನಾಗೀರಕ ಹಿತರಕ್ಷಣಾ ಸಮಿತಿ ವತಿಯಿಂದ ಚಿಂಚೋಳಿ ಬಂದ್ ಗೆ ಕರೆ
ಕೇಂದ್ರ ಗೃಹ ಮಂತ್ರಿ ಅಮೀತ್ ಶಾ ಹೇಳಿಕೆ ಖಂಡಿಸಿ,
ಜ.6 ರಂದು ನಾಗೀರಕ ಹಿತರಕ್ಷಣಾ ಸಮಿತಿ ವತಿಯಿಂದ ಚಿಂಚೋಳಿ ಬಂದ್ ಗೆ ಕರೆ
ಚಿಂಚೋಳಿ : ಕೇಂದ್ರ ಗೃಹ ಮಂತ್ರಿ ಅಮೀತ್ ಷಾ ಅವರು ತುಂಬಿದ ಸಂಸತ್ ಸದನದೊಳಗೆ ಬಹಿರಂಗವಾಗಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅಪಹ್ಯಾಸಗೊಳಿಸಿ ಅವಮಾನಿಸಲಾಗಿದೆ ಎಂದು ಖಂಡಿಸಿ, ಇದೇ ಜನವರಿ 6 ರಂದು ಚಿಂಚೋಳಿ ನಾಗರೀಕ ಹಿತರಕ್ಷಣಾ ಸಮಿತಿ ವತಿಯಿಂದ ಚಿಂಚೋಳಿ ಬಂದ್ ಕರೆ ನೀಡಲಾಗಿದೆ ಎಂದು ಸಮಿತಿ ತಿಳಿಸಿದೆ.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ವಕೀಲ ಮಾಣಿಕರಾವ ಗುಲಗುಂಜಿ, ಶರಣು ಪಾಟೀಲ ಮೋತಕಪಳ್ಳಿ, ಲಕ್ಷ್ಮಣ ಆವಂಟಿ, ಶರಣಬಸಪ್ಪ ಮಮ್ಮಶೆಟ್ಟಿ, ಅಬ್ದುಲ್ ಬಾಷಿದ್, ಗೌತಮ್ ಬೊಮ್ಮನಳ್ಳಿ, ಮಾರುತಿ ಗಂಜಗಿರಿ, ಅನೀಲ ಜಮದಾರ ರವಿ ಶಾದಿಪೂರ, ಸಂತೋಷ ಗುತ್ತೇದಾರ, ಗೋಪಾಲ ರಾಂಪೂರೆ, ರಾಮಶೆಟ್ಟಿ ಪವಾರ, ಕಾಶಿನಾಥ ಶಿಂಧೆ, ಚೇತನ ಅವರು ತಿಳಿಸಿದರು.
ದೇಶದ ಪ್ರತಿಯೊಬ್ಬ ವ್ಯಕ್ತಿಗೆ ಸಮಾನವಾದ ಶಿಕ್ಷಣವನ್ನು ಪಡೆದುಕೊಳ್ಳುವ ಹಕ್ಕು, ಜೀವಿಸುವ ಹಕ್ಕು, ಮಾತನಾಡುವ ಹಕ್ಕು ಉದ್ಯೋಗದ ಹಕ್ಕನ್ನು ಯಾವುದೇ ಜಾತಿ ಪಂಥ ನೋಡದೇ ಎಲ್ಲರನ್ನು ಸಮಾನವಾಗಿ ಕಂಡು ಸಂವಿಧಾನದಲ್ಲಿ ಅಳವಡಿಸಿ ಹಕ್ಕನ್ನು ಕಲ್ಪಿಸಿಕೊಟ್ಟಿರುವ ಮಹಾತ್ಮ ಡಾ. ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಅಪಹ್ಯಾಸಗೊಳಿಸಿ, ಅವಮಾನಿಸಿರುವ ಕೇಂದ್ರ ಗೃಹಮಂತ್ರಿ ಅಮೀತಾ ಷಾ ಅವರು ಕೂಡ ಅಂಬೇಡ್ಕರ್ ಬರೆದಿರುವ ಸಂವಿಧಾನದಿಂದಲೇ ಸ್ವಾತಂತ್ರ್ಯ ಮತ್ತು ಸೌಲತ್ತು, ಅಧಿಕಾರದ ಹಕ್ಕುಗಳನ್ನು ಪಡೆದುಕೊಂಡು ಅವರನ್ನೇ ಅಪಹ್ಯಾಸಕರವಾಗಿ ಮಾತನಾಡಿದಾರೆ. ಇದು ಪ್ರತಿಯೊಬ್ಬ ಜನಾಂಗ ಮತ್ತು ಸಮುದಾಯಗಳ ಮನಸ್ಸುಗಳಿಗೆ ನೋವುಂಟು ಮಾಡಿರುವ ಕಾರಣ ಅಮೀತ್ ಷಾ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಮತ್ತು ಕೇಂದ್ರ ಗೃಹ ಮಂತ್ರಿ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ, ಜ. 6 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಆರೋಗ್ಯ ಸೇವೆಯನ್ನು ಹೊರತುಪಡಿಸಿ, ಸಾರಿಗೆ, ಶಾಲಾ-ಕಾಲೇಜುಗಳು ಮತ್ತು ಅಂಗಡಿಗಳು ಬಂದ್ ಮಾಡುವ ಮೂಲಕ ಜಾತ್ಯತೀತ ಮತ್ತು ಪಕ್ಷಾತೀತವಾಗಿ ಎಲ್ಲಾ ಸಮುದಾಯಗಳ ಅಧ್ಯಕ್ಷರ ಮತ್ತು ವಿವಿಧ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಚಿಂಚೋಳಿ ಸಂಪೂರ್ಣ ಬಂದ್ ಗೆ ಕರೆ ನೀಡಲಾಗಿದೆ. ಈ ಬಂದ್ ಕರೆಗೆ ಚಿಂಚೋಳಿ-ಚಂದಾಪೂ ಅವಳಿ ಪಟ್ಟಣದ ವರ್ತಕರು ಸಹಕಾರ ಬೆಂಬಲ ನೀಡಬೇಕೆಂದು ಸಮಿತಿ ಮನವಿ ಮಾಡಿಕೊಂಡಿದೆ.
ಈ ಸಂದರ್ಭದಲ್ಲಿ ಭೋವಿ ಸಮಾಜದ ಮುಖಂಡ ಜಗನ್ನಾಥ ಗುತ್ತೇದಾರ, ಸುರೇಶ ಭಂಟ, ಸಚಿನ್, ತುಳಸಿರಾಮ ಪೋಳ, ಗಂಗಾಧರ ಗಡ್ಡಿಮನಿ, ಸಾಗರ ಸೇರಿದಂತೆ ಹಲವರು ಉಪಸ್ಥಿತರಿದರು.